• A
  • A
  • A
ನಮ್ಮ ಮೆಟ್ರೋದ ಮಾರ್ಕೆಟ್‍ ನಿಲ್ದಾಣಕ್ಕೆ ಕೋಟೆ ವಿನ್ಯಾಸ

ಬೆಂಗಳೂರು: ಮಹಾನಗರದ ದಕ್ಷಿಣ ಕಾರಿಡಾರ್‌ನಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.


ಮಾಸಾಂತ್ಯಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರುವ ಭೇಟಿ ನೀಡುವ ನಿರೀಕ್ಷೆ ಇದ್ದು, ಇವರು ಗ್ರೀನ್‍ ಸಿಗ್ನಲ್‍ ನೀಡುತ್ತಿದ್ದಂತೆ ಉದ್ಘಾಟನೆಯ ದಿನಾಂಕ ನಿಗದಿಯಾಗಲಿದೆ. ಈ ನಿಟ್ಟಿನಲ್ಲಿ ಈ ಭಾಗದ ನಿಲ್ದಾಣಗಳು ಸಕಲ ರೀತಿಯಲ್ಲೂ ಸಜ್ಜಾಗುತ್ತಿವೆ.

ಮಾರ್ಕೆಟ್‍ ನಿಲ್ದಾಣ

ಬೆಂಗಳೂರು ಕೋಟೆ ವಿನ್ಯಾಸದ ಕೆ.ಆರ್. ಮಾರ್ಕೆಟ್ ನಿಲ್ದಾಣದ ನಿರ್ಮಾಣ ಕಾಮಗಾರಿಗೆ ನಗರ ಭೂ ಸಾರಿಗೆ ನಿರ್ದೇಶನಾಲಯ ಚಾಲನೆ ನೀಡಿದೆ. ಹಳೇ ಬೆಂಗಳೂರಿನ ಹೆಬ್ಬಾಗಿಲು ಎಂದೇ ಖ್ಯಾತವಾಗಿರುವ ‘ಶ್ರೀ ಕೃಷ್ಣರಾಜೇಂದ್ರ ಮಾರುಕಟ್ಟೆ’ ಪ್ರದೇಶದ ಮೂಲಕ ರಾಜಧಾನಿಯ ದಕ್ಷಿಣ ದಿಕ್ಕಿನತ್ತ ನಮ್ಮ ಮೆಟ್ರೋ ಹಾದು ಹೋಗಲಿದೆ.
ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನ, ಬೆಂಗಳೂರು ಕೋಟೆ, ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ, ಟಿಪ್ಪು ಅರಮನೆ ಹೀಗೆ ಹಲವು ಪಾರಂಪರಿಕ ಕಟ್ಟಡಗಳು ಈ ಮಾರ್ಗದಲ್ಲಿವೆ. ಆದ್ದರಿಂದಲೇ ಕೆ.ಆರ್. ಮಾರ್ಕೆಟ್ ನಿಲ್ದಾಣವನ್ನು ಬೆಂಗಳೂರು ಅರಮನೆಯ ವಿನ್ಯಾಸದಲ್ಲಿ ನಿರ್ವಿುಸಲಾಗುತ್ತಿದೆ. ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಕಾಮಗಾರಿಯೂ ಅಂತಿಮ ಘಟ್ಟದಲ್ಲಿದೆ.

ಕಲ್ಲುಗಳನ್ನು ಹೋಲುವ ಮಾರ್ಬಲ್

ಕೆ.ಆರ್. ಮಾರ್ಕೆಟ್ ಮೆಟ್ರೋ ನಿಲ್ದಾಣದ ಹೊರ ವಿನ್ಯಾಸವನ್ನು ಕೋಟೆಯಂತೆ ವಿನ್ಯಾಸಗೊಳಿಸಲು ಕಲ್ಲುಗಳನ್ನು ಹೋಲುವ ಮಾರ್ಬಲ್ ಬಳಸಲಾಗುತ್ತಿದೆ. ಕಂದು ಹಾಗೂ ತಿಳಿ ಹಳದಿ ಬಣ್ಣದ ದೊರಗು ವಿನ್ಯಾಸದ ಮಾರ್ಬಲ್‌ಗಳು ಇವಾಗಿವೆ. ಕಳೆದೊಂದು ವರ್ಷದಿಂದ ಮುಚ್ಚಲ್ಪಟ್ಟಿದ್ದ ಬಿಎಂಸಿ ವೃತ್ತ-ಕೆ.ಆರ್. ಮಾರ್ಕೆಟ್ ಬಸ್ ನಿಲ್ದಾಣ ನಡುವಿನ ರಸ್ತೆಯನ್ನು ಈಗಾಗಲೇ ಸಂಚಾರ ಮುಕ್ತಗೊಳಿಸಲಾಗಿದೆ. ನಿಲ್ದಾಣದ ಸುತ್ತಮುತ್ತ ಪಾದಚಾರಿ ಮಾರ್ಗವನ್ನೂ ನಿರ್ವಿುಸಲಾಗುತ್ತಿದೆ.
ಕೆ.ಆರ್. ಮಾರ್ಕೆಟ್ ಮೆಟ್ರೋ ನಿಲ್ದಾಣದಿಂದ ಕಲಾಸಿಪಾಳ್ಯ ಬಸ್ ನಿಲ್ದಾಣ, ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನ, ಟಿಪ್ಪು ಪ್ಯಾಲೇಸ್, ವಾಣಿವಿಲಾಸ, ವಿಕ್ಟೋರಿಯಾ ಆಸ್ಪತ್ರೆಗೆ ಸಂಪರ್ಕ ಕಲ್ಪಿಸಲು ನಗರ ಭೂಸಾರಿಗೆ ನಿರ್ದೇಶನಾಲಯ ಮುಂದಾಗಿದೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು