• A
  • A
  • A
ಜೇಸುದಾಸ್‌‌, ಗುಹಾ ಗೈರು...60 ಮಂದಿ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಬೆಂಗಳೂರು: ನಾಡಿನ 60 ಮಂದಿ ಗಣ್ಯರಿಗೆ ಸಿಎಂ ಸಿದ್ದರಾಮಯ್ಯ ನಿನ್ನೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು.


ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಅದ್ಧೂರಿ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಗಾಯಕ ಕೆ.ಜೆ. ಯೇಸುದಾಸ್ ಹಾಗೂ ಇತಿಹಾಸಕಾರ, ಚಿಂತಕ ರಾಮಚಂದ್ರ ಗುಹಾ ಅವರು ಸಮಾರಂಭಕ್ಕೆ ಅನುಪಸ್ಥಿತರಾಗಿದ್ದರು.ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರಾಜ್ಯದ ಎಲ್ಲಾ ಭಾಗದ ಗಣ್ಯರನ್ನು ಹುಡುಕಿ ಸನ್ಮಾನಿಸಲಾಗಿದ್ದು, ಸಮಾರಂಭಕ್ಕೆ ಪೂರ್ವ ರವೀಂದ್ರ ಕಲಾಕ್ಷೇತ್ರ ಆವರಣದ ಹೊರಭಾಗದಲ್ಲಿ ನಡೆದ ಸಾಂಸ್ಕೃತಿಕ ವೈಭವ, ವೇದಿಕೆ ಮೇಲೆ ಗಾಯಕಿ ರಮ್ಯ ವಸಿಷ್ಠ ಹಾಗೂ ತಂಡದ ಕಲಾವಿದರಿಂದ ನಡೆದ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು. ಪ್ರಶಸ್ತಿ ಸ್ವೀಕರಿಸಿದ ಜಾನಪದ ಕಲಾವಿದ ಗೊರವರ ಮೈಲಾರಪ್ಪ ವೇದಿಕೆ ಮೇಲೆ ಗೊರವರ ಕುಣಿತ ಹಾಕಿ ಗಮನ ಸೆಳೆದರು.ಸಮಾರಂಭದ ಪ್ರಾಸ್ತಾವಿಕ ಮಾತನಾಡಿದ ಸಚಿವೆ ಉಮಾಶ್ರೀ. ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನವನ್ನು ಹೆಚ್ಚಿಸಿದೆ. ಇಲಾಖೆಗೆ 350 ಕೋಟಿ ರೂ. ನೀಡಲಾಗಿದ್ದು, ಸಾಕಷ್ಟು ಹೊಸ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಈ ಬಾರಿ ಕೂಡ ರಾಜ್ಯೋತ್ಸವ ಪ್ರಶಸ್ತಿ ಜೊತೆ ನೀಡುವ ಚಿನ್ನದ ಪದಕದ ತೂಕವನ್ನು 20 ಗ್ರಾಂ ನಿಂದ 25 ಗ್ರಾಂಗೆ ಹೆಚ್ಚಿಸಲಾಗಿದೆ. ಅನ್ಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ಕಲೆ, ಸಂಸ್ಕೃತಿಗೆ ಅತಿ ಹೆಚ್ಚು ಕೊಡುಗೆ ನೀಡುತ್ತಿದೆ. ಹೀಗಾಗಿ ಇಲಾಖೆಯಿಂದ ಸುಮಾರು 14 ಹೊಸ ಪ್ರಶಸ್ತಿಗಳನ್ನು ಕೊಡಮಾಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಪ್ರಶಸ್ತಿಯ ಮೊತ್ತವನ್ನು 3 ಲಕ್ಷ ಇದ್ದದ್ದನ್ನು 5 ಲಕ್ಷಕ್ಕೆ ಹಾಗೂ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯ ಮೊತ್ತವನ್ನು 5 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಹೆಚ್ಚಿಸಿದ್ದೇವೆ. ಆದ್ರೆ ಪ್ರಶಸ್ತಿಯ ಸಂಖ್ಯೆಯನ್ನು ಮಿತಿಗೊಳಿಸಿದ್ದೇವೆ. ಸಾಕಷ್ಟು ಆಧುನೀಕರಣವನ್ನು ಇಲಾಖೆಯಲ್ಲಿ ತರಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕಣಜ ವೆಬ್‌ ಸೈಟ್‌ನಲ್ಲಿ ಇನ್ನಷ್ಟು ಮಾಹಿತಿಯನ್ನು ಪ್ರಮುಖ ಕಾನೂನು ಮಾಹಿತಿಯನ್ನು ಕನ್ನಡದಲ್ಲಿ ಅಳವಡಿಸಲಿದ್ದೇವೆ ಎಂದು ಅವರು ವಿವರಿಸಿದರು.CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು