• A
  • A
  • A
ಮೈಸೂರಿನಲ್ಲಿ ಕರುಣೆಯ ಗೋಡೆ ಮಳಿಗೆ ಪ್ರಾರಂಭ...ಇದರ ವಿಶೇಷತೆ ಏನ್‌ ಗೊತ್ತೆ!?

ಮೈಸೂರು: ನಿಮಗೆ ಅಗತ್ಯವಿಲ್ಲದ ವಸ್ತುಗಳನ್ನು ಇಲ್ಲಿ ಬಿಡಿ, ಅಗತ್ಯವಿದ್ದರೆ ಉಚಿತವಾಗಿ ತೆಗೆದುಕೊಂಡು ಹೋಗಿ ಎಂಬ ವಿನೂತನ ಕರುಣೆಯ ಗೋಡೆ ಮಳಿಗೆಯನ್ನು ಮೊದಲ ಬಾರಿಗೆ ನಗರದಲ್ಲಿ ಖಾಸಗಿ ಎನ್‌ಜಿಒವೊಂದು ಪ್ರಾರಂಭಿಸಿದೆ.


ಈ ಮಳಿಗೆ ಹೇಗೆ ಕಾರ್ಯನಿರ್ವಹಿಸುತ್ತದೆ?

ಮೈಸೂರಿನಲ್ಲಿ ಪ್ರಥಮ ಬಾರಿಗೆ ಖಾಸಗಿ ಎನ್‌ಜಿಒವೊಂದು ಕರುಣೆಯ ಗೋಡೆ ಎಂಬ ಮಳಿಗೆಯನ್ನು ನಗರದ ಕೆ.ಆರ್ ಎಸ್ ರಸ್ತೆಯ ದಾಸಪ್ಪ ವೃತ್ತದ ಬಳಿ ಪ್ರಾರಂಭಿಸಿದೆ. ಈ ಮಳಿಗೆಯಲ್ಲಿ ನಮಗೆ ಬೇಡವಾದ ವಸ್ತುಗಳಾದ ಬ್ಯಾಗ್, ಪುಸ್ತಕ, ಶೂಗಳನ್ನು ಬಿಟ್ಟು ಹೋಗಬಹುದು. ನಿಮಗೆ ಬೇಕಾದ ವಸ್ತುಗಳು ಈ ಮಳಿಗೆಯಲ್ಲಿದರೆ ಉಚಿತವಾಗಿ ಕೊಂಡೊಯ್ಯಬಹುದು ಎಂಬ ಪರಿಕಲ್ಪನೆಯಿಂದ ಈ ಮಳಿಗೆಯನ್ನ ಪ್ರಾರಂಭಿಸಲಾಗಿದೆ.



ದುಬಾರಿ ಹಣಕೊಟ್ಟು ಖರೀದಿಸಲಾಗದವರು ಇಲ್ಲಿಂದ ವಸ್ತುಗಳನ್ನು ಕೊಂಡೊಯ್ಯಬಹುದು. ಆದರಿಂದಲೇ ಈ ಮಳಿಗೆಯ ಮೇಲೆ ನಿಮಗೆ ಅಗತ್ಯವಿಲ್ಲದಿದ್ದರೇ ಇಲ್ಲಿ ಬಿಡಿ, ಅಗತ್ಯವಿದ್ದರೇ ತೆಗೆದುಕೊಳ್ಳಿ ಎಂಬ ಪರಿಕಲ್ಪನೆಯಿಂದ ಈ ಅಂಗಡಿಗೆ ಕರುಣೆಯ ಗೋಡೆ ಎಂದು ಹೆಸರಿಡಲಾಗಿದೆ ಎಂದು ಖಾಸಗಿ ಎನ್‌ಜಿಒ ತಿಳಿಸಿದೆ.



CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು