• A
  • A
  • A
ಬಂಗಾರ s/o ಬಂಗಾರದ ಮನುಷ್ಯ... ವಿದೇಶದಲ್ಲಿನ ಕಂಪನಿ ಮಾರಿ ರೈತ ಹೋರಾಟಕ್ಕೆ ಸಜ್ಜಾದ ದರ್ಶನ್!

ಮಂಡ್ಯ: ಚಲನಚಿತ್ರಗಳಲ್ಲಿ ಅದೆಷ್ಟೋ ಚಿತ್ರಗಳು ರೈತರ ಬಗ್ಗೆ, ರೈತರ ಜೀವನದ ಬಗ್ಗೆ ಇರುವುದನ್ನು ನೋಡಿದ್ದವೆ. ಆ ಸಂದರ್ಭದಲ್ಲಿ 'ಇದು ನಿಜವಾದರೆ ಅನ್ನದಾತರು ಎಷ್ಟು ಆನಂದದಿಂದ ಇರುತ್ತಾರಪ್ಪಾ' ಅಂತಾ ಅಂದುಕೊಂಡಿದ್ದೇವೆ... ಇದೇ ರೀತಿಯ ಕಾರ್ಯಕ್ಕೆ ಮುಂದಾಗಿದ್ದಾರೆ ರೈತ ಹೋರಾಟಗಾರ ದಿ. ಕೆ.ಎಸ್​.ಪುಟ್ಟಣ್ಣಯ್ಯರ ಮಗ ದರ್ಶನ್​ ಪುಟ್ಟಣ್ಣಯ್ಯ.


ಹೌದು..., ಬಂಗಾರ s/o ಬಂಗಾರದ ಮನುಷ್ಯ. ಎಂತಹ ಅದ್ಭುತ ಸ್ಕ್ರೀನ್ ಪ್ಲೇ. ರೈತರಿಗಾಗಿ ಫಾರಿನ್ ಆಸ್ತಿ, ಉದ್ಯೋಗ ಬಿಟ್ಟು ಬರೋದು. ಭಾರತಕ್ಕೆ ಬಂದು ತನ್ನ ನೆಲೆದ ರೈತರ ಸಂಕಷ್ಟಕ್ಕೆ ಸ್ಪಂದನೆ ಮಾಡೋದೇ ಒಂದು ರೋಚಕತೆ.

ಅದರಲ್ಲೂ ರೈತರನ್ನು ಒಗ್ಗೂಡಿಸಿ, ರೈತರ ಕಷ್ಟ ಏನು ಎಂಬುದನ್ನು ಕೇವಲ ಎರಡು ಗಂಟೆಯಲ್ಲಿ ಕಣ್ಣ ಮುಂದೆ ತಂದು, ಅವರ ಕಷ್ಟ ನಿವಾರಣೆಗೆ ದಾರಿ ದೀಪ ಆಗೋ ನಾಯಕನ ಪಾತ್ರ ಅದ್ಭುತ.
ಇಂತಹ ಪಾತ್ರವನ್ನು ನೀವು ಕೇವಲ ಪರದೆಯ ಮೇಲೆ ನೋಡಿದ್ದೀರಿ. ಆದರೆ ಈಗ ನಿಮ್ಮ ಕಣ್ಣ ಮುಂದೆ ಈ ಕಥೆಯ ಅರ್ಧ ಭಾಗದ ನಿಜ ಕಥೆಯನ್ನು ನಿಮ್ಮ ಮುಂದೆ ತರುವ ಪ್ರಯತ್ನ ಇದು.

ನಿಮಗೆಲ್ಲಾ ಮಣ್ಣಿನ ಮಗ ಅಂದರೆ ಗೊತ್ತಾಗುತ್ತೆ. ಅದು ಬೇರೆ ಯಾರೂ ಅಲ್ಲ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ. ಪುಟ್ಟಣ್ಣಯ್ಯ ಇರೋವರೆಗೂ ರೈತರಿಗಾಗಿ ಹೋರಾಟ ಮಾಡಿದರು. ಆದರೆ, ನಿಜವಾದ ಯಶಸ್ಸು ಅವರಿಗೆ ಸಿಗಲೇ ಇಲ್ಲ.

ಕೊನೆವರೆಗೂ ಹೋರಾಟ ಮಾಡಿದರು. ರೈತ ಸಂಘಗಳನ್ನು ಒಗ್ಗೂಡಿಸಲು ಪ್ರಯತ್ನ ಪಟ್ಟರೂ ಯಶಸ್ಸು ಸಿಗಲಿಲ್ಲ. ಕೊನೆಗೆ ತಮ್ಮ ಆಸೆಗಳನ್ನು ತಮ್ಮ ಜೊತೆಯೇ ತೆಗೆದುಕೊಂಡು ಮಣ್ಣಲ್ಲಿ ಮಣ್ಣಾಗಿ ಹೋದರು.

ಆದರೆ, ಪುಟ್ಟಣ್ಣಯರ ಕನಸನ್ನು ನನಸು ಮಾಡಲು ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ತಂದೆಯ ಆಶಯದಂತೆ ರೈತ ಹೋರಾಟಕ್ಕೆ ಎಂಟ್ರಿ ಕೊಟ್ಟರು. ಇತ್ತೀಚೆಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ರು. ಆದರೆ ರಾಜಕೀಯವಾಗಿ ಅಂಬೆಗಾಲು ಹಾಕಲು ಶುರು ಮಾಡಿದ್ದಾರೆ.
ಈಗ ನಾವು ಬಂಗಾರ s/o ಬಂಗಾರದ ಮನುಷ್ಯ ಸ್ಟೋರಿಯ ಅರ್ಧ ಭಾಗ ಹೇಳ ಹೊರಟಿರೋದು ಇವರ ಬಗ್ಗೆನೇ.

ಅಪ್ಪ ಎಂಎಲ್‌ಎ ಆದರೂ ರಾಜಕೀಯಕ್ಕೂ ತಮಗೂ ಸಂಬಂಧವೇ ಇಲ್ಲ ಅಂತ ಅಮೆರಿಕಾದ ಕೊಲೆರಾಡೋದಾ ಡೆನ್ವರ್ ನಗರದಲ್ಲಿ ಸಣ್ಣದಾದ ಸಾಫ್ಟ್‌ವೇರ್ ಕಂಪನಿಯನ್ನು ಪ್ರಾರಂಭ ಮಾಡಿ ಪತ್ನಿಯೊಂದಿಗೆ ಜೀವನ ನಡೆಸ್ತಾ ಇದ್ದರು ದರ್ಶನ್.

150 ಮಂದಿ ಉದ್ಯೋಗಿಗಳು ಇದ್ದ ಕ್ವಿನಿಕ್ಸ್ ಎಂಬ ಕಂಪನಿಯನ್ನು ಮೈಸೂರು ಮೂಲದ ಅಮರೇಶ್ ಎಂಬ ವ್ಯಕ್ತಿಯ ಜೊತೆಗೂಡಿ ಪ್ರಾರಂಭ ಮಾಡಿದ್ದರು. ಅಪ್ಪನ ಚಳವಳಿಯಿಂದಲೇ ದೂರ ಇದ್ದ ದರ್ಶನ್ ಈಗ ಅಪ್ಪನ ಹಾದಿ ತುಳಿಯಲು ಮುಂದಾಗಿದ್ದಾರೆ‌.

ಅಪ್ಪನ ಹಾದಿಯಲ್ಲಿ ಸಾಗಲು ಈಗ ಕಷ್ಟಪಟ್ಟು ಕಟ್ಟಿದ ಕಂಪನಿಯನ್ನು ಮಾರಾಟ ಮಾಡಲು ನಿರ್ಧಾರ ಮಾಡಿ ವಾಪಸ್ ಅಮೆರಿಕಾಗೆ ಹೋಗಿದ್ದು, ಕಂಪನಿ ಮಾರಾಟ ಪ್ರಕ್ರಿಯೆ ಮುಗಿದಿದೆಯಂತೆ. ಈ ಹಿನ್ನಲೆ ನಾಳೆ ಭಾರತಕ್ಕೆ ಬರಲಿದ್ದಾರೆ‌. ನಂತರ ಅಪ್ಪನಂತೆ ರೈತ ಹೋರಾಟಕ್ಕೆ ಜೀವ ತುಂಬಲು ನಿರ್ಧಾರ ಮಾಡಿದ್ದಾರೆ.

ಶುಕ್ರವಾರ ಭಾರತಕ್ಕೆ ವಾಪಸ್ ಬರಲಿರೋ ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘದ ಜೊತೆಗೂಡಿ ಹೋರಾಟ ಶುರು ಮಾಡಲಿದ್ದಾರೆ.ಇದಕ್ಕಾಗಿ ಮಂಡ್ಯ ಜಿಲ್ಲೆಯ ರೈತ ಸಂಘದ ಮುಖಂಡರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ‌.

ಹೇಗರಲಿದೆ ಹೋರಾಟದ ಹಾದಿ:
ಮೊದಲು ಮೈಸೂರಿನ ಸಾಫ್ಟ್‌ವೇರ್ ಕಂಪನಿಯನ್ನು ನೋಡಿಕೊಳ್ಳಲಿರೋ ದರ್ಶನ್, ಇದರ ಜೊತೆಯಲ್ಲೇ ಹೋರಾಟಕ್ಕೆ ಧುಮಕಲಿದ್ದಾರೆ.
ರೈತರಿಗೆ ಆರ್ಥಿಕ ನ್ಯಾಯ, ಬೆಳೆಗೆ ತಕ್ಕ ಬೆಲೆ, ಶೋಷಣೆಯ ವಿರುದ್ಧ ಹೋರಾಟ ಮಾಡಲು ತಮ್ಮದೇಯಾದ ಯೋಜನೆ ರೆಡಿ ಮಾಡಿಕೊಳ್ಳುತ್ತಿದ್ದಾರೆ ದರ್ಶನ್.

ಇದು ಬಂಗಾರ s/o ಬಂಗಾರ ಸಿನಿಮಾದ ಅರ್ಧ ಭಾಗ. ಮಿಕ್ಕ ಭಾಗಕ್ಕೆ ದರ್ಶನ್ ಉತ್ತರ ಕೊಡ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ‌.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು