• A
  • A
  • A
ಪತ್ನಿಯರನ್ನ ಜತೆಗೆ ಕರೆದೊಯ್ಯಲು ಒಪ್ಪಿಗೆ ಸೂಚಿಸಿತಾ ಬಿಸಿಸಿಐ?

ಹೈದರಾಬಾದ್​: ವಿದೇಶಿ ಟೂರ್​ ವೇಳೆ ಸರಣಿಯುದ್ಧಕ್ಕೂ ಪತ್ನಿಯರ ಜತೆ ಇರಲು ಅವಕಾಶ ನೀಡುವಂತೆ ಕೋರಿ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಬಿಸಿಸಿಐಗೆ ಮನವಿ ಮಾಡಿದ್ದರು.ಇದೀಗ ಸುಪ್ರೀಂಕೋರ್ಟ್​ ರಚಿತ ಕ್ರಿಕೆಟ್​ ಆಡಳಿತ ಮಂಡಳಿ(ಸಿಒಎ)ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗಿದೆ.

courtesy: twitter


ಸಿಒಎ ಬಾಸ್​ ವಿನೋದ್​ ರಾಯ್​ ನೇತೃತ್ವದಲ್ಲಿ ಸಭೆ ಸೇರಿದ್ದ ಆಡಳಿತ ಮಂಡಳಿ ಸದಸ್ಯರು, ಆಟಗಾರರು ಕೋಚ್​ ಹಾಗೂ ಆಯ್ಕೆ ಸಮಿತಿ ಸದಸ್ಯರು ಹೈದರಾಬಾದ್​ನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ಆದರೆ, ಯಾವ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದನ್ನ ಗೌಪ್ಯವಾಗಿಡಲು ಸಭೆ ನಿರ್ಧರಿಸಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಬಹಿರಂಗವಾಗಿ ಚರ್ಚಿಸಲು ಸಿಒಎ ಬಾಸ್​ ವಿನೋದ್​ ರಾಯ್​ ತಯಾರಿಲ್ಲ. ಈ ವಿಷಯ ಹೇಗೆ ಹೊರಗೆ ಹೋಯಿತು ಎಂದು ರಾಯ್​ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಸಭೆಯಲ್ಲಾದ ಚರ್ಚೆಯನ್ನ ಗುಪ್ತವಾಗಿ ಇಡಲು ನಿರ್ಧರಿಸಲಾಗಿದೆ. ಇದಕ್ಕೆ ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


ಮುಂಬರುವ ಆಸ್ಟ್ರೇಲಿಯಾ ಟೂರ್​ ವೇಳೆ ಸ್ಪಷ್ಟ ನಿರ್ಧಾರ ಸಾಧ್ಯತೆ:

ಆಸ್ಟ್ರೇಲಿಯಾ ಟೂರ್​ ವೇಳೆಗೆ ಈ ಬಗ್ಗೆ ಬಿಸಿಸಿಐ ಸ್ಪಷ್ಟ ನಿರ್ಧಾರ ಹೊರ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಇತರ ದೇಶಗಳ ಕ್ರಿಕೆಟ್ ಆಡಳಿತ ಮಂಡಳಿಗಳ ಪಾಲಿಸಿಯನ್ನ ಪರಿಶೀಲಿಸಿ, ಅದರಲ್ಲೂ ಕ್ರಿಕೆಟ್​ ಆಸ್ಟ್ರೇಲಿಯಾ (ಸಿಎ) ನೀತಿಗಳನ್ನ ಚಕ್​ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ.

ವರ್ಲ್ಡ್​ ಕಪ್​ ಸೆಮೀಸ್​ ವರೆಗೂ ಪತ್ನಿಯರಿಗಿಲ್ಲ ಅವಕಾಶ:

2015 ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ನಲ್ಲಿ ವಿಶ್ವಕಪ್​ನಲ್ಲಿ ಸೆಮಿಫೈನಲ್​ ಹಂತದವರೆಗೂ ಆಟಗಾರರು ಪತ್ನಿಯರನ್ನ ಕರೆದುಕೊಂಡು ಹೋಗಲು ಅವಕಾಶ ನೀಡಿರಲಿಲ್ಲ. ಈ ಬಾರಿಯೂ ಇದೇ ನಿಯಮವನ್ನ ಅಳವಡಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗುತ್ತಿದೆ. ಇನ್ನೊಂದು ವಿಷಯ ಎಂದರೆ ಈ ನಿರ್ಧಾರ ಸರಣಿಯಿಂದ ಸರಣಿಗೆ ಬೇರೆಬೇರೆಯಾಗಿರುತ್ತದೆ. ಸರಣಿಯ ಅವಧಿ ಮೇಲೆ ಬಿಸಿಸಿಐ ನಿರ್ಧಾರ ಕೈಗೊಳ್ಳುತ್ತದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು