• A
  • A
  • A
ರೆಡ್ಡಿ ಡೀಲ್ ಪ್ರಕರಣ... ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಜನಾರ್ದನ ರೆಡ್ಡಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ 61ನೇ ಸಿಟಿ ಸಿವಿಲ್ ಕೋರ್ಟ್​ನ ನ್ಯಾಯಧೀಶ ವಿದ್ಯಾಧರ ಶಿರಹಟ್ಟಿ ಅವರ ಪೀಠದಲ್ಲಿ ನಡೆಯಿತು.


ರೆಡ್ಡಿ ಪರ ಹಿರಿಯ ವಕೀಲರಾದ ಹನುಮಂತರಾಯ ವಾದ ನಡೆಸಿದರು. ಈ ವೇಳೆ ನ್ಯಾಯಾಧೀಶರು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿ, ಜನಾರ್ದನ ರೆಡ್ಡಿ ಬಂಧನ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಸಿಸಿಬಿ ಪೊಲೀಸರು ಈ ವಿಚಾರವಾಗಿ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿದರು.

ನಂತರ ರೆಡ್ಡಿ ಪರ ವಕೀಲರು ಮಧ್ಯಂತರ ಜಾಮೀನು ಅರ್ಜಿಯನ್ನು ಹಿಂಪಡೆಯುತ್ತೇವೆ ಎಂದರು. ಇದಕ್ಕೆ ನ್ಯಾಯಾಲಯ ಒಪ್ಪಿಗೆ ಸೂಚಿಸಿ, ನಂತರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ನ.12ಕ್ಕೆ ಮುಂದೂಡಿತು.

ಇನ್ನು ಈನಾಡು ಇಂಡಿಯಾ ಜೊತೆ ಮಾತನಾಡಿದ ರೆಡ್ಡಿ ಪರ ವಕೀಲ, ಸಿ ಹೆಚ್ ಹನುಮಂತರಾಯ ಅವರು, ನಾಲ್ಕನೇ ಆರೋಪಿ ರಮೇಶ್​ಗೆ ಹಿಂಸೆ ಕೊಟ್ಟು ಸಿಸಿಬಿ ಡಿಸಿಪಿ ಗಿರೀಶ್ ಹಾಗೂ ಎಸಿಪಿ ವೆಂಕಟೇಶ ಪ್ರಸನ್ನ ಥಳಿಸಿದ್ದಾರೆ ಎಂದು ಆರೋಪಿಸಿದರು.

ಜನಾರ್ದನ ರೆಡ್ಡಿ ನಿರೀಕ್ಷಣಾ ಜಾಮೀನು ಅರ್ಜಿ ಹಾಕಿದ್ದೇವೆ. ಇದೊಂದು ರಾಜಕೀಯ ಪ್ರೇರಿತವಾಗಿದ್ದು, ರೆಡ್ಡಿಯವರ ವಿರುದ್ಧ ಸೇಡಿನ ರಾಜಕಾರಣ ನಡೆಯುತ್ತಿದೆ ಎಂದು ದೂರಿದರು.

ಸದ್ಯ ಮಧ್ಯಂತರ ಅರ್ಜಿ ವಾಪಸ್ ಪಡೆದ್ದಿದ್ದೇವೆ. ಸೋಮವಾರ ಮುಖ್ಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಜನಾರ್ದನ ರೆಡ್ಡಿ ಭಾನುವಾರ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೊಟೀಸ್ ನೀಡಿದೆ. ಭಾನುವಾರ ರೆಡ್ಡಿ ಹಾಜರಾಗಬೇಕೋ ಅಥವಾ ಬೇಡವೋ ಅನ್ನೋ ಬಗ್ಗೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ವಕೀಲ ಹನುಮಂತರಾಯ ತಿಳಿಸಿದರು.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು