• A
  • A
  • A
ಮೊದಲ 6 ಓವರ್​ನಲ್ಲಿ ಆತ ಕ್ರೀಸ್​ನಲ್ಲಿದ್ದರೆ ಬೌಂಡರಿ, ಸಿಕ್ಸರ್​ಗಳ ಸುರಿಮಳೆ !: ಸಚಿನ್​ ತೆಂಡೊಲ್ಕರ್​

ಮುಂಬೈ: ಒಂದು ಕಾಲದಲ್ಲಿ ಬೌಲರ್​ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದು ವಿರೇಂದ್ರ ಸೆಹ್ವಾಗ್​ ಆರಂಭದ ದಿನಗಳಲ್ಲಿ ತುಂಬಾ ನಾಚಿಕೆ ಸ್ವಭಾವದವರಾಗಿದ್ದರು, ನನ್ನ ಜೊತೆ ಬ್ಯಾಟಿಂಗ್​ ಬಂದರೆ ಮಾತನಾಡುತ್ತಿರಲಿಲ್ಲ ಎಂದು ಬ್ಯಾಟಿಂಗ್​ ದಿಗ್ಗಜ ಸಚಿನ್​ ತೆಂಡೊಲ್ಕರ್​ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.


ವಾಟ್​ ದಿ ಡಕ್​ ಕಾರ್ಯಕ್ರಮದಲ್ಲಿ ವೀರೂ ಜೊತೆಗಿನ ತಮ್ಮ ಕ್ರಿಕೆಟ್​ ಜೀವನದ ಅನುಭವವನ್ನು ಹಂಚಿಕೊಂಡ ಸಚಿನ್​, ಸೆಹ್ವಾಗ್‌ ಆರಂಭದ ದಿನಗಳಲ್ಲಿ ನನ್ನ ಜೊತೆ ಮಾತನಾಡುತ್ತಿರಲಿಲ್ಲ, ಮೈದಾನದೊಳಗೆ ಇಬ್ಬರು ಬ್ಯಾಟಿಂಗ್​ ನಡೆಸುವಾಗ ಒಬ್ಬರೊನ್ನೊಬ್ಬರು ಮಾತನಾಡದಿರುವುದು ಪಂದ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂದು ನಾನೆ ಆತನನ್ನು ಮಾತನಾಡಿಸುತ್ತದ್ದೆ ಎಂದು ಹೇಳಿಕೊಂಡಿದ್ದಾರೆ.

ಮತ್ತೊಂದು ಘಟನೆ ನೆನಪಿಸಿಕೊಂಡ ಸಚಿನ್​, ಒಂದು ದಿನ ಪಂದದ ಆರಂಭಕ್ಕೂ ಮುನ್ನ ಚಿಕನ್, ಫಿಶ್​ ಏನಾದರೂ ಆರ್ಡರ್​ ಮಾಡ್ಲಾ ಎಂದು ಕೇಳದ್ರಂತೆ, ಆಗ ವೀರೂ, ಚಿಕನ್​ ತಿಂದರೆ ನಾನು ದಪ್ಪ ಆಗ್ಬಿಡ್ತೀನಿ ಎಂದು ನಮ್ಮ ಮನೆಯಲ್ಲಿ ಹೇಳಿದ್ದಾರೆ ಎಂದು ತಿಳಿಸಿದ್ದರಂತೆ. ಜೊತೆಗೆ ವೀರೂ ಬ್ಯಾಟಿಂಗ್​ ಇಳಿದರೆ ಮೊದಲ 6 ಓವರ್​ಗಳಲ್ಲಿ ಅವರನ್ನು ಕಂಟ್ರೋಲ್​ ಮಾಡಲು ಬೌಲರ್​ಗಳಿಗೆ ಅಸಾಧ್ಯದ ಮಾತಾಗಿತ್ತು ಎಂದು ಸಚಿನ್​ ಇದೇ ವೇಳೆ ಅಭಿಪ್ರಾಯ ಪಟ್ಟಿದ್ದಾರೆ.​

ಇನ್ನು ಇದೇ ಕಾರ್ಯಕ್ರಮದಲ್ಲಿ ಸಚಿನ್​ ಜೊತೆ ಭಾಗವಹಿಸಿದ್ದ ಸೆಹ್ವಾಗ್​ ಕೂಡ ತಮ್ಮ ಹಾಗೂ ಸಚಿನ್​ ಒಡನಾಟದ ಬಗ್ಗೆ ತಿಳಿಸಿದ್ದು, ವೀರೂ ಸಚಿನ್​ರನ್ನ 1992 ರ ವಿಶ್ವಕಪ್​ನಿಂದ ಟಿವಿಯಲ್ಲಿ ನೋಡುತ್ತಿದ್ದರಂತೆ. ಅಂದಿನಿಂದಲೇ ತಾವೂ ಸಚಿನ್​ ಅವರ ಆಟವನ್ನು ಅನುಕರಣೆ ಮಾಡುತ್ತಿದ್ದೆ, ಆದರೆ, ತಮ್ಮ ಜೀವನದಲ್ಲಿ ಸಚಿನ್​ ಜೊತೆ ಆಡಿದ್ದೇ ನನ್ನ ಭಾಗ್ಯ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಸಚಿನ್​ ಮೊದಲ ಭೇಟಿಯಲ್ಲಿ ಅವರು ನನ್ನ ಕೈ ಕುಲಕಿದಾಗ ನನ್ನ ಕೈ ನಡುಗುತ್ತಿತ್ತು ಎಂದು ತಮ್ಮ ಸಚಿನ್​ರ ಭೇಟಿಯ ಪ್ರಸಂಗವನ್ನು 'ವಾಟ್​ ದ ಡಕ್"​ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು