• A
  • A
  • A
ಹಿಟಾಚಿ ಯಂತ್ರದ ಮೇಲೆ ಬಿದ್ದ ವಾಟರ್‌ ಟ್ಯಾಂಕ್‌: ಪ್ರಾಣಾಪಾಯದಿಂದ ಪಾರಾದ ಚಾಲಕ

ಮುದ್ದೇಬಿಹಾಳ: ಶಿಥಿಲಾವಸ್ಥೆಯ ನೀರಿನ ಟ್ಯಾಂಕ್‌ವೊಂದು ಹಿಟಾಚಿ ಯಂತ್ರದ ಮೇಲೆ ಬಿದ್ದು ಚಾಲಕನೋರ್ವ ಪ್ರಾಣಾಪಾಯದಿಂದ ಪಾರಾದ ಘಟನೆ ಇಲ್ಲಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ.


ಬಹಳ ವರ್ಷದಿಂದ ಮೇಲ್ಮಟ್ಟದ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿತ್ತು. ಯಾವಾಗ ಕುಸಿಯುತ್ತೆ ಅನ್ನೋ ಭಯ ಸಾರ್ವಜನಿಕರಲ್ಲಿ ಇತ್ತು. ಇದನ್ನು ನೆಲಸಮಗೊಳಿಸುವಂತೆ ಹಲವು ಬಾರಿ ಸಾರ್ವಜನಿಕರು ಪಟ್ಟಣ ಪಂಚಾಯತಿ ಮೇಲೆ ಒತ್ತಡ ಹೇರಿದ್ದರು. ಹಿಗಾಗಿ ಇಂದು ಟ್ಯಾಂಕ್‌‌ ನೆಲಸಮಗೊಳಿಸಲು ಹಿಟಾಚಿ ಯಂತ್ರ ಬಳಸಿ ಕೆಲಸ ಮಾಡಲಾಗುತ್ತಿತ್ತು. ಈ ವೇಳೆ ಟ್ಯಾಂಕಿನ ಪಿಲ್ಲರ್‌‌‌ಗಳನ್ನು ಯಂತ್ರದಿಂದ ಒಡೆಯುವಾಗ ಈ ಘಟನೆ ನಡೆದಿದೆ.
ಏಕಾಏಕಿ ಮೇಲ್ಮಟ್ಟದ ಟ್ಯಾಂಕ್ ಕುಸಿದುಬೀಳತೊಡಗಿದಾಗ ಜನ ಗಾಬರಿಯಿಂದ ಕಿರುಚಾಡತೊಗಿದ್ದಾರೆ. ಆದರೆ, ಅಷ್ಟರೊಳಗೆ ಟ್ಯಾಂಕ್ ಕುಸಿದು ಹಿಟಾಚಿಯ ಮೇಲೆ ಬಿದ್ದಿದೆ. ಘಟನೆಯಿಂದ ಯಂತ್ರ ಜಖಂಗೊಂಡಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದರಿಂದ ಸ್ಥಳದಲ್ಲಿ ಕೂಡಿದ್ದ ಜನಸಮೂಹ ನಿಟ್ಟುಸಿರು ಬಿಟ್ಟಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು