• A
  • A
  • A
ವೀರ ಅಭಿಮನ್ಯು ಪಾತ್ರಧಾರಿಯಿಂದ ಯಕ್ಷಗಾನದಲ್ಲಿ ಹೊಸ ದಾಖಲೆ

ಬೆಂಗಳೂರು: ಬಡಗು ತಿಟ್ಟು ಯಕ್ಷಗಾನದಲ್ಲಿ ಬೆಂಕಿ ಚೆಂಡು ಎಂಬ ಬಿರುದಿನಿಂದ ಗುರುತಿಸಲ್ಪಡುವ ಸಾಲಿಗ್ರಾಮ ಮೇಳದ ಚಂದ್ರಹಾಸ ಗೌಡ ಎಂಬ ಕಲಾವಿದರು ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ರವೀಂದ್ರ ಕಲಾಕ್ಷೇತ್ರದಲ್ಲಿ ಅಹೋರಾತ್ರಿ ನಡೆಯುತ್ತಿದ್ದ ಯಕ್ಷಗಾನದಲ್ಲಿ ಅಭಿಮನ್ಯು ಪಾತ್ರಧಾರಿಯಾಗಿದ್ದ ಚಂದ್ರಹಾಸ ಗೌಡರು ನೂತನ ದಾಖಲೆ ಸೃಷ್ಟಿಸಿದ್ದಾರೆ. ಸತತ 8 ನಿಮಿಷ 30 ಸೆಕೆಂಡಿಗೂ ಹೆಚ್ಚು ಕಾಲ ಗಿರಕಿ ಕುಣಿದು ಬಡಗು ತಿಟ್ಟಿನ ಯಕ್ಷಗಾನದಲ್ಲಿ ಇವರು ದಾಖಲೆ ನಿರ್ಮಿಸಿದರು.


ಈ ಹಿಂದೆ ತೆಂಕುತಿಟ್ಟಿನಲ್ಲಿ ಖ್ಯಾದ ಕಲಾವಿದರಿಬ್ಬರು ಅರ್ಧ ಗಂಟೆ ಕಾಲ ಗಿರಕಿ ಹೊಡೆದು ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದರು. ನಿನ್ನೆ ರಾತ್ರಿ ಬಡಗು ತಿಟ್ಟಿನ ಅಬ್ಬರದ ವೇಷದ ಮಧ್ಯೆಯೇ ಸಾಲಿಗ್ರಾಮ ಮೇಳದ ಕಲಾವಿದರು ವಿಭಿನ್ನ ಪ್ರಯೋಗ ಮಾಡಿ, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕ್ಯಾದಗಿ ಆದಿತ್ಯ ಟ್ರಸ್ಟ್ ರವೀಂದ್ರ ಕಲಾಕ್ಷೇತ್ರದಲ್ಲಿ ಅಹೋರಾತ್ರಿ ಯಕ್ಷಗಾನ ಪ್ರದರ್ಶನ ಆಯೋಜಿಸಿತ್ತು.

ಅಭಿಮನ್ಯು ಪ್ರಸಂಗದ ಜೊತೆಗೆ ಸುಧನ್ವಾರ್ಜುನ, ಕೃಷ್ಣ ಅರ್ಜುನ , ಕೃಷ್ಣ ಸಂಧಾನ, ಧರ್ಮಾಂಗದ ಪ್ರಸಂಗಗಳಲ್ಲಿ ಒಟ್ಟು 32ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದರು.

ಪ್ರತಿ ಪ್ರಸಂಗದಲ್ಲೂ ಖ್ಯಾತ ಯಕ್ಷಗಾನ ಕಲಾವಿದರು ಭಾಗವಹಿಸಿ ತುಂಬಿದ ಸಭೆಗೆ ಮನರಂಜನೆ ನೀಡಿದರು. ಅದರಲ್ಲೂ ಅಭಿಮನ್ಯು ಪಾತ್ರಧಾರಿಯಾಗಿದ್ದ ಚಂದ್ರಹಾಸ ಗೌಡರ ವಿನೂತನ ಪ್ರಯೋಗ ಎಲ್ಲರಲ್ಲೂ ಮೈನವಿರೇಳಿಸುವಂತೆ ಮಾಡಿತು.

ಇಂದು ಮಧ್ಯಾಹ್ನ 2-30 ರಿಂದಲೇ ನಗರದ ಹಲವೆಡೆ ಬೇರೆ ಬೇರೆ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ತೆಂಕು ಪ್ರಸಿದ್ಧ ಭಾಗವತರ ಭಾಗವತಿಕೆಗಳು ಕೇಳಲು ಅವಕಾಶ ಸಿಕ್ಕಿದೆ. ಪುತ್ತಿಗೆ ರಘುರಾಮ್, ಪದ್ಯಾಣ ಗಣಪತಿ ಭಟ್ಟರು, ಪಟ್ಲ ಸತೀಶ್ ಅವರದ್ದು ಬಸವೇಶ್ವರ ನಗರದಲ್ಲಿ ನಡೆಯಲಿದೆ. ಕಲಾಕ್ಷೇತ್ರದಲ್ಲಿ ರಾತ್ರಿ ಸಾಲಿಗ್ರಾಮ ಮೇಳದ ಯಕ್ಷಗಾನ ಜರುಗಲಿದೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು