• A
  • A
  • A
ಸ್ಥಳೀಯ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಗಲಿ: ಡಾ. ಸೇಡಂ

ಯಾದಗಿರಿ: ಪ್ರಸಕ್ತ ದಿನಗಳಲ್ಲಿ ಗ್ರಾಮೀಣ ಭಾಗದ ರೈತರು ತಮ್ಮ ಜಮೀನಿನಲ್ಲಿ ಬದುಕಿಗೆ ಅವಶ್ಯಕತೆ ಇರುವ ಆಹಾರ ಪದಾರ್ಥಗಳನ್ನು ಬೆಳೆಯಲು ಒತ್ತು ನೀಡಬೇಕು. ಜೊತೆಗೆ ಸ್ಥಳೀಯ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾದಾಗ ಮಾತ್ರ ದೇಶದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ವಿಕಾಸ ಅಕಾಡೆಮಿ ಅಧ್ಯಕ್ಷ ಹಾಗೂ ಸಂಸದ ಡಾ. ಬಸವರಾಜ ಪಾಟೀಲ್ ಸೇಡಂ ಹೇಳಿದರು.


ಇಂದು ನಗರದ ಲಕ್ಷ್ಮೀ ದೇವಸ್ಥಾನ ಆವರಣದಲ್ಲಿ ಅಕಾಡೆಮಿಯ ಜಿಲ್ಲಾ ಸಂಚಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರು ಹಣದಾಸೆಗೆ ಬಿದ್ದು, ವಾಣಿಜ್ಯ ಬೆಳೆ ಬೆಳೆಯಲು ಅತೀ ಹೆಚ್ಚು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಕೆ ಮಾಡಿ ಭೂಮಿ ತಾಯಿಯೊಂದಿಗೆ ಜೂಜಾಟದಲ್ಲಿ ತೊಡಗಿದ್ದಾನೆ. ಇದು ಆತಂಕದ ಬೆಳೆವಣಿಗೆ ಇದನ್ನು ಕೈಬಿಟ್ಟು ಸಾವಯವ ಕೃಷಿ ಪದ್ಧತಿ ಅನುಸರಿಸಿ ತರಕಾರಿ, ತೋಟಗಾರಿಕೆ, ವಾಣಿಜ್ಯ ಬೆಳೆ ಕೂಡ ಬೆಳೆದು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯುವದು ಅಗತ್ಯ ಎಂದು ಕರೆ ನೀಡಿದರು.

ಸಭೆಯಲ್ಲಿ ಸಂಚಾಲಕರಾದ ಎಚ್.ಸಿ.ಪಾಟೀಲ್ ರಾಜನಕೊಳ್ಳೂರ, ಸಿದ್ದನಗೌಡ ಕಾಡಂನೋರ್, ಜಿ.ಪಂ. ಸದಸ್ಯ ಬಸವರಾಜ ಸ್ವಾಮಿ ಸ್ಥಾವರಮಠ, ಸಂಗನಗೌಡ ವಜ್ಜಲ್, ಡಾ. ಮರೆಪ್ಪ ವಡಗೇರಾ, ವೇಣುಗೋಪಾಲ ಗುರುಮಠಕಲ್ ಸೇರಿದಂತೆ ಇತರರಿದ್ದರು.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು