• A
  • A
  • A
ಅಹ್ಮದ್‌ ಪಟೇಲ್‌ ಗೆಲುವು...ಡಿಕೆಶಿಗೆ ಹೈಕಮಾಂಡ್ ಥ್ಯಾಂಕ್ಸ್‌

ಬೆಂಗಳೂರು: ಗುಜರಾತ್‌‌ನಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ಇಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದೆ.

ಸಂಗ್ರಹ ಚಿತ್ರ


ಸ್ವತ: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಡಿಕೆಶಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹೀಗೆ ಸೋನಿಯಾಗಾಂಧಿ ಅವರಲ್ಲದೆ, ಅಹ್ಮದ್ ಪಟೇಲ್ ಸೇರಿದಂತೆ ಹಲವು ನಾಯಕರು ಡಿಕೆಶಿಗೆ ದೂರವಾಣಿ ಕರೆ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ.

ನಮಗೆ ನೆರವು ನೀಡಲು ಮುಂದಾಗಿ ಬದುಕಿನ ಘೋರ ಅಗ್ನಿ ಪರೀಕ್ಷೆ ಎದುರಿಸಿದ್ದೀರಿ. ನಿಮ್ಮ ಈ ಸೇವೆಯನ್ನು ಹೈಕಮಾಂಡ್ ಸದಾ ಗಮನದಲ್ಲಿಟ್ಟಿರುತ್ತದೆ ಎಂದು ಹೇಳಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಗುಜರಾತ್‌‌ನಲ್ಲಿ ಆಪರೇಷನ್ ಕಮಲ ನಡೆಯುತ್ತದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಅದನ್ನು ತಪ್ಪಿಸಲು ಅಲ್ಲಿನ ಶಾಸಕರನ್ನು ಕರ್ನಾಟಕಕ್ಕೆ ಕಳಿಸಿದ್ದೆವು. ಅವರನ್ನು ನೀವು ಖುದ್ದಾಗಿ ನೋಡಿಕೊಂಡಿರಿ. ಪರಿಣಾಮವಾಗಿ ಕೇಂದ್ರದ ಬಿಜೆಪಿ ನಾಯಕರು ನಿಮ್ಮ ಮೇಲೆ ಮುಗಿಬಿದ್ದರು. ಆದರೆ ಎಲ್ಲ ಸಂಕಷ್ಟಗಳನ್ನು ನೀವು ಎದುರಿಸಿದ್ದೀರಿ. ಹೀಗಾಗಿ ಗುಜರಾತ್‌‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಗೆಲುವಿನ ಹಿಂದೆ ನಿಮ್ಮ ಶ್ರಮವಿದೆ. ಇದನ್ನು ಪಕ್ಷ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ಹೈಕಮಾಂಡ್ ಡಿಕೆಶಿಗೆ ಧನ್ಯವಾದ ಸಲ್ಲಿಸಿದ್ದಾರೆ ಎನ್ನಲಾಗಿದೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು