• A
  • A
  • A
ಹೇಮಾವತಿ ನಾಲೆಗೆ ಡೈನಾಮೈಟ್​​ ಇಡುತ್ತೇನೆ ಎಂದ ಶಾಸಕ ಶಿವಲಿಂಗೇಗೌಡ

ತುಮಕೂರು: ಹೇಮಾವತಿ ನಾಲೆಗೆ‌ ಡೈನಾಮೈಟ್ ಇಡ್ತಿನಿ. ತಾಕತ್ತಿದ್ದರೆ ತಡೆಯಿರಿ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ.


ತುಮಕೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ರೀತಿ ಖಡಕ್ ಆಗಿ ಮಾತನಾಡಿದರು. ಅರಸೀಕೆರೆ ತಾಲೂಕಿನಲ್ಲಿ ಒಂದಿಂಚು ಮಳೆಯಾಗಿಲ್ಲ. ನಮ್ಮ ತಾಲೂಕಿನ ಕೆರೆಗಳು ತುಂಬುತ್ತಿಲ್ಲ. ಲಿಫ್ಟ್ ಇರಿಗೇಷನ್ ಯಾಕೆ ಬೇಕಿದೆ. ಹೇಮಾವತಿ ಜಲಾಶಯದಿಂದ ಪೈಪ್​ಲೈನ್ ಮೂಲಕ ಅರಸಿಕೆರೆಗೆ ನೀರು ಹರಿಸಲಾಗುತ್ತಿದೆ. ಆದ್ರೆ ತಿಪಟೂರು ಗಡಿಯಲ್ಲಿ ಪೈಪ್ ಒಡೆಯಲಾಗುತ್ತಿದೆ. ಹೀಗೆ ಆದ್ರೆ ನಾಲೆಗೆ ಡೈನಾಮೈಟ್ ಇಡ್ತಿನಿ. ಅದೇನ್ ಮಾಡ್ಕೊಳ್ತಿರೋ ಮಾಡ್ಕೋಳಿ ಎಂದು ಸಭೆಯಲ್ಲಿ ಹಾಜರಿದ್ದ ತಿಪಟೂರು ಶಾಸಕ ಬಿ.ಸಿ.ನಾಗೇಶ್ ವಿರುದ್ಧ ಗುಡುಗಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಿಪಟೂರು ಶಾಸಕ ನಾಗೇಶ್, ಕಳೆದ ಎರಡು ತಿಂಗಳಿನಿಂದ ಯಾವದೇ ಪೈಪ್​ಗಳನ್ನು ಒಡೆದಿಲ್ಲ. ಈ ಹಿಂದೆ ನಡೆದಿರಬಹುದು ಎಂದರು. ಸಭೆಯಲ್ಲಿ ಸಚಿವರಾದ ರೇವಣ್ಣ, ಎಸ್.ಆರ್.ಶ್ರೀನಿವಾಸ್, ಸಿ.ಎಸ್.ಪುಟ್ಟರಾಜು ಮತ್ತು ತುಮಕೂರು, ಹಾಸನ ಜಿಲ್ಲೆಯ ಶಾಸಕರು ಭಾಗವಹಿಸಿದ್ದರು.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು