• A
  • A
  • A
ತುಂಬಿದ ಕಬಿನಿಯ ಒಡಲು.. 4 ಗೇಟ್‌ಗಳಿಂದ ಧುಮ್ಮಿಕ್ಕಿದ ಜಲಧಾರೆ

ಮೈಸೂರು: ಮುಂಗಾರು ಆರಂಭದಲ್ಲಿಯೇ ವರುಣ ಕೃಪೆ ತೋರಿದ ಪರಿಣಾಮ ಕಬಿನಿ ಜಲಾಶಯ ತುಂಬಿದೆ. 4 ಗೇಟ್‌ಗಳ ಮೂಲಕ ನೀರನ್ನು ಹೊರ ಬಿಡುತ್ತಿರುವುದರಿಂದ ಮನೋಹರವಾಗಿ ಜಲಧಾರೆ ಧುಮ್ಮುಕ್ಕುತ್ತಿದೆ.


ಕಬಿನಿ ಜಲಾಶಯ ಒಳ ಹರಿವು 22098 ಕ್ಯೂಸೆಕ್ ಇದ್ದು, 300 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನೀರಿನ ರಭಸ ಹೆಚ್ಚಾಗುತ್ತಿದ್ದಂತೆ ಗೇಟ್‌‌‌ಗಳಿಂದ ನೀರು ಹೊರ ಬಿಡಲಾಗುತ್ತಿದೆ. ಕಬಿನಿ ಜಲಾಶಯ ವಿಭಾಗದ ಮುಖ್ಯ ಇಂಜಿನಿಯರ್ ಹಾಗೂ ಸಹಾಯಕ ಇಂಜಿನಿಯರ್ ಕಬಿನಿ ಜಲಾಶಯಕ್ಕೆ ಪೂಜೆ ಸಲ್ಲಿಸಿದ್ದಾರೆ.


ಮುನ್ನೆಚ್ಚರಿಕೆ

ಕಬಿನಿ ಜಲಾಶಯದ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು, ಒಳ ಹರಿವು ಹೆಚ್ಚಾಗಿರುತ್ತದೆ. ಜಲಾಶಯವು ಗರಿಷ್ಟ ಮಟ್ಟ ತಲುಪುವುದರಿಂದ ಸುಮಾರು 5000 ಕ್ಯೂಸೆಕ್‌‌‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಯಾವುದೇ ಸಂದರ್ಭದಲ್ಲಾದರೂ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಸಂಭವವಿದೆ.

ಕಬಿನಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ-ಪಾಸ್ತಿ ಮತ್ತು ಜಾನುವಾರು ರಕ್ಷಣೆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಬಿನಿ ಜಲಾಶಯ ವಿಭಾಗದ ಕಾರ್ಯಪಾಲಕ ಅಭಿಯಂತರ ಸಿ.ಪಿ. ಜಗದೀಶ್ ತಿಳಿಸಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು