• A
  • A
  • A
ವಸಂತ ಶೆಟ್ಟಿ ಬೆಳ್ಳಾರೆಗೆ 'ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ' ಪ್ರಶಸ್ತಿ

ಮಂಗಳೂರು: ತುಳು ಮಾತೃ ಭಾಷಿಗರು ಹೊರನಾಡಿನಲ್ಲಿ ಕನ್ನಡ ಸಂಘಟನೆಯಲ್ಲಿ ತೊಡಗಿಕೊಂಡು ಉತ್ತಮ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಮುಂಬೈನ ಚೆಂಬೂರು ಕರ್ನಾಟಕ ಸಂಘದ 'ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ' ಪ್ರಶಸ್ತಿಯನ್ನು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರಿಗೆ ಪ್ರದಾನ ಮಾಡಲಾಯಿತು.


ಪ್ರಶಸ್ತಿಯನ್ನು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಡಾ. ಶಿವರಾಜ ಪಾಟೀಲ್ ಅವರು ಪ್ರಧಾನ ಮಾಡಿದರು. ವಸಂತ ಶೆಟ್ಟಿ ಬೆಳ್ಳಾರೆ ಕಳೆದ ಮೂರು ದಶಕಕ್ಕೂ ಮಿಕ್ಕಿ ದೆಹಲಿಯ ಕನ್ನಡ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪನೆ ಮತ್ತು ಸಂಘದ ಮುಂಭಾಗದಲ್ಲಿರುವ ಮೆಟ್ರೋ ನಿಲ್ದಾಣಕ್ಕೆ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ಹೆಸರು ಮುಂತಾದ ಕಾರ್ಯಗಳು ಇವರ ಅಧ್ಯಕ್ಷತೆಯ ಅವಧಿಯಲ್ಲಿ ಆಗಿದೆ.

ಚೆಂಬೂರು ಕರ್ನಾಟಕ ಸಂಘದ 'ಸಾಹಿತ್ಯ ಸಹವಾಸ-2017' ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಯಾಗಿ ಬೆಂಗಳೂರು ದೂರದರ್ಶನ ಕೇಂದ್ರ, ದಕ್ಷಿಣ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ನಾಡೋಜ ಮಹೇಶ್ ಜೋಷಿ, ಸಂಘದ ಅಧ್ಯಕ್ಷ, ನ್ಯಾಯವಾದಿ ಎಚ್.ಕೆ. ಸುಧಾಕರ ಅರಾಟೆ ಪಾಲ್ಗೊಂಡಿದ್ದರು.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು