• A
  • A
  • A
ಜನಪದ ಸೊಗಡಲ್ಲಿ ಭತ್ತದ ನಾಟಿ ಮಾಡುವ ಮಲೆನಾಡ ಮಹಿಳೆಯರು!

ಚಿಕ್ಕಮಗಳೂರು: ಕೃಷಿ ಪದ್ಧತಿಯಲ್ಲಿ ಅನೇಕ ಆವಿಷ್ಕಾರಗಳು ಆಗಿದ್ದರೂ ಕೂಡ ಮಲೆನಾಡಿನ ಅನೇಕ ಹಳ್ಳಿಯಲ್ಲಿ ಸಂಪ್ರದಾಯಿಕ ಕೃಷಿ ಚಟುವಟಿಕೆ ಇಂದಿಗೂ ನಡೆಯತ್ತಿರುವುದಕ್ಕೆ ಮಲೆನಾಡಿನ ಈ ಹಳ್ಳಿ ಸಾಕ್ಷಿಯಾಗಿದೆ.


ಆಧುನಿಕ ದಿನಗಳಲ್ಲಿ ರೈತರು ಹೊಲ-ಗದ್ದೆಗಳಲ್ಲಿ ನಾಟಿ ಮಾಡುವ ವಿಧಾನವೇ ಬೇರೆ. ಹತ್ತಿಪ್ಪತ್ತು ಜನ ಏಕಕಾಲದಲ್ಲಿ ಟ್ರ್ಯಾಕ್ಟರ್, ಟಿಲ್ಲರ್​ಗಳ ಸಹಾಯದಿಂದ ಒಂದೇ ದಿನದಲ್ಲಿ ಭತ್ತದ ಗದ್ದೆಗಳ ನಾಟಿಯನ್ನ ಮುಗಿಸಿರ್ತಾರೆ. ಆದರೆ ಮೂಡಿಗೆರೆ ತಾಲೂಕಿನ ಬಿನ್ನಡಿ-ಕೊಡೆಬೈಲ್ ಗ್ರಾಮದಲ್ಲಿ ಹಾಗಾಲ್ಲ. ನಾಟಿ ಮಾಡುವ ಹೆಂಗಸರೆಲ್ಲಾ ಸಂಪ್ರದಾಯಿಕ ಉಡುಗೆ ತೊಟ್ಟು ಭೂಮಿ ತಾಯಿಗೆ ಮತ್ತು ವರುಣ ದೇವನಿಗೆ ಪೂಜೆ ಸಲ್ಲಿಸಿ ಪದವಾಡ್ತಾ ಬಿತ್ತನೆ ಮಾಡಲು ಗದ್ದೆಗೆ ಇಳಿಯುತ್ತಾರೆ.
ಈ ಸಂಸ್ಕೃತಿ ಮಲೆನಾಡಿನ ಹಲವೆಡೆ ಇಂದಿಗೂ ಜೀವಂತ. ಸಾಮಾನ್ಯವಾಗಿ ಎಲ್ಲರಿಗೂ ಹಾಡು ಬರೋದಿಲ್ಲ. ಹಿರಿಯ ಜೀವಗಳು ಈ‌ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿವೆ. ಆದ್ರೆ, ಈ ಜಾನಪದ ಹಾಡು ಬರುವಂತವರು ಹಾಡು ಹೇಳ್ತಾ ನಾಟಿ ಮಾಡಿದ್ರೆ ಉಳಿದ ಮಹಿಳೆಯರು ಅವರ ಧ್ವನಿಗೆ ದನಿಯಾಗ್ತಾರೆ. ಮಲೆನಾಡಿನ ಮಹಿಳೆಯರ ಈ ನಾಟಿ ಹಾಡು ಕೇಳುವುದೇ ಹೊಸ ಅನುಭವ. ಈ ಆಚರಣೆ ಹೊಸ ತಲೆಮಾರಿಗೂ ಆದರ್ಶವಾಗಿದೆ. ಈ ಆಚರಣೆ ಮಲೆನಾಡಲ್ಲಿ ಎಂದಿಗೂ ಮರೆಯಾಗೋದಿಲ್ಲ. ಬೆಳೆ ಬರಲಿ, ಬಾರದಿರಲಿ. ಮಲೆನಾಡಿನ‌ ಜನರು ಈ ರೀತಿಯ ಆಚರಣೆ ಇಲ್ಲದೆ ಗದ್ದೆಗಳನ್ನ ನಾಟಿ ಮಾಡೋದಿಲ್ಲ. ಇಂತಹ ಆಚರಣೆಗಳು ನಿರಂತರವಾಗಿ ಉಳಿದು ಬೆಳೆಯಬೇಕಾದ ಅವಶ್ಯಕತೆ ಇದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು