• A
  • A
  • A
ಈ ತಾಂಡಾಗಳಲ್ಲಿ ದೀಪಾವಳಿ ಸಂಭ್ರಮವಿಲ್ಲ, ಹೊತ್ತಿ ಉರಿಯಿತು ಶೋಕದ ದೀಪ

ಬೀದರ್​: ದೀಪಾವಳಿ ಸಮಯದಲ್ಲಿ ಎಲ್ಲೆಡೆ ಸಂಭ್ರಮ ಮಡುಗಟ್ಟಿದರೆ ಇಲ್ಲಿ ಮಾತ್ರ ಅದೊಂದು ಶೋಕದ ಪ್ರತೀಕ. ಬಂಜಾರಾ ಸಮುದಾಯದಲ್ಲಿ ದೀಪಾವಳಿ ಒಂದು ಕರಾಳ ದಿನ, ಶೋಕಾಚರಣೆ. ಐದು ದಿನಗಳ ಕಾಲ ನೀರವ ಮೌನದ ಹಬ್ಬ, ಇದು ವಿಚಿತ್ರ ಅನಿಸಿದರೂ ಸತ್ಯ.


ಹಬ್ಬದ ಕೊನೆಯ ದಿನವಾದ ಶುಕ್ರವಾರ ಸಾರ್ವಜನಿಕ ದೀಪೋತ್ಸವ ನಡೆಯಿತು. ಜನರಿಗೆ ಬರದಿಂದ ಮುಕ್ತಿ ಕೊಡುವಂತೆ ಬೇಡಿಕೊಳ್ಳಲಾಯಿತು. ಜಿಲ್ಲೆಯ ಔರಾದ್ ಪಟ್ಟಣದ ಸುತ್ತಲಿನ ಒಟ್ಟು 11ತಾಂಡಗಳ ಬಾಲಕಿಯರು, ಯುವತಿಯರು ಹಾಗೂ ಗೃಹಿಣಿಯರು ಕೈಯಲ್ಲಿ ದೀಪ ಹಿಡಿದುಕೊಂಡು ಐದೈದು ಜನರ ಸರತಿ ಸಾಲು ಮಾಡಿಕೊಂಡು ಮಿನಿವಿಧಾನಸೌಧದಿಂದ ಅಮರೇಶ್ವರ ಮಂದಿರದವರೆಗೆ ಲಂಬಾಣಿ ಹಾಡುಗಳನ್ನು ಹಾಡುತ್ತ ಮೆರವಣಿಗೆ ಮಾಡಿದರು.
ದೀಪಾವಳಿಯ ಕಾಳಿ ಅಮವಾಸ್ಯೆ ದಿನದಂದು ತಾಂಡಾಗಳಲ್ಲಿ ವಿಚಿತ್ರ ಪದ್ದತಿಗಳು ನಡೆಯುತ್ತವೆ. ಅಂದು ಸಂಜೆ ಮನೆಯಲ್ಲಿ ದೀಪ ಹಚ್ಚುವುದಿಲ್ಲ ಬದಲಾಗಿ ತಾಂಡಾ ಮುಖಂಡನ ಮನೆಯಲ್ಲಿ ಮಾತ್ರ ಹಚ್ಚಲಾಗಿರುವ ಒಂದು ಶೋಕ ದೀಪ ಇರುತ್ತದೆ.

ತಾಂಡಾದ ಅವಿವಾಹಿತ ಯುವತಿಯರು ತಾಂಡಾ ನಾಯಕನ ಮನೆಗೆ ಆರಿದ ದೀಪ ತೆಗೆದುಕೊಂಡು ಹೋಗುತ್ತಾರೆ. ತಾಂಡಾ ನಾಯಕನ ಮನೆಯಲ್ಲಿ ಶೋಕದ ದೀಪದಿಂದ ನಾಯಕನ ಅಪ್ಪಣೆ ಮೇರೆಗೆ ಈ ಯುವತಿಯರು ದೀಪ ಬೆಳಗಿಸಿ ತಾಂಡಾದ ಮನೆ-ಮನೆಗೆ ತೆರಳಿ ದೀಪ ಹಚ್ಚುತ್ತಾ ಈ ವರ್ಷವಾದರೂ ನಮ್ಮ ಸಮುದಾಯಕ್ಕೆ ಒಬ್ಬ ನಾಯಕ ನೀಡು. ಅವನಿಲ್ಲದೆ ನಾವೂ ಅನಾಥರಾಗಿದ್ದೇವೆ ಎಂದು ಲಂಬಾಣಿ ಭಾಷೆಯಲ್ಲಿ `ವರ್ಷೇ ದಾಡೋರಿ ಕೋಟಿ ದವಾಳಿ ಯಾಡಿ ತಾಣ ಮೇರಾ’ ಎಂದು ಹಾಡುತ್ತ ಮನೆ ಮನೆಯಲ್ಲಿ ದೀಪ ಹಚ್ಚುತ್ತಾರೆ.

ಪ್ರತಿ ವರ್ಷ ಇಲ್ಲಿ ದೀಪಾವಳಿ ಹಬ್ಬವನ್ನು ಈ ರೀತಿಯಲ್ಲೆ ಆಚರಣೆ ಮಾಡುತ್ತಾರೆ.CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು