• A
  • A
  • A
30 ನಿಮಿಷಗಳ ಅಂತರದಲ್ಲಿ ಒಂದೇ ಸ್ಥಳದಲ್ಲಿ ಎರಡು ಅಪಘಾತ!

ಬೆಂಗಳೂರು: ಮೂವತ್ತು ನಿಮಿಷಗಳ ಅಂತರದಲ್ಲಿ ಒಂದೇ ಸ್ಥಳದಲ್ಲಿ ಎರಡು ಪ್ರತ್ಯೇಕ ಅಪಘಾತಗಳು ಕಳೆದ ರಾತ್ರಿ ನಡೆದಿವೆ.


ಎರಡೂ ಅಪಘಾತಗಳಲ್ಲೂ ಅದೃಷ್ಟವಶಾತ್ ಸಾವು ನೋವು ಸಂಭವಿಸದೇ ಸಣ್ಣಪುಟ್ಟ ಗಾಯಗಳಾಗಿವೆ. ಈ ಅಪಘಾತ ನಡೆದಿರೋದು ಏರ್‌ಪೋರ್ಟ್‌ ರಸ್ತೆಯ ಚಿಕ್ಕಜಾಲ ಬಳಿಯ ಮೇಲ್ಸೇತುವೆ ಮೇಲೆ.

ನಿನ್ನೆ ರಾತ್ರಿ 10.30 ರ ಸುಮಾರಿಗೆ ಬೈಕ್ ಸವಾರರಿಬ್ಬರು ಇಲ್ಲಿನ ಮೇಲ್ಸೇತುವೆ ಮೇಲೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ತಡೆ ಗೋಡೆಗೆ ಡಿಕ್ಕಿ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯರು ಪೊಲೀಸರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ದೆಹಲಿ ಮೂಲದ ಇಬ್ಬರು ಸಹೋದರರು ಏರ್‌ಪೋರ್ಟ್ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು. ಈ ಘಟನೆ ನಡೆದು ಕೇವಲ ಅರ್ಧ ಗಂಟೆಯಾಗ್ತಿದ್ದಂತೆ ಸರಿಯಾಗಿ 11 ಗಂಟೆ ವೇಳೆಗೆ ಏರ್‌ಪೋರ್ಟ್‌ ಕಡೆಗೆ ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ಮೇಲ್ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.

ಅರ್ಧ ಗಂಟೆ ಮೊದಲು ಬೈಕ್ ಅಪಘಾತ ನಡೆದ ಸ್ಥಳದಲ್ಲೇ ಕಾರು ಕೂಡ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಚಾಲಕ ಮತ್ತು ಪ್ರಯಾಣಿಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅದೇ ಸ್ಥಳದಲ್ಲಿ ಮತ್ತೊಂದು ಅಪಘಾತ ನಡೆದಿದೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಾಗ ಈಗಾಗಲೇ ನಡೆದಿದ್ದ ಅಪಘಾತದ ವಿಷಯವನ್ನೇ ಮತ್ತೆ ತಿಳಿಸುತ್ತಿದ್ದಾರೆ ಅಂತಲೇ ಪೊಲೀಸರು ಭಾವಿಸಿದ್ದರು.

ಆದ್ರೆ ಅಪಘಾತವಾಗಿರೋದು ಕಾರು ಅನ್ನೋದು ಗೊತ್ತಾಗುತ್ತಿದ್ದಂತೆ ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಗಾಯಗೊಂಡಿದ್ದ ಚಾಲಕ ಮತ್ತು ಪ್ರಯಾಣಿಕರಿಬ್ಬರನ್ನೂ ತಕ್ಷಣವೇ ಆ್ಯಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಒಂದೇ ಸ್ಥಳದಲ್ಲಿ ಮೂವತ್ತು ನಿಮಿಷಗಳ ಅಂತರದಲ್ಲಿ ಒಂದೇ ರೀತಿಯ ಪ್ರತ್ಯೇಕ ಅಪಘಾತಗಳು ನಡೆದಿರೋದು ಆಶ್ಚರ್ಯಕ್ಕೆ ಕಾರಣವಾಗಿದೆ.

ಅಪಘಾತ ನಡೆದ ಸ್ಥಳದಲ್ಲಿ ಈ ಹಿಂದೆಯೂ ಇಂತದ್ದೇ ಹಲವು ಅಪಘಾಗಳಾಗಿವೆ ಅನ್ನೋದು ಸ್ಥಳೀಯರ ಅಭಿಪ್ರಾಯ. ಘಟನೆ ಸಂಬಂಧ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು