• A
  • A
  • A
ಯುವಕರ ಸೆಲ್ಫಿ ಕ್ರೇಜ್​... ಪ್ರಾಣ ಭಯವಿಲ್ಲದೆ ರೈಲು ಬರುವಾಗ ಫೋಟೋ ಕ್ಲಿಕ್​!

ಹಾಸನ : ಸೆಲ್ಫಿ ಗೀಳಿನಿಂದ ಹಲವರು ಪ್ರಾಣ ಕಳೆದುಕೊಂಡಿದ್ದನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಸೆಲ್ಫಿ ತೆಗೆಯುವ ವೇಳೆ ಅದೆಷ್ಟೋ ಅನಾಹುತಗಳು ಸಂಭವಿಸಿದರೂ ಎಚ್ಚೆತ್ತುಕೊಳ್ಳದ ಯುವಕರು ಮತ್ತದೇ ಅಪಾಯದ ಹಾದಿಯನ್ನು ತುಳಿಯುತ್ತಿದ್ದಾರೆ.


ಹೌದು.., ಹಾಸನದ ಹೊಸ ಬಸ್ ನಿಲ್ದಾಣದ ಎನ್.ಡಿ.ಆರ್.ಕೆ.ಕಾಲೇಜು ಬಳಿ ರೈಲು ಬರುವ ವೇಳೆ ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಂಡು ಸಂತಸ ಪಡುತ್ತಿದ್ದಾರೆ. ಈ ಸಂಬಂಧ ನಿರಂತರವಾಗಿ ರೈಲು ಕರೆಗಂಟೆ ಬಾರಿಸಿದರು ಕೂಡ ಅದನ್ನು ಲೆಕ್ಕಿಸದ ವಿದ್ಯಾರ್ಥಿಗಳು ತಮ್ಮ ಪ್ರಾಣಕ್ಕೆ ತಾವೇ ಸಂಚಕಾರ ತಂದುಕೊಳ್ಳುತ್ತಿದ್ದಾರೆ.
ಕಾಲೇಜು ಬಿಟ್ಟ ನಂತರ ರೈಲ್ವೆ ಹಳಿಗಳ ಬಳಿ ಬರುವ ವಿದ್ಯಾರ್ಥಿಗಳು, ಸ್ನೇಹಿತರೊಂದಿಗೆ ಹಲವು ಭಂಗಿಯಲ್ಲಿ ಹಳಿಯ ಮೇಲೆ ಅದರಲ್ಲೂ ರೈಲು ಬರುವಾಗ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಿರುವುದಂತೂ ದುರಂತದ ಸಂಗತಿಯೇ ಸರಿ.

ಘಟನೆ ಬಗ್ಗೆ ಹಲವು ಬಾರಿ ಪೊಲೀಸರ ಗಮನಕ್ಕೆ ತಂದರೂ ಅವರು ಯಾವುದೇ ರೀತಿಯ ಕ್ರಮ ಜರುಗಿಸದೇ ಇದ್ದುದರಿಂದ ವಿದ್ಯಾರ್ಥಿಗಳು ತಮ್ಮ ಮೊಂಡಾಟ ಮುಂದುವರೆಸಿದ್ದಾರೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು