• A
  • A
  • A
ಬಲಿಗಾಗಿ ಕಾದು ಕುಳಿತಿವೆ ರಾಮನಗರದ ಕೆರೆಗಳು!

ರಾಮನಗರ: ಬೊಂಬೆ ನಗರಿ ಚನ್ನಪಟ್ಟಣ ತಾಲೂಕಿನ ಹಲವು ಕೆರೆಗಳ ಮೇಲೆ ಸಂಚರಿಸುವ ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಸ್ಪಲ್ಪ ಎಚ್ಚರ ತಪ್ಪಿದ್ರೆ ಸಾಕು ದುರಂತ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಈ ರಸ್ತೆಗಳ ಇಕ್ಕೆಲದಲ್ಲಿ ಕೆರೆ- ಹಳ್ಳ ಹಾಗೂ ಆಳವಾದ ಕಂದಕಗಳಿದ್ದು, ತಡೆಗೋಡೆಯಂತೂ ಇಲ್ಲವೇ ಇಲ್ಲ.


ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಉಂಡಬತ್ತಿಕೆರೆ ದುರಂತ ಇನ್ನು ಜನಸಮಾನ್ಯರಲ್ಲಿಅಚ್ಚಳಿಯದಂತೆ ಉಳಿದಿರುವ ಘೋರ ದುರಂತ. ಮದುವೆ ದಿಬ್ಬಣ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಕೆರೆಗೆ ಉರುಳಿದ ಬಸ್​ನಲ್ಲಿ ಹಲವು ಮಂದಿ ಮೃತಪಟ್ಟ ಸುದ್ದಿ ಮಾತ್ರ ಇನ್ನು ಅಲ್ಲಿಯ ಜನ ಮರೆತಿಲ್ಲ.
ಇಂತಹ ದುರಂತಗಳು ಪದೇ ಪದೆ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಎಚ್ಚರಿಕೆ ವಹಿಸದೇ, ಇಂತಹ ದುರಂತಕ್ಕೆ ಆಹ್ವಾನ ನೀಡುತ್ತಿದೆ.ಹೌದು, ಚನ್ನಪಟ್ಟಣ ತಾಲೂಕಿನ ಹೊಂಗನೂರು, ತಿಟ್ಟಮಾರನಹಳ್ಳಿ, ಕೋಡಂಬಳ್ಳಿ, ಸುಳ್ಳೇರಿ ಹೀಗೆ ಹಲವು ಗ್ರಾಮದಲ್ಲಿರುವ ಕೆರೆಗಳ ಮೇಲಿನ ರಸ್ತೆಗಳಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಈ ಕೆರೆಗಳ ಮೇಲಿನ ರಸ್ತೆಯ ಮೂಲಕವೇ ನೆರೆಯ ತುಮಕೂರು, ಕುಣಿಗಲ್, ಹುಲಿಯೂರುದುರ್ಗ, ಹಾಸನ ಜಿಲ್ಲೆಗೆ ಸೇರುವ ಹೆದ್ದಾರಿಗೆ ಹೋಗುವುದರಿಂದ ವಾಹನದಟ್ಟಣೆ ಹೆಚ್ಚಾಗಿರುತ್ತದೆ. ಅಲ್ಲದೆ ತಿರುವಿನಿಂದ ಕೂಡಿರುವುದರಿಂದ ಈ ರಸ್ತೆ ಪಕ್ಕದಲ್ಲಿ ಕೆರೆ ಇದ್ದರೂ ಯಾವುದೇ ಸುರಕ್ಷಾ ಗೋಡೆಗಳಿಲ್ಲದಿರುವುದು ದೊಡ್ಡ ದುರಂತ ಒಂದಕ್ಕೆ ಕಾದು ಕುಳಿತಂತಿದೆ.
ಅನೇಕ ಕೆರೆಗಳ ಮೇಲಿನ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿದ್ರೂ ಅಧಿಕಾರಿಗಳು ತಲೆ ಕೇಡಿಸಿಕೊಂಡಿಲ್ಲ. ಆಲ್ಲದೆ ತಾಲೂಕಿನ ತಿಟ್ಟಮಾರನಹಳ್ಳಿ ಕೆರೆಗಳ ಕಳೆದ ಐದಾರು ವರ್ಷಗಳ ಹಿಂದೆ ಟೆಂಪೋವೊಂದು ಇದೇ ಕೆರೆಗೆ ಉರುಳಿ ಬಿದ್ದು ಸುಮಾರು 3 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಅಂದು ಕೂಡ ಕೆರೆಗೆ ತಡೆಗೋಡೆ ನಿರ್ಮಿಸುವಂತೆ ಒತ್ತಡ ಕೂಡ ಹೇರಲಾಗಿತ್ತು. ಅಂದಿನಿಂದ ಇಂದಿನವರೆಗೂ ಕೂಡ ಕೆರೆಗಳಿಗೆ ತಡೆಗೋಡೆ ಹಾಕದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಈ ಕೆರೆಯ ಮೇಲಿನ ರಸ್ತೆಗಳು ಪದೇ ಪದೇ ದುರಂತಗಳು ನಡೆಯುತ್ತಲೆ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈಗ ಮುಖ್ಯಮಂತ್ರಿ ಸ್ವ-ಕ್ಷೇತ್ರ :
ಪ್ರಸ್ತುತ ಚನ್ನಪಟ್ಟಣ ಕ್ಷೇತ್ರ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿರವರ ಸ್ವ-ಕ್ಷೇತ್ರ. ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧಿಸಿ ಅಂತಿಮವಾಗಿ ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿ ವಿಧಾನಮಂಡಲ ಅಧಿವೇಶನದಲ್ಲಿ ಪ್ರಮಾಣ ವಚನ ಕೂಡ ಸ್ವೀಕರಿಸಿದ್ದರು.
ಹಾಗೆಯೇ ಚುನಾವಣಾ ಪೂರ್ವ ಕೂಡ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ರು. ಈ ಕ್ಷೇತ್ರದ ಶಾಸಕರೇ ಮುಖ್ಯಮಂತ್ರಿಯಾಗಿರುವುದರಿಂದ ಅಪಾಯಕ್ಕಾಗಿ ಕಾದು ಕುಳಿತಿರುವ ಕೆರೆಗಳಿಗೆ ತಡೆಗೋಡೆ ನಿರ್ಮಿಸುವುದು ದೊಡ್ಡ ವಿಷಯವೇನು ಅಲ್ಲ. ಈ ಕೂಡಲೇ ಮುಂದೊಂದು ದಿನ ದೊಡ್ಡ ದುರಂತವಾಗುವುದನ್ನ ತಪ್ಪಿಸಲು ಕ್ರಮ ಕೈಗೊಳ್ಳಗೊಳ್ಳಬೇಕಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು