• A
  • A
  • A
ಸಿಎಂ ಹೆಚ್​​ಡಿಕೆ ಗೊಂದಲದ ಉತ್ತರ... ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಬಿಎಸ್​ವೈ ಎಚ್ಚರಿಕೆ

ಬೆಂಗಳೂರು: ಕರ್ನಾಟಕ‌ದ ಇತಿಹಾಸದಲ್ಲೇ ಸಿಎಂ ಬೇಜವಾಬ್ದಾರಿ ಉತ್ತರ ನೀಡಿದ್ದು, ಎಲ್ಲರನ್ನೂ ಗೊಂದಲಕ್ಕೆ ಸಿಲುಕಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ‌ಬಿ.ಎಸ್.ಯಡಿಯೂರಪ್ಪ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.


ಸಭಾತ್ಯಾಗದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲ್ಲರನ್ನೂ ಗೊಂದಲದಲ್ಲಿ‌ ಸಿಲುಕಿಸಿ ಸಿಎಂ ಉತ್ತರ ಕೊಟ್ಟಿದ್ದಾರೆ. ನಾವು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟಿಲ್ಲ. ಇದನ್ನು ‌ನಾವು ಖಂಡಿಸುತ್ತೇವೆ. ಅಧಿವೇಶನ ಮುಗಿಸಿದ ನಂತರ ಈ ಬಗ್ಗೆ ಅಂಕಿ-ಅಂಶಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಮೈತ್ರಿ ಸರ್ಕಾರದ ದ್ರೋಹದ ಕೆಲಸವನ್ನು ಜನರಿಗೆ, ರೈತರಿಗೆತಿಳಿಸುತ್ತೇವೆ. ಜತೆಗೆ ಪ್ರತಿ ಜಿಲ್ಲೆಯಲ್ಲೂ ಹೋರಾಟ ‌ಮಾಡುತ್ತೇವೆ ಎಂದು ತಿಳಿಸಿದರು.
ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಅಕ್ಕಿಯ ವಿತರಣೆಯಲ್ಲಿ 2 kg ಕಡಿತ ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಡೆದ ಸಾಲ 21 ಸಾವಿರ ಕೋಟಿಯಂತೆ. ಅದರಲ್ಲಿ 6,500 ಕೋಟಿಯನ್ನು‌ ನಾಲ್ಕು ಕಂತುಗಳಲ್ಲಿ ಕಟ್ಟುತ್ತಾರಂತೆ. ಇದರಿಂದ ರೈತನ ಖಾತೆಗೆ ಸಾಲ ಜಮಾ ಆಗದೆ ತೀರುವಳಿಕೆ ಪತ್ರ ಕೊಡಲು ಸಾಧ್ಯಾನಾ?. ಸದನದಲ್ಲಿ ಸರಿಯಾಗಿ ಸ್ಪಷ್ಟನೆ ಕೊಡದೆ ಗೊಂದಲ ಮೂಡಿಸಿ ಓಡಿ ಹೋಗಿದ್ದಾರೆ. ಸಾಲ ಮನ್ನಾದಿಂದ ಅನುಕೂಲ ಆಗಬಹುದು ಎಂದುಕೊಂಡಿದ್ದ ರೈತರಿಗೆ ‌ಸಿಎಂ ದ್ರೋಹ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್ಸಿ, ಎಸ್ಟಿ ಸಾಲ, ಸ್ತ್ರೀ ಶಕ್ತಿ ಸಂಘಗಳ ಸಾಲ, ನೇಕಾರರು, ಮೀನುಗಾರರ ಸಾಲದ ಬಗ್ಗೆ ಚಕಾರ ಎತ್ತಿಲ್ಲ. ಚುನಾವಣೆಯಲ್ಲಿ ಕೊಟ್ಟ ಸುಳ್ಳು ಭರವಸೆಗಳು ಈಡೇರಿಲ್ಲ. ಈ ಸುಳ್ಳು ಭರವಸೆ ನಂಬಿ ಜನರು 37 ಸೀಟು ಕೊಟ್ಟರು. ಈ ರೀತಿಯ ಸುಳ್ಳು ಭರವಸೆ ಕೊಟ್ಟಿಲ್ಲ ಅಂದಿದ್ದರೆ ಅವರು 20 ಸೀಟು ಗೆಲ್ಲುತ್ತಿರಲಿಲ್ಲ ಎಂದು ಕಿಡಿಕಾರಿದರು.

ಕರಾವಳಿ ಬಗ್ಗೆ ಚಕಾರವಿಲ್ಲ:

ಕರಾವಳಿ ಕರ್ನಾಟಕದ ಬಗ್ಗೆ ಸಿಎಂರಿಂದ ಸಮರ್ಪಕ ಸ್ಪಷ್ಟನೆ ಸಿಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ ಕಾರ್ಕಳ ಶಾಸಕ ಸುನಿಲ್ ಕುಮಾರ್, ಮೀನುಗಾರ ಸಮಸ್ಯೆ, ಮೀನುಗಾರ ಮಹಿಳೆಯರಿಗೆ ಸಾಲದ ಬಗ್ಗೆ ಚಕಾರ ಎತ್ತಿಲ್ಲ. ಕರಾವಳಿಯಲ್ಲಿ ಮಳೆಯಿಂದ ಅನಾಹುತಗಳು ಸಂಭವಿಸಿದ್ದು, ಅದಕ್ಕೆ ಅನುದಾನದ ಕೊಡುವ ಬಗ್ಗೆ ಸಿಎಂ ಸ್ಪಷ್ಟನೆ ಕೊಟ್ಟಿಲ್ಲ ಎಂದು ಕಿಡಿಕಾರಿದರು.

ಗೊಂದಲ ಹೆಚ್ಚಿಸಿದ್ದಾರೆ:

ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ರೈತರ ಸಾಲ ಮನ್ನಾ ಕುರಿತಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಯಾವುದೇ ಸ್ಪಷ್ಟನೆ ನೀಡದೆ, ಗೊಂದಲ ಮತ್ತಷ್ಟು ಹೆಚ್ಚಿಸಿದ್ದಾರೆ.
ಈ ಸಂಬಂಧ ಅವರು ಶ್ವೇತಪತ್ರ ಹೊರಡಿಸಬೇಕಿತ್ತು ಎಂದು ಆಗ್ರಹಿಸಿದರು.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು