• A
  • A
  • A
ಕಾರವಾರ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಹೊಸ ಕಟ್ಟಡಕ್ಕೆ ಶಿಫ್ಟ್

ಕಾರವಾರ: ನಗರದಿಂದ ಹತ್ತು ಕಿ.ಮೀ. ದೂರದಲ್ಲಿನ ಮಾಜಾಳಿ ಗ್ರಾಮ ವ್ಯಾಪ್ತಿಯಲ್ಲಿ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯದ ನೂತನ ಕಟ್ಟಡ ತಲೆ ಎತ್ತಿದೆ. ನಾಲ್ಕು ವರ್ಷಗಳ ಹಿಂದೆ ಆರಂಭವಾದ ಕಟ್ಟಡದಲ್ಲಿ ಇದೀಗ ಆಡಳಿತ ವಿಭಾಗ ಮತ್ತು ಆಕಾಡೆಮಿಕ್ ವಿಭಾಗದ ಮೂರು ಮಹಡಿಯ ಕಟ್ಟಡ ಬಳಕೆಗೆ ಸಿದ್ಧವಾಗಿದೆ. ಬಳಕೆಗೆ ಸಿದ್ದವಾದ ಕಟ್ಟಡವನ್ನು ಬಳಸುವ ಪ್ರಕ್ರಿಯೆ ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರಾರಂಭವೂ ಆಗಿದೆ.


ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್, ಎಲೆಕ್ಟ್ರಾನಿಕ್ಸ್‌‌, ಕಂಪ್ಯೂಟರ್ ಸೈನ್ಸ್‌, ಮೆಕ್ಯಾನಿಕಲ್ ವಿಭಾಗಗಳಿದ್ದು 718 ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದಲ್ಲಿದ್ದಾರೆ. ಇವರಲ್ಲಿ 680 ರಷ್ಟು ವಿದ್ಯಾರ್ಥಿಗಳು ರಾಜ್ಯದ ಹೊರ ಜಿಲ್ಲೆಗಳಿಂದ ಬಂದ ಪ್ರತಿಭಾವಂತ ಮೆರಿಟ್ ಆಧಾರಿತ ವಿದ್ಯಾರ್ಥಿಗಳು ಎಂಬುದು ಗಮನಾರ್ಹ.

718 ವಿದ್ಯಾರ್ಥಿನಿಯರ ಮತ್ತು ಯುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ 2 ಹಾಸ್ಟೆಲ್ ಕಟ್ಟಡ ಹಾಗೂ ಅಕಾಡೆಮಿಕ್ ವಿಭಾಗದ 2 ಹಂತದ ಕಟ್ಟಡಗಳ ನಿರ್ಮಾಣ ಕಾರ್ಯ ಬಾಕಿ ಇದೆ.

ಎದುರಾದ ಬಸ್‌‌ ಸಮಸ್ಯೆ:
ಮಾಜಾಳಿಯಲ್ಲಿ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಇದೀಗ ಬಸ್ ಸೌಕರ್ಯ ಇಲ್ಲದ ಸಮಸ್ಯೆ ಎದುರಿಸುತ್ತಿದೆ. ಕಾರವಾರದಿಂದ 10 ಕಿ.ಮೀ. ದೂರದಲ್ಲಿರುವ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯಕ್ಕೆ ಕೆಎಸ್‍ಆರ್‌‌‌ಟಿಸಿ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಬೇಕಿದೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು