• A
  • A
  • A
ಬ್ಲೂಂಬರ್ಗ್ ಕ್ವಿಂಟ್‌ನೊಂದಿಗೆ ಸಹಭಾಗಿತ್ವ ಸಾಧಿಸಿದ ನಾಸ್ಕಾಮ್‌

ಬೆಂಗಳೂರು: ಭಾರತದ ಪ್ರಮುಖ ವ್ಯಾಪಾರ ಮತ್ತು ಹಣಕಾಸು ಸುದ್ದಿ ಕಂಪನಿಯಾಗಿರುವ ಬ್ಲೂಂಬರ್ಗ್ ಕ್ವಿಂಟ್ ಜತೆ ನಾಸ್ಕಾಮ್ ಸಂಸ್ಥೆ ಸಹಭಾಗಿತ್ವ ಸಾಧಿಸಿದೆ.


ಬೆಳೆಯುತ್ತಿರುವ ಕಂಪನಿಗಳು ಮತ್ತು ಸ್ಟಾರ್ಟಪ್‌ಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾದ ಸ್ಕೇಲ್‌ ಅಪ್ ಅನ್ನು ಪರಿಚಯಿಸಲು ನಾಸ್ಕಾಮ್, ಟಿ ಹಬ್ ಮತ್ತು ಕರ್ನಾಟಕ ಸರ್ಕಾರದೊಂದಿಗೆ ಈ ಸಹಭಾಗಿತ್ವ ಸಾಧಿಸಲಾಗಿದೆ. ಬಿಎಫ್ಎಸ್ಐ, ಆರೋಗ್ಯ ಸೇವೆ, ಗ್ರಾಹಕ ರಿಟೇಲ್ ಮತ್ತು ಶಿಕ್ಷಣದಂತಹ ಪ್ರಮುಖ ವಲಯಗಳಲ್ಲಿನ ಕಂಪನಿಗಳಲ್ಲಿ ಸ್ಕೇಲ್ ಅಪ್ ಗಮನ ಹರಿಸಿದೆ.


6 ತಿಂಗಳ ಶೆಡ್ಯೂಲ್ ಪ್ರಕಾರ ಸ್ಕೇಲ್ ಅಪ್ ಕಾರ್ಯಕ್ರಮವು ಭಾಗವಹಿಸುವ ಕಂಪನಿನಗಳಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುವ ಮತ್ತು ಪ್ರಚಾರ ಮಾಡುವ ಅವಕಾಶವನ್ನು ಒದಗಿಸುತ್ತದೆ. ವ್ಯಾಪಾರ ಅವಕಾಶಗಳು ಮತ್ತು ವ್ಯೂಹಾತ್ಮಕ ಸಾಧನೆಯ ನಿಟ್ಟಿನಲ್ಲಿ ಬಹು ಮಾದರಿ ಡಿಜಿಟಲ್ ಕಂಟೆಂಟ್‌ನಿಂದ ತಳಮಟ್ಟದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಈ ಕಾರ್ಯಕ್ರಮವು ಇರುತ್ತದೆ. ಉನ್ನತ ಮಟ್ಟದ ದೃಢೀಕೃತ ಸಲಹಾ ಮಂಡಳಿಯು ಕಾರ್ಯಕ್ರಮದ ದೂರದರ್ಶಿತ್ವವನ್ನು ವಿವರಿಸುತ್ತದೆ. ದರಲ್ಲಿ ಕಂಟೆಂಟ್ ಪ್ರದರ್ಶನ, ಮೆಂಟರಿಂಗ್ ಸೆಷನ್‌ಗಳು, ಖರೀದಿ-ಮಾರಾಟ ಸಭೆಗಳು, ವಲಯವಾರು ಸಮ್ಮೇಳನಗಳು, ಹಣಕಾಸು ಪೂರೈಕೆ ಪ್ರಸ್ತಾಪವನ್ನು ನಿರ್ಧರಿಸಲಿದೆ.

ತನ್ನ ಡಿಜಿಟಲ್ ಪ್ಲಾಟ್‌ಫಾರಂ, ತನ್ನ ಕಂಟೆಂಟ್ ಪಾಲುದಾರರ ನೆಟ್‌ವರ್ಕ್ ಮತ್ತು ಪ್ರಮುಖ ಸಾಮಾಜಿಕ ಪ್ಲಾಟ್‌ಫಾರಂಗಳಲ್ಲಿ ಬ್ಲೂಂಬರ್ಗ್ ಕ್ವಿಂಟ್ ಸ್ಕೇಲ್ಅಪ್ ಪ್ರಚಾರಗೊಳಿಸಲಿದೆ ಮತ್ತು ವಿತರಿಸಲಿದೆ. ಇದರಲ್ಲಿ ವೀಡಿಯೋಗಳು, ಲೈವ್ ಸ್ಟ್ರೀಮಿಂಗ್ ಶೋಗಳು, ಲೇಖನಗಳು ಮತ್ತು ಇನ್ಫೋಗ್ರಾಫಿಕ್‌ಗಳಂತಹ ಕಂಟೆಂಟ್ ನಿರ್ಮಾಣವಾಗುತ್ತವೆ ಎಂದು ಬ್ಲೂಂಬರ್ಗ್ ಕ್ವಿಂಟ್ ಸಿಇಒ ಅನಿಲ್ ಉನಿಯಲ್ ತಿಳಿಸಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು