• A
  • A
  • A
ಮೈಸೂರಲ್ಲಿ ಅಂತರ್ಜಾತಿ ವಿವಾಹ: ಕಾರು ಚಾಲಕನ ಕೈಹಿಡಿದ ಟೆಕ್ಕಿ!

ಮೈಸೂರು: ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಅಂತರ್ಜಾತಿ ಪ್ರೇಮಿಗಳು ಪೋಷಕರ ಸಮ್ಮುಖದಲ್ಲಿಯೇ ಸರಳ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.


ಕಲುಬುರಗಿ ಜಿಲ್ಲೆ ಕೊಲ್ಲೂರು ಗ್ರಾಮದ ರಾಘವೇಂದ್ರ ಹಾಗೂ ರಾಮನಗರ ಜಿಲ್ಲೆ ಚೆನ್ನಪಟ್ಟಣದ ರಮ್ಯ ಅಂತರ್ಜಾತಿ ವಿವಾಹವಾದ ಜೋಡಿ.
ವೃತ್ತಿಯಲ್ಲಿ ಕಾರು ಚಾಲಕನಾಗಿರುವ ರಾಘವೇಂದ್ರ ಮತ್ತು ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ರಮ್ಯರ ನಡುವೆ ಪ್ರೇಮಾಂಕುರವಾಗಿ ಪರಸ್ಪರ ಪ್ರೀತಿಯಲ್ಲಿ ಮುಳುಗಿದ್ದರು.
ಆರಂಭದಲ್ಲಿ ಇಬ್ಬರ ಮನೆಯವರಿಂದಲೂ ಅಂತರ್ಜಾತಿ ವಿವಾಹಕ್ಕೆ ವಿರೋಧವಿತ್ತು. ಆದರೆ ಈ ಜೋಡಿ ಇಬ್ಬರ ಕುಟುಂಬವನ್ನು ಒಪ್ಪಿಸಿದ್ದರು.

ಇಂದು ಗಾಂಧಿನಗರದಲ್ಲಿರುವ ಉರಿಲಿಂಗ ಪೆದ್ದಿ ಮಠದ ಆವರಣದಲ್ಲಿ ಜ್ಞಾನಪ್ರಕಾಶ್ ಸ್ವಾಮೀಜಿ ಹಾಗೂ ಬೆಂಗಳೂರಿನ ಬೌದ್ಧ ವಿಹಾರದ ಗುರುಗಳಾದ ಭಂತೇಜಿ ಅವರ ಸಮ್ಮುಖದಲ್ಲಿ ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಗಳನ್ನು ಹೇಳಿ ಸರಳ ಜೀವನಕ್ಕೆ ಕಾಲಿಟ್ಟರು.CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು