• A
  • A
  • A
ಪ್ರವಾಸಿಗರಿಂದ ದೂರ ಉಳಿದ ತಾರಕ... ನೀರು ಶೇಖರಣೆಗಷ್ಟೆ ಸೀಮಿತವಾದ ಜಲಾಶಯ!

ಮೈಸೂರು: ಪ್ರಕೃತಿಯ ವನಸಿರಿಯ ನಡುವೆ ತಾರಕ ಜಲಾಶಯ ಇದ್ದರೂ ಪ್ರವಾಸಿಗರಿಂದ ದೂರುವಿದ್ದು, ನೀರು ಶೇಖರಣೆಗಷ್ಟೆ ತನ್ನ ಸೌಂದರ್ಯವನ್ನು ಸೀಮಿತಗೊಳಿಸಿಕೊಂಡಿದೆ.


ಹೌದು.., ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಪೆಂಜನಹಳ್ಳಿ ಗ್ರಾಮದಲ್ಲಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ತಾರಕ ಜಲಾಶಯದ ಅಣೆಕಟ್ಟೆಗೆ 3.9 ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯವಿದ್ದು, 25 ಅಡಿ ಎತ್ತರ ಹೊಂದಿದೆ.
ಆದರೆ ಕಾಲ ಕಾಲಕ್ಕೆ ಮಳೆ ಬಂದರೂ ಕಬಿನಿಯಂತೆ ತುಂಬಿ ತುಳುಕುವುದಿಲ್ಲ. ಆದರೆ, ಸೌಂದರ್ಯಕ್ಕೆ ಯಾವುದರಲ್ಲೂ ಕಮ್ಮಿಇಲ್ಲ.

ಈ ಅಣೆಕಟ್ಟೆಗೆ ಕಬಿನಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಏತ ನೀರಾವರಿ ಮೂಲಕ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತು ಸಾರಥಿ ನದಿಯ ಮೂಲಕವು ಹಿನ್ನೀರು ಹರಿದು ಬರುತ್ತದೆ.
ಈ ಬಾರಿ ಕೇರಳದ ವೈನಾಡು ಹಾಗೂ ಮುಂಗಾರು ಮಳೆ ಪರಿಣಾಮದಿಂದಾಗಿ ಈ ಜಲಾಶಯ ತುಂಬುವ ಹಂತಕ್ಕೆ ತಲುಪಿದ್ದು, 20 ವರ್ಷಗಳ ಹಿಂದೆ ಈ ಜಲಾಶಯಕ್ಕೆ ಬಾಗಿನ ಭಾಗ್ಯ ಸಿಕ್ಕಿತ್ತು. ಆದರೆ, ಆ ಭಾಗ್ಯ ಈಗ ಇದಕ್ಕೆ ಒದಗಿ ಬಂದಿಲ್ಲ.

ಹೆಚ್.ಡಿ.ಕೋಟೆ ತಾಲೂಕಿನಿಂದ 18 ಕಿ.ಮೀ. ಅಂತರದಲ್ಲಿರುವ ಈ ಜಲಾಶಯವನ್ನು ನೋಡಲು ಕೇರಳಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ರಾಜ್ಯದಿಂದ ಅಷ್ಟೆನೂ ಪ್ರವಾಸಿಗರು ಇಲ್ಲಿಗೆ ಬರುವುದಿಲ್ಲ. ಈ ಹಿನ್ನೀರು ಅರಣ್ಯ ಪ್ರದೇಶಕ್ಕೆ ಹತ್ತಿರುವಾಗಿರುವುದರಿಂದ ಕಾಡಾನೆಗಳು ನೀರಿನಲ್ಲಿ ಮಿಂದೇಳಲು ಆಗಾಗ ಬಂದು ಪ್ರವಾಸಿಗರಿಗೆ ದರ್ಶನ ಕೊಟ್ಟು ಹೋಗುತ್ತವೆ.

ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಆಕರ್ಷಣ ಕೇಂದ್ರವಾಗಿದ್ದರೂ ಪ್ರವಾಸೋದ್ಯಮಕ್ಕೆ ಬೇಕಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕಿದೆ.

ಇಲ್ಲಿನ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೂಲಿ ಮಾಡಲು ಹುಡುಕಿಕೊಂಡು ಬೇರೆ ಬೇರೆ ಸ್ಥಳಗಳಿಗೆ ಪ್ರತಿನಿತ್ಯ ತೆರಳಬೇಕು. ತಾರಕ ಜಲಾಶಯವನ್ನು ಪ್ರವಾಸೋದ್ಯಮ ಕ್ಷೇತ್ರ ಮಾಡಿದರೆ ವ್ಯಾಪಾರ ಮಾಡಲು ಅನುಕೂಲವಾಗಲಿದೆ ಎಂಬುವುದು ಗ್ರಾಮಸ್ಥರ ಮಾತಾಗಿದೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು