• A
  • A
  • A
ಮಸೀದಿಯಲ್ಲಿ ಟಿಪ್ಪು ಜಯಂತಿ ಆಚರಿಸಿದ್ರೆ ನಾವೂ ಪಾಲ್ಗೊಳ್ಳುತ್ತೇವೆ: ಹಿಂದೂ ಜಾಗರಣ ವೇದಿಕೆ

ತುಮಕೂರು: ಟಿಪ್ಪು ಜಯಂತಿ ಇಸ್ಲಾಂಗೆ ವಿರುದ್ಧವಾದುದು. ಯಾವುದೇ ಮಸೀದಿಯಲ್ಲಿ ಟಿಪ್ಪು ಜಯಂತಿ ಆಚರಿಸುವ ದಾಖಲೆ ಇದ್ದರೆ ತೋರಿಸಿದರೆ ಆ ಕಾರ್ಯಕ್ರಮದಲ್ಲಿ ನಾವು ಕೂಡ ಭಾಗವಹಿಸುತ್ತೇವೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯದರ್ಶಿ ಬಸವರಾಜ್ ಹೇಳಿದ್ದಾರೆ.


ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಸಾಕಷ್ಟು ಜನ ಮುಸ್ಲಿಮರೇ ವಿರೋಧಿಸುತ್ತಿದ್ದಾರೆ. ರಾಜ್ಯದ ಯಾವುದೇ ಮುಸ್ಲಿಂ ತನ್ನ ಮನೆಯಲ್ಲಿ ಟಿಪ್ಪು ಜಯಂತಿ ಆಚರಿಸಿದ ಉದಾಹರಣೆಗಳಿಲ್ಲ ಎಂದರು. ಅದ್ರೆ ಕಳೆದ ಮೂರು ವರ್ಷಗಳಿಂದ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿದೆ. ಇಂತಹ ಜಯಂತಿ ಆಚರಣೆ ಪದ್ಧತಿಗೆ ಮುಸ್ಲಿಂ ಸಮುದಾಯದಲ್ಲಿ ಅವಕಾಶವೇ ಇಲ್ಲ ಎಂದರು.


ಮದಕರಿ ನಾಯಕನನ್ನು ಟಿಪ್ಪು ಹತ್ಯೆ ಮಾಡಿದ್ದ ಹಿನ್ನೆಲೆಯಲ್ಲಿ ನಾಯಕ ಸಮುದಾಯ ಹೋರಾಟಕ್ಕೆ ಬೆಂಬಲಿಸುತ್ತಿದೆ. ಒನಕೆ ಓಬವ್ವನನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ದಲಿತರು ಬೆಂಬಲಿಸುತ್ತಿದ್ದಾರೆ. ಕ್ರೈಸ್ತರು ಸಹ ನಮ್ಮ ಪ್ರತಿಭಟನೆಗೆ ಸಾಥ್ ನೀಡುತ್ತಿದ್ದಾರೆ. ಹೀಗಾಗಿ ಟಿಪ್ಪು ಜಯಂತಿ ವಿರೋಧಿಸಲು ಸಜ್ಜಾಗಿದ್ದೇವೆ. ಇನ್ನು, ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನವೆಂಬರ್ ನಾಳೆ (ನ. 10) ಹೋರಾಟ ನಡೆಸಲಾಗುತ್ತಿದೆ ಎಂದರು.

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎನ್ನಲಾಗುತ್ತದೆ. ಆದರೆ ಅಧಿಕೃತವಾಗಿ 1818 ರಲ್ಲಿ ದೇಶಕ್ಕೆ ಬ್ರಿಟಿಷರು ಬಂದಿದ್ದು. ಟಿಪ್ಪು 1799 ರಲ್ಲೇ ಟಿಪ್ಪು ಮೃತಪಟ್ಟ. ಹೀಗಾಗಿ ಈತ ಸ್ವಾತಂತ್ರ ಹೋರಾಟಗಾರನಲ್ಲ ಎಂಬುದಕ್ಕೆ ಸ್ಪಷ್ಟ ಪುರಾವೆಗಳು ದೊರೆಯುತ್ತವೆ ಎಂದರು.

ಇನ್ನು ಇಂಗ್ಲೆಂಡ್ ಲೈಬ್ರರಿಯಲ್ಲಿ ಫ್ರೆಂಚ್ ದೊರೆ ನೆಪೋಲಿಯನ್​ಗೆ ಟಿಪ್ಪು ಭಾರತ ದೇಶವನ್ನು ಭಾಗ ಮಾಡಿಕೊಳ್ಳುವ, ಹಾಗೇ ಒಟ್ಟಾಗಿ ದಾಳಿ ಮಾಡೋಣ ಬನ್ನಿ ಎಂದು ಉಲ್ಲೇಖಿಸಿರುವ ಪತ್ರವೊಂದು ಭೂಪಟದ ಸಮೇತ ಕಳುಹಿಸಿರುವುದು ದಾಖಲೆ ಸಮೇತ ಇಂಗ್ಲೆಂಡ್ ಲೈಬ್ರರಿಯಲ್ಲಿ ಲಭಿಸುತ್ತದೆ. ಅಷ್ಟೇ ಅಲ್ಲದೆ ಆತನ ಖಡ್ಗದ ಮೇಲೆ ಇದನ್ನು ಹತ್ಯೆಗೆ ಬಳಸುವುದು ಎಂದು ಬರೆದಿದೆ ಎಂದು ಬಸವರಾಜ್​ ಉಲ್ಲೇಖಿಸಿದರು.

ವಿದೇಶಿಗರಿಗೆ ಭಾರತದ ಮೇಲೆ ದಾಳಿ ಮಾಡಿ ಎಂದು ಪತ್ರ ಬರೆದಿರುವ ಟಿಪ್ಪು ದೇಶಪ್ರೇಮಿ ಹೇಗೆ ಆಗಲು ಸಾಧ್ಯ. ಅತನ ಜಯಂತಿ ಉಚಿತವೇ ಎಂದು ಅವರು ಪ್ರಶ್ನಿಸಿದರು.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು