• A
  • A
  • A
ಇಬ್ಬರು ಸ್ವಿಗ್ಗಿ ಡೆಲಿವರಿ ಬಾಯ್​ಗಳ ಮೇಲೆ ಹಲ್ಲೆ... ಆಸ್ಪತ್ರೆಗೆ ದಾಖಲು

ಬೆಂಗಳೂರು: ಇಬ್ಬರು ಸ್ವಿಗ್ಗಿ ಡೆಲಿವರಿ ಬಾಯ್​ಗಳ ಮೇಲೆ ಹಲ್ಲೆ ನಡೆದಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ನಡೆದಿದೆ.


ಸರಿ ಸುಮಾರು ಸುಮಾರು 15 ಜನ ಎಂಪೈರ್ ಸಿಬ್ಬಂದಿ ಕ್ಷುಲ್ಲಕ ವಿಚಾರಕ್ಕೆ ಯುವಕರಿಗೆ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ. ರೋಡ್​​ನಲ್ಲಿ ತೆರಳುತ್ತಿದ್ದ ವೇಳೆ ಬೈಕ್ ಟಚ್ ಆದ ವಿಚಾರಕ್ಕೆ ಹಲ್ಲೆ ನಡೆಸಿದಾಗಿ ತಿಳಿದು ಬಂದಿದೆ. ಇನ್ನು ಸ್ವಿಗ್ಗಿ ಸಿಬ್ಬಂದಿಯಾದ ಹರೀಶ್ ಹಾಗೂ ಪವನ್ ಫೋರ್ಟೀಸ್ ಹಾಗೂ ಮಾತ್ರಶ್ರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ?
ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿ ಎಂಪೈರ್ ಹೋಟೆಲ್​​ನ ಮ್ಯಾನೇಜರ್ ಫಾರೂಕ್ ಮತ್ತು ಸ್ವಿಗ್ಗಿ ಡೆಲಿವರಿ ಬಾಯ್ ಪ್ರತ್ಯೇಕವಾಗಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಒಂದು ಸಣ್ಣ ಅಪಘಾತ ವಾಗಿರುತ್ತದೆ. ತದನಂತರ ಸ್ವಿಗ್ಗಿ ಡೆಲಿವರಿ ಬಾಯ್ ಆರ್ಡರ್ ಪಿಕ್ ಮಾಡಲು ಹೋಟೆಲ್​ಗೆ ಬಂದ ಸಂದರ್ಭದಲ್ಲಿ ಮ್ಯಾನೇಜರ್ ಮತ್ತು ಸಿಬ್ಬಂದಿ ವರ್ಗದವರು ಸೇರಿ ಆತನ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ.

ಈ ಮಾಹಿತಿ ಗೊತ್ತಾಗುತ್ತಿದ್ದಂತೆ ಬೆಂಗಳೂರು ದಕ್ಷಿಣ ವಲಯದ ಜಯನಗರ, ಬಿಟಿಎಂ ಲೇಔಟ್, ಅರಕೆರೆ ಮತ್ತು ಹೆಚ್​​ಎಸ್ಆರ್ ಲೇಔಟ್​​ನ ಸ್ವಿಗ್ಗಿ ಡೆಲಿವರಿ ಹಬ್ ಸ್ಥಗಿತಗೊಳ್ಳುತ್ತವೆ. ಎಲ್ಲ ಯುವಕರು ಮೈಕೋ ಲೇಔಟ್ ಪೊಲೀಸ್ ಠಾಣೆಯ ಎದುರು ಪ್ರತಿಭಟನೆಗೆ ಮುಂದಾದಾಗ ಯಾವುದೇ ರೀತಿಯ ಸ್ಪಂದನೆ ಸಿಗುವುದಿಲ್ಲ.

ಹೀಗಾಗಿ ನೇರವಾಗಿ ಬಿಳೇಕಹಳ್ಳಿಯ ಎಂಪೈರ್ ಹೋಟೆಲ್​ಗೆ ನುಗ್ಗಿ ಪೊಲೀಸರ ಉಪಸ್ಥಿತಿಯಲ್ಲೇ ಸಂಪೂರ್ಣ ಹೋಟೆಲ್​ ಮೇಲೆ ದಾಳಿ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ನೂರಾರು ಸ್ವಿಗ್ಗಿ ಯುವಕರು ಒಟ್ಟಿಗೆ ಬಂದ ಕಾರಣ ಪೊಲೀಸರು ಅಸಹಾಯಕರಾಗಿದ್ದಾರೆ. ಈ ವೇಳೆ ಹೋಟೆಲ್​​ನಲ್ಲಿದ್ದ ಗ್ರಾಹಕರು ಓಡಿ ಹೋಗಿದ್ದಾರೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು