• A
  • A
  • A
ಕಬ್ಬು ಬೆಳೆದು ರಾಜ್ಯಕ್ಕೆ ಸಿಹಿ ಹಂಚುವ ಈ ರೈತರ ಬದುಕೇ ಕಹಿ...!

ರಾಮನಗರ: ಸಂಕ್ರಾಂತಿ ಬಂದರೆ ಸಾಕು ನಮಗೆ ತಟ್ಟನೆ ನೆನಪಾಗುವುದು ಎಳ್ಳು ಬೆಲ್ಲ. ಇದರ ಜೊತೆಗೆ ಕಬ್ಬು. ಚನ್ನಪಟ್ಟಣ ತಾಲೂಕಿನ ಪಟ್ಲು ಗ್ರಾಮ ಸೇರಿದಂತೆ ಸುತ್ತಮುತ್ತಲೂ ಪಟಾವಳಿ ಹಾಗೂ ಕಪ್ಪು ಕಬ್ಬನ್ನು ಹೆಚ್ಚಾಗಿ ಬೆಳೆಯುವ ಮೂಲಕ ರಾಜ್ಯಕ್ಕೆ ಸಿಹಿ ಹಂಚಲಾಗುತ್ತದೆ. ಆದರೆ, ಇಲ್ಲಿನ ರೈತರ ಪರಿಸ್ಥಿತಿ ಮಾತ್ರ ಶೋಚನೀಯವಾಗಿದೆ.


ನೆರೆಯ ತಮಿಳುನಾಡು ಬಿಟ್ಟರೆ ರಾಜ್ಯದಲ್ಲಿ ಕಪ್ಪು ಕಬ್ಬು ಹಾಗೂ ಪಟಾವಳಿ ಕಪ್ಪು ಬೆಳೆಯುವುದಕ್ಕೆ ಇಲ್ಲಿಯ ಗ್ರಾಮಗಳು ಹೆಚ್ಚು ಪ್ರಸಿದ್ಧಿ. ಅದರಲ್ಲೂ ಸಂಕ್ರಾಂತಿ ಹಬ್ಬ ಬಂತೆಂದರೆ ಸಾಕು, ಇಲ್ಲಿಯ ಕಬ್ಬುಗಳಿಗೆ ಎಲ್ಲಿಲ್ಲದ ಬೇಡಿಕೆ. ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ... ಹೀಗೆ ಹಲವು ಜಿಲ್ಲೆಗಳಿಗೆ ಇಲ್ಲಿಯ ಕಬ್ಬುಗಳನ್ನ ಮಾರಾಟ ಮಾಡಲಾಗುತ್ತದೆ. ಆದ್ರೆ ಕಬ್ಬು ಬೆಳೆಯುವ ಇಲ್ಲಿಯ ರೈತರ ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಬ್ಬು ಬೆಳೆದು ಸಿಹಿ ಹಂಚುವ ಇಲ್ಲಿನ ರೈತನ ಹಿಂದಿನ ಕಹಿ ಬದುಕು ಮಾತ್ರ ಯಾರಿಗೂ ಕಾಣದಾಗಿದೆ. ಸರಿಯಾದ ರಸ್ತೆ ಇಲ್ಲ, ವಿದ್ಯುತ್ ಕೊರತೆ, ನೀರಿನ ಕೊರತೆ... ಹತ್ತು ಹಲವು ಸಮಸ್ಯೆಗಳು ಕಾಡುತ್ತಿದ್ದು ಇವುಗಳನ್ನು ಪರಿಹರಿಸಿದರೆ ವರ್ಷಕ್ಕೆ ಲಕ್ಷಾಂತರ ರೂ. ಲಾಭ ಗಳಿಸಬಹುದು ಎನ್ನುತ್ತಾರೆ ಕಬ್ಬು ಬೆಳೆಗಾರರು.


ಮಧ್ಯವರ್ತಿಗಳ ಹಾವಳಿ

ಕಪ್ಪು ಕಬ್ಬು ವರ್ಷಕ್ಕೆ ಒಂದೇ ಬೆಳೆಯಾದರೂ ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚು ಬೆಲೆ ಇದೆ. ಆದ್ರೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದರಿಂದ ಬೆಳೆ ಬೆಳೆದ ರೈತರು ಮಾತ್ರ ಕಷ್ಟ ಅನುಭವಿಸುತ್ತಿದ್ದಾರೆ. ವಿದ್ಯುತ್ ಸಮಸ್ಯೆ, ಮಧ್ಯವರ್ತಿಗಳ ಹಾವಳಿಗೆ ಪರಿಹಾರ ಹುಡುಕಿಕೊಡಬೇಕು ಎನ್ನುವುದೇ ಇಲ್ಲಿನ ರೈತರ ಒತ್ತಾಯವಾಗಿದೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು