• A
  • A
  • A
ದೀಪಕ್ ರಾವ್ ಹತ್ಯೆಗೂ ನಂಟು... ಕೊಲೆಯಾದ ನಟೋರಿಯಸ್ ಇಲ್ಯಾಸ್ ಕ್ರೈಂ ಹಿಸ್ಟರಿ

ಮಂಗಳೂರು: ಸುರತ್ಕಲ್‌ನಲ್ಲಿ ದೀಪಕ್ ರಾವ್ ಹತ್ಯೆಯಲ್ಲಿ ಭಾಗಿಯಾಗಿ ಬಂಧನದಲ್ಲಿರುವ ಪ್ರಮುಖ ಆರೋಪಿ ಪಿಂಕಿ ನವಾಜ್ ಹಾಗೂ ನೌಷಾದ್ ಕೂಡ ಇಲ್ಯಾಸ್‌ನ ಟಾರ್ಗೆಟ್‌ ತಂಡದಲ್ಲಿ ಗುರುತಿಸಿಕೊಂಡಿದ್ದರು.


3 ವರ್ಷಗಳ ಹಿಂದೆ ಸುರತ್ಕಲ್‌ನಲ್ಲಿ ಹಿಂದೂ ಯುವಕನಿಗೆ ಚೂರಿ ಇರಿತದಲ್ಲಿ ಭಾಗಿಯಾಗಿದ್ದ ನೌಷಾದ್‌ಗೆ ಇಲ್ಯಾಸ್ ಉಳ್ಳಾಲದಲ್ಲಿ ಆಶ್ರಯ ಕೊಟ್ಟಿದ್ದ ಎನ್ನಲಾಗಿದೆ. ಇದರಿಂದ ನೌಷಾದ್ ಕೂಡಾ ಟಾರ್ಗೆಟ್‌ ತಂಡದಲ್ಲೇ ಇದ್ದ.


ಇಲ್ಯಾಸ್ ವಿರುದ್ಧ ಗೂಂಡಾ ಕಾಯ್ದೆ ದಾಖಲಾದ ನಂತರ ಈತನನ್ನು ಬಳ್ಳಾರಿ ಜೈಲಿಗೆ ಕಳುಹಿಸಲಾಗಿತ್ತು. ಅಲ್ಲಿಂದ ಬಂದ ಬಳಿಕ ಈತ ಸುರತ್ಕಲ್ ಕೃಷ್ಣಾಪುರದಲ್ಲಿ ನೆಲೆಸಿ ಅಲ್ಲಿ ಯುವಕರ ತಂಡವನ್ನು ಕಟ್ಟಿದ್ದ. ನಂತರ, ಇತ್ತೀಚಿಗೆ ಜೆಪ್ಪುವಿನ ವಸತಿ ಸಂಕೀರ್ಣಕ್ಕೆ ವಾಸಸ್ಥಾನ ಬದಲಾಯಿಸಿದ್ದ. ಇಲ್ಯಾಸ್‌ನ ತಂದೆ ಫ್ಯಾನ್ಸಿ ವಸ್ತುಗಳ ವ್ಯಾಪಾರಿಯಾಗಿದ್ದು, ಇಬ್ಬರು ಸಹೋದರಿಯರು, ಇಬ್ಬರು ಸಹೋದರರು ಸಹ ಇದ್ದಾರೆ.

ರಾಜಕೀಯ ಒಡನಾಟ:

ಇಲ್ಯಾಸ್‌ ಜಿಲ್ಲಾ ಯೂಥ್‌‌ ಕಾಂಗ್ರೆಸ್‌ ಉಪಾಧ್ಯನಾಗಿದ್ದರಿಂದ ಜಿಲ್ಲೆಯ ಕೆಲ ಪ್ರಭಾವಿ ರಾಜಕಾರಣಿಗಳ ಜೊತೆಗೂ ಗುರುತಿಸಿಕೊಂಡಿದ್ದ. ಆದರೆ ಈತನ ವಿರುದ್ಧ ಕೆಲ ಪ್ರಕರಣಗಳು ಇದ್ದುದರಿಂದ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಜೊತೆಗೆ ತನ್ನ ಕೃತ್ಯಗಳನ್ನು ಮರೆಮಾಚಿ, ಪಾರಾಗಲು ಇವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ ಎನ್ನಲಾಗ್ತಿದೆ. ಈತ ರಾಜಕಾರಣಿಗಳೊಂದಿಗೆ ಊಟ ಮಾಡುತ್ತಿರುವ, ಸನ್ಮಾನಿಸುತ್ತಿರುವ ಫೋಟೋಗಳು ಇತ್ತೀಚೆಗೆ ದೀಪಕ್ ರಾವ್ ಕೊಲೆ ಪ್ರಕರಣ ವೇಳೆ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.


ಇಲ್ಯಾಸ್ ವಿರುದ್ಧ ಕ್ರಿಮಿನಲ್ ಆರೋಪ ಇರುವ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನದಿಂದ ತೆಗೆದುಹಾಕುವಂತೆ ಪಕ್ಷದ ಮುಖಂಡರಿಗೆ ಮನವಿ ಮಾಡಲಾಗಿದೆ ಎಂದು ಸಚಿವ ಯು.ಟಿ. ಖಾದರ್ ಸಮಜಾಯಿಷಿ ನೀಡಿದ್ದರು. ಅಲ್ಲದೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಕೂಡ, ಇಲ್ಯಾಸ್ ತಪ್ಪಿತಸ್ಥನಾದರೆ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಆದರೆ ಈತನ ಹತ್ಯೆಯ ನಂತರ ಅಂತಿಮ ದರ್ಶನಕ್ಕೆ ಯುವ ಕಾಂಗ್ರೆಸ್‌ನ ಸಹಚರರನ್ನು ಹೊರತುಪಡಿಸಿದರೆ, ಎಲ್ಲ ಕಾಂಗ್ರೆಸ್ ನಾಯಕರು ಬಾರದೆ ದೂರ ಉಳಿದಿದ್ದರು.

ರೌಡಿಶೀಟರ್ ಇಲ್ಯಾಸ್ ಅಲಿಯಾಸ್‌ ಟಾರ್ಗೆಟ್‌ ಇಲ್ಯಾಸ್(32) ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯೊಂದರಲ್ಲೇ 20 ಪ್ರಕರಣಗಳಿವೆ. ವೈದ್ಯಕೀಯ ವಿದ್ಯಾರ್ಥಿಗಳ ಅಪಹರಣ ಮತ್ತು ನಗ್ನ ಚಿತ್ರ ತೆಗೆದಿರುವ ಪ್ರಮುಖ ಆರೋಪಿ ಸಫ್ವಾನ್ ಕೈಯಿಂದ 20 ಲಕ್ಷ ಹಣವನ್ನು ತೆಗೆಸಿಕೊಟ್ಟಿದ್ದ.. ಆದರೆ ಸರಿಯಾದ ಸಮಯಕ್ಕೆ ಹಣವನ್ನು ವಾಪಸ್ ಮಾಡಲು ಸಾಧ್ಯವಾಗದೆ, ಮಧ್ಯವರ್ತಿಯಾಗಿದ್ದ ಟಾರ್ಗೆಟ್‌ ಇಲ್ಯಾಸ್ ಜೊತೆಗೆ ಸಫ್ವಾನ್ ವೈರತ್ವವನ್ನು ಕಟ್ಟಿಕೊಂಡಿದ್ದ. ಇದು ಮುಂದುವರಿದು ಇಲ್ಯಾಸ್ ಕೊಲೆಗೆ ಸಫ್ವಾನ್ ತಂಡ ಎರಡು ಬಾರಿ ಪ್ರಯತ್ನಿಸಿತ್ತು ಎಂದು ಹೇಳಲಾಗಿದೆ.

ಗಾಂಜಾಕ್ಕೂ, ಹಫ್ತಾ ಬೆದರಿಕೆಯಲ್ಲಿ ಇಲ್ಯಾಸ್ ತಂಡ ಸಕ್ರಿಯವಾಗಿತ್ತು. ಉಳ್ಳಾಲದಲ್ಲಿ ದಾವೂದ್ ಎಂಬಾತನ ಕೊಲೆಗೆ ಯತ್ನಿಸಿದ ಪ್ರಕರಣ ಇಲ್ಯಾಸ್ ವಿರುದ್ಧ ದಾಖಲಾಗಿತ್ತು. ಇದೇ ಪ್ರಕರಣ ಸೇರಿದಂತೆ ಮೂರು ಪ್ರಕರಣದಲ್ಲಿ ಇಲ್ಯಾಸ್ ತಲೆಮರೆಸಿಕೊಂಡಿದ್ದ..

ಬಳಿಕ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಇಲ್ಯಾಸ್‌ನನ್ನು ಬಂಧಿಸಿದ್ದರು. ನ್ಯಾಯಾಂಗ ಬಂಧನದ ಬಳಿಕ ಇಲ್ಯಾಸ್ ಮೂರು ದಿನಗಳ ಹಿಂದೆಯಷ್ಟೇ ಜೈಲಿನಿಂದ ಹೊರಬಂದಿದ್ದ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು