• A
  • A
  • A
ವಿಜೃಂಭಣೆಯ ಘಾಟಿ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವ: ಗುಡಿಗೆ ಒಂದೂವರೆ ಟನ್ ದ್ರಾಕ್ಷಿಯಿಂದ ಅಲಂಕಾರ

ದೊಡ್ಡಬಳ್ಳಾಪುರ: ರಾಜ್ಯದ ಸುಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವ ಈ ಬಾರಿ ವಿಜೃಂಭಣೆಯಿಂದ ನಡೆಯಿತು. ನಾಡಿನ ಹಲವು ಕಡೆಗಳಿಂದ ಮತ್ತು ಹೊರರಾಜ್ಯಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಸ್ವಾಮಿಗೆ ಹಣ್ಣು- ಹವನ ಅರ್ಪಿಸಿ ಭಕ್ತಿಭಾವ ಮೆರೆದರು.


ಪ್ರಸಿದ್ಧ ನಾಗದೇವತಾ ಆರಾಧನಾ ಕ್ಷೇತ್ರವಾಗಿರುವ ಘಾಟಿಯಲ್ಲಿ ಪ್ರತಿವರ್ಷ ಸುಬ್ರಹ್ಮಣ್ಯ ಷಷ್ಠಿಯ ಅಂಗವಾಗಿ ರಥೋತ್ಸವ ನಡೆದುಕೊಂಡು ಬರುತ್ತಿದೆ. ಮುಜರಾಯಿ ಇಲಾಖೆ ಮತ್ತು ಭಕ್ತರ ಸಹಯೋಗದಲ್ಲಿ ನಡೆದ ಶ್ರೀಸ್ವಾಮಿಯ ಪೂಜಾ ವಿಧಿವಿಧಾನಗಳು ಮತ್ತು ವೈಭವದ ಉತ್ಸವಗಳು ಭಕ್ತರ ಮನಸೂರೆಗೊಂಡವು. ದೇವಾಲಯದಲ್ಲಿ ಬೆಳಗಿನ ಜಾವದಿಂದಲೇ ಸಾವಿರಾರು ಭಕ್ತರು ದರ್ಶನಕ್ಕೆ ಸಾಲುಗಟ್ಟಿ ನಿಂತು ಗಂಟೆಗಟ್ಟಲೆ ಕಾದು ದರ್ಶನ ಪಡೆದರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ನಿಸರ್ಗ ನಾರಾಯಣಸ್ವಾಮಿ ಮತ್ತು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ರಥೋತ್ಸವಕ್ಕೆ ಚಾಲನೆ ನೀಡಿದರು. ಘಾಟಿ ಕ್ಷೇತ್ರದ ಬ್ರಹ್ಮ ರಥೋತ್ಸವದ ವಿಹಂಗಮ ದೃಶ್ಯವನ್ನು ದ್ರೋಣ್ ಕ್ಯಾಮರಾದ ಮೂಲಕ ಸೆರೆ ಹಿಡಿದಿದ್ದಾರೆ.

ಒಂದೂವರೆ ಟನ್ ದ್ರಾಕ್ಷಿಯಿಂದ ಅಲಂಕಾರ:


ಬ್ರಹ್ಮರಥೋತ್ಸವ ಹಿನ್ನೆಲೆ ದೇವಾಲಯವನ್ನು ದ್ರಾಕ್ಷಿಹಣ್ಣು, ಹೂವುಗಳಿಂದ ಅಲಂಕಾರ ಮಾಡಿದ್ದು, ಭಕ್ತರ ಗಮನ ಸೆಳೆಯುತ್ತಿದೆ.

ಘಾಟಿಯಲ್ಲಿ ಪ್ರತಿವರ್ಷ ಸುಬ್ರಹ್ಮಣ್ಯ ಷಷ್ಠಿಯ ಅಂಗವಾಗಿ ರಥೋತ್ಸವ ನಡೆಯುತ್ತದೆ. ರಥೋತ್ಸವ ಹಿನ್ನೆಲೆ ದೇವಾಲಯದ ಗರ್ಭಗುಡಿ ಮತ್ತು ಆವರಣವನ್ನು ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಈ ಬಾರಿ ದೇವಾಲಯದ ಆವರಣವನ್ನು ದ್ರಾಕ್ಷಿ ಗೊಂಚಲುಗಳಿಂದ ಅಲಂಕಾರ ಮಾಡಿದ್ದು ವಿಶೇಷ. ದೇವಾಲಯದ ಅವರಣದ ಮೇಲ್ಛಾವಣಿಯನ್ನು ದ್ರಾಕ್ಷಿ ಗೊಂಚಲುಗಳಿಂದ ಅಲಂಕಾರ ಮಾಡಲಾಗಿತ್ತು. ಥೇಟ್ ದ್ರಾಕ್ಷಿ ತೋಟದಂತೆ ದೇವಾಲಯದ ಅವರಣ ಕಂಗೊಳಿಸುತ್ತಿತ್ತು. ಈ ಅಲಂಕಾರಕ್ಕಾಗಿ ಒಂದೂವರೆ ಟನ್ ದ್ರಾಕ್ಷಿ ಬಳಕೆ ಮಾಡಲಾಗಿದೆಯಂತೆ. ದ್ರಾಕ್ಷಿ ಗೊಂಚಲಿನ ಅಲಂಕಾರ ಭಕ್ತರ ಆಕರ್ಷಣೆವಾಗಿತ್ತು

ದ್ರಾಕ್ಷಿ ಗೊಂಚಲು ಅಲಂಕಾರ ಭಕ್ತರ ಸೇವಾರ್ಥವಾಗಿತ್ತು. ಹಾಗೆಯೇ ಹೂವಿನ ಅಲಂಕಾರಕ್ಕೆ 5 ಲಕ್ಷ ಹಣವನ್ನು ದೇವಸ್ಥಾನ ಆಡಳಿತ ಮಂಡಳಿ ಖರ್ಚು ಮಾಡಿದೆ.

ಇನ್ನೂ ಸಾಕಷ್ಟು ಭಕ್ತರು ಘಾಟಿಗೆ ಆಗಮಿಸಿದ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಮತ್ತು ಬಸ್ ಸೇವೆಯನ್ನು ಒದಗಿಸಲಾಗಿತ್ತು. ಹಲವು ಭಕ್ತರು ಸೇವಾರ್ಥವಾಗಿ ಉಚಿತ ಬಸ್ ಸೇವೆ ಒದಗಿಸಿದ್ದರು.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು