• A
  • A
  • A
ಸತ್ತನೆಂದು ಜೋರಾಗಿ ಅತ್ತ ಸಂಬಂಧಿಕರು... ಕಣ್ಣುಬಿಟ್ಟು ಶಾಕ್​ ಕೊಟ್ಟ ಭೂಪ!

ಕಲಬುರಗಿ: ಸಾವನ್ನಪ್ಪಿದ್ದಾನೆಂದು ಭಾವಿಸಿ ಮನೆಯಲ್ಲಿ ಕೂಡಿಸಿ ಅಳುವಾಗ ವ್ಯಕ್ತಿಯೋರ್ವ ಮತ್ತೆ ಉಸಿರಾಡಿ ಆಶ್ಚರ್ಯ ಚಕಿತಗೊಳಿಸಿದ ಘಟನೆ ಅಫ್ಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರದಲ್ಲಿ ನಡೆದಿದೆ.


ಈಶ್ವರ ವಾವಡೆ (34) ಎಂಬ ವ್ಯಕ್ತಿ ಸತ್ತು ಬದುಕಿದ್ದು ಎಲ್ಲರನ್ನು ಆಶ್ಚರ್ಯ ಚಕಿತಗೊಳಿಸಿದೆ. ಮೂಲತಃ ಸ್ಟೇಷನ್ ಗಾಣಗಾಪುರದವನಾದ ಈಶ್ವರ, ಮುಂಬೈ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ತೀವ್ರ ಅನಾರೋಗ್ಯದ ಹಿನ್ನೆಲೆ ಕಳೆದ ಒಂದು ವಾರದ ಹಿಂದೆ ಸ್ಟೇಷನ್ ಗಾಣಗಾಪುರಕ್ಕೆ ಬಂದಿದ್ದ ಆತನನ್ನು ಸೋಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು.


ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಆತ ಬದುಕುವುದು ತುಂಬಾ ಕಠಿಣ ಅಂತ ವೈದ್ಯರು ತಿಳಿಸಿದ್ದರು. ಹೀಗಾಗಿ ನಿನ್ನೆ ರಾತ್ರಿ ಆತನನ್ನು ಅಂಬುಲೆನ್ಸ್ ಮೂಲಕ ಸೊಲ್ಲಾಪುರದಿಂದ ಸ್ಟೇಷನ್ ಗಾಣಗಾಪುರಕ್ಕೆ ಕರೆತರಲಾಗುತ್ತಿತ್ತು. ಮಾರ್ಗ ಮದ್ಯೆ ಆತನ ಉಸಿರು ನಿಂತುಹೋಗಿತ್ತು.

ಈಶ್ವರ್ ಮೃತಪಟ್ಟಿರುವ ಬಗ್ಗೆ ಕುಟುಂಬಸ್ಥರು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿ ಇಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಈಶ್ವರ ಅಂತ್ಯಕ್ರಿಯೆಗೆ ಎಂದು ಆಗಮಿಸಿದ ಸಂಬಂಧಿಗಳು ಜೋರಾಗಿ ಅಳಲು ಆರಂಭಿಸಿದ್ದಾರೆ. ಆಗ ಈಶ್ವರ್ ಏಕಾಏಕಿ ಕಣ್ಣು ತೆರೆದಿದ್ದಾನೆ. ಇದರಿಂದ ಗಾಬರಿ ಮತ್ತು ಆಶ್ಚರ್ಯಗೊಂಡ ಕುಟುಂಬಸ್ತರು ತಕ್ಷಣ ಈಶ್ವರನನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಸದ್ಯಕ್ಕಂತೂ ಈಶ್ವರ್ ಪ್ರಾಣಾಪಾಯದಿಂದ ಪಾರಾಗಿದ್ದು, ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈಶ್ವರ್ ಬದುಕುಳಿಯುವ ಬಗ್ಗೆ ಇನ್ನೂ 24 ಗಂಟೆಗಳ ಕಾಲ ಏನು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು