• A
  • A
  • A
ನನ್ನ ತಂದೆ ರಾಜನಂತೆ ಬಾಳಲು ಮಂಡ್ಯದ ಜನ ಕಾರಣ... ಅಂಬಿ ವಾಯ್ಸ್‌ನಲ್ಲಿ ಮಾತನಾಡಿದ ಅಭಿಷೇಕ್​!

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ ಅಂಬಿ ನುಡಿ ನಮನ ಕಾರ್ಯಕ್ರಮದಲ್ಲಿ ಪುತ್ರ ಅಭಿಷೇಕ್​ ಭಾಗಿಯಾಗಿ ಮಾತನಾಡಿದರು. ಥೇಟ್​ ಅಂಬರೀಷ್​ ವಾಯ್ಸ್​​ನಲ್ಲಿ ಮಾತನಾಡಿದ ಅವರು, ಅಭಿಮಾನಿಗಳಿಗೆ ಅಂಬಿ ಇನ್ನೂ ನಮ್ಮ ನಡುವೆ ಇದ್ದಾರೆ ಎಂಬ ಭಾವನೆ ಮೂಡಿಸಿದರು.


ಅಂಬಿ ವಾಯ್ಸ್​​ನಲ್ಲಿ ಇವರು ಮಾತನಾಡುತ್ತಿದ್ದಂತೆ ಅಭಿಮಾನಿಗಳು ಫುಳಕಗೊಂಡು ಜಯಘೋಷ ಕೂಗಿದರು. ಇದಾದ ಬಳಿ ಮಾತಾನಾಡಿದ ಅಭಿಷೇಕ್​, ಅಂಬರೀಶ್ ಹೇಗಿದ್ದರು, ಹೇಗೆ ಹೋದರು ಎಂಬುದು ನಿಮ್ಮೆಲ್ಲರಿಗೂ ಗೊತ್ತಿದೆ. ಹಣ ಮುಖ್ಯ ಅಲ್ಲ, ಜನ ಮುಖ್ಯ ಎಂದು ಅಪ್ಪ ಹೇಳುತ್ತಿದ್ದರು. ಅವರು ರಾಜನಂತೆ ಬಾಳಿ ರಾಜನಂತೆ ಹೋಗಿದ್ದಾರೆ. ಅದಕ್ಕೆ ಕಾರಣ ಮಂಡ್ಯದ ಜನ. ಅವರಿಗೆ ನಾನು ಚಿರಋಣಿ ಎಂದು ಅಭಿಷೇಕ್​ ತಿಳಿಸಿದರು.
ನಗರದ ಸರ್​ ಎಂ.ವಿ. ಕ್ರೀಡಾಂಗಣದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅಭಿಷೇಕ್​, ನಮ್ಮ ತಂದೆ ಹೇಳಿದಂತೆ ಒಳ್ಳೆಯ ಕೆಲಸ ಮಾಡುತ್ತೇನೆ. ನಿಮ್ಮ ಪ್ರೀತಿಯನ್ನು ನಾನು ಗಳಿಸುತ್ತೇನೆ ಎಂದು ರೆಬೆಲ್​ ಆಗಿ ಮಾತನಾಡಿದರು. ಅಪ್ಪನ ಮಾರ್ಗದಲ್ಲಿ ನಡೆದರೆ ಖಂಡಿತವಾಗಿ ಸಕ್ಕರೆ ನಾಡಿನ ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ. ಅದೇ ಹಾದಿಯಲ್ಲಿ ನಾನು ನಡೆಯುವುದಾಗಿ ಅವರು ತಿಳಿಸಿದರು.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು