• A
  • A
  • A
ಗಡಿ ಜಿಲ್ಲೆಗೆ ಬಿಜೆಪಿಯಿಂದ ಅಚ್ಚರಿಯ ಎಂಪಿ ಕ್ಯಾಂಡಿಡೇಟ್... ಯಾರಿವರು!?

ಚಾಮರಾಜನಗರ: 2019ರ ಲೋಕಸಭಾ ಚುನಾವಣೆಗೆ ಗಡಿಜಿಲ್ಲೆಗೆ ಬಿಜೆಪಿ ಅಚ್ಚರಿ ಮುಖ ಪರಿಚಯಿಸುವುದು ಫಿಕ್ಸ್ ಆಗಿದೆ.


ಹೌದು, 5 ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳ ನಡುವೆ ಮಾಜಿ ಸಚಿವ ವಿ. ಶ್ರೀನಿವಾಸ್​ ಪ್ರಸಾದ್​ರ ಮೂರನೇ ಅಳಿಯ ಡಾ.ಎನ್.ಎಸ್. ಮೋಹನ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದ್ದು, ಇವರಿಗೇ ಟಿಕೆಟ್ ಫಿಕ್ಸ್ ಆಗಿದೆ ಎಂದು ಪಕ್ಷದ ಧುರೀಣರೊಬ್ಬರು ಈನಾಡು ಇಂಡಿಯಾಗೆ ತಿಳಿಸಿದ್ದಾರೆ.
ಟಿಕೆಟ್ ಪಡೆದೇ ತೀರುತ್ತೇನೆಂದು ಪಣ ತೊಟ್ಟಿರುವ ಛಲವಾದಿ ಮಹಾಸಭಾ ಅಧ್ಯಕ್ಷ ಕೆ.ಶಿವರಾಂ ಹಿಂದಿಕ್ಕಿ ವಿ. ಶ್ರೀನಿವಾಸ್ ಪ್ರಸಾದ್ ತಮ್ಮ ಅಳಿಯನನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ. ಮೋಹನ್ ಅವರು ವೈದ್ಯರಾಗಿದ್ದು ಸಂಜಯಗಾಂಧಿ ಟ್ರಾಮ ಮತ್ತು ಅಸ್ತಿ ಚಿಕಿತ್ಸಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ. ಇವರು ಜಿಲ್ಲೆಯ ಎಲ್ಲಾ ಬಿಜೆಪಿ ಮುಖಂಡರನ್ನು ಮೊದಲ ಸುತ್ತು ಭೇಟಿ ಮಾಡಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಕೋರಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಆರೋಗ್ಯ ತಪಾಸಣೆಗಳ ಮೂಲಕ ಜಿಲ್ಲೆಯ ಜನರಿಗೆ ಮೋಹನ್ ಪರಿಚಿತರಾಗುತ್ತಿದ್ದು, ಪರೋಕ್ಷವಾಗಿ ಚುನಾವಣಾ ತಯಾರಿ ಆರಂಭಿಸಿದ್ದಾರೆ. ಹಳೇ ಮೈಸೂರು ಭಾಗದಲ್ಲಿನ ದಲಿತ ಐಕಾನ್ ಇಮೇಜು ಹೊಂದಿರುವ ಶ್ರೀನಿವಾಸ್​ ಪ್ರಸಾದ್ ಈ ಹಿಂದೆ 1980,1984,1989, 1991 ಹಾಗೂ 1999ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಆರಿಸಿ ಬಂದಿರುವುದು ಅಳಿಯ ಮೋಹನ್ ಅವರಿಗೆ ನೆರವಾಗಲಿದೆ.

ಹಾಲಿ ಸಂಸದ ಆರ್. ಧ್ರುವ ನಾರಾಯಣ ಕೂಡ ಹಲವು ಜನಪರ ಕಾರ್ಯಕ್ರಮಗಳನ್ನು ಮಾಡಿದ್ದು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಗುಸುಗುಸು ಕೇಳಿ ಬರುತ್ತಿದ್ದು, ಒಂದು ವೇಳೆ ಎನ್. ಮಹೇಶ್ ಅಖಾಡಕ್ಕಿಳಿದರೆ ಕಾಂಗ್ರೆಸ್ ಬುಟ್ಟಿಯಲ್ಲಿನ ಮತಗಳನ್ನು ಕಸಿಯಲಿದ್ದಾರೆ.

ಒಟ್ಟಾರೆಯಾಗಿ ಲೋಕಸಭೆ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳ ಆಕಾಂಕ್ಷಿಗಳು ಚುನಾವಣಾ ತಯಾರಿ ಆರಂಭಿಸಿದ್ದು ಚಾಮರಾಜನಗರದಲ್ಲಿ ತ್ರಿಕೋನ ಸ್ಪರ್ಧೆ ಬಹುತೇಕ ಖಚಿತವಾಗಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು