• A
  • A
  • A
ಚೀನಾ ಅಲ್ಲ, ಭಾರತದ ಮಹಾ ಗೋಡೆಯನ್ನು ನೋಡಿದ್ದೀರಾ? ಇಲ್ಲಾಂದ್ರೆ ನೋಡಿ....

ಕುಂಭಾಲ್‌ಗಡ್‌, ರಾಜಸ್ಥಾನದ ರಾಜ್‌ಸಮಂಧ್‌ ಜಿಲ್ಲೆಯಲ್ಲಿ ಒಂದು ಪ್ರಮುಖ ಪ್ರವಾಸ ತಾಣವಿದೆ. ಈ ಸ್ಥಳ ರಾಜಸ್ಥಾನದ ದಕ್ಷಿಣ ಭಾಗದಲ್ಲಿದೆ. ಈ ಸ್ಥಳವನ್ನು ಕುಂಭಲ್‌ಮೇರ್‌ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕುಂಭಾಲ್‌ಗಡ್‌ ಕೋಟೆ ರಾಜಸ್ಥಾನದ ಎರಡನೇ ಮಹತ್ವ ಪೂರ್ಣ ಕೋಟೆಯಾಗಿದೆ. ಇದರ ನಿರ್ಮಾಣ 15ನೇ ಶತಮಾನದಲ್ಲಿ ರಾಣಾ ಕುಂಭಾ ಮಾಡಿದರು. ಪ್ರವಾಸಿಗರು ಈ ಕೋಟೆಯ ಮೇಲಿಂದ ಸುತ್ತಮುತ್ತಲಿನ ರಮಣೀಯ ದೃಶ್ಯಗಳ ಆನಂದವನ್ನು ಪಡೆದುಕೊಳ್ಳಬಹುದು.


ಶತ್ರುಗಳಿಂದ ರಕ್ಷಣೆ ಪಡೆಯಲು ಈ ಕೋಟೆಯ ನಾಲ್ಕು ಮೂಲೆಗಳಲ್ಲಿ ಗೋಡೆಯ ನಿರ್ಮಾಣ ಮಾಡಲಾಗಿದೆ. ಇದನ್ನು ನೋಡಿದರೆ ಚೀನಾದ ಮಹಾ ಗೋಡೆಯಂತೆ ಕಾಣಿಸುತ್ತದೆ.. ಚೀನಾದ ಗೋಡೆಯ ನಂತರದ ಅತ್ಯಂತ ದೊಡ್ಡ ಕೋಟೆ ಇದಾಗಿದೆ.

ಬಾದಲ್‌ ಮಹಲ್ :
ರಾಜಸ್ಥಾನದ ಇತರ ಸ್ಥಳಗಳಂತೆ, ಕುಂಭಾಲ್‌ಗಡ್‌ ಕೂಡ ಹಲವಾರು ಮಹಲ್‌ಗಳಿಂದ ಜನಪ್ರಿಯತೆ ಪಡೆದಿದೆ. ಅದರಲ್ಲಿ ಬಾದಲ್‌ ಎಂಬ ಹೆಸರಿನ ಮಹಲ್‌ ಕೂಡ ಇದೆ. ಇದು ಇಮಾರತ್‌ ಬಾದಲೋಕಿ ಮಹಲ್‌ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ. ಮರ್ದಾನ ಮಹಲ್‌ ಹಾಗೂ ಜನಾನಾ ಮಹಲ್‌ ಈ ಮಹಲ್‌ನ ಅಕ್ಕಪಕ್ಕದಲ್ಲಿದೆ. ಈ ಮಹಲ್‌ನ ಒಂದು ಸುಂದರವಾದ ಕೋಣೆಯನ್ನು ಪೆಸ್ಟಲ್‌ ಬಣ್ಣದಲ್ಲಿ ನಿರ್ಮಾಣ ಮಾಡಿದ ಭಿತ್ತಿ ಚಿತ್ರದಿಂದ ತುಂಬಿದೆ. ಇದರ ಮಂಟಪದಲ್ಲಿ ಅದ್ವಿತಿಯ ಶಿಲ್ಪ ಕಲೆಯನ್ನು ಹೊಂದಿದೆ.


ಕುಂಭಗಡದ ಪ್ರವಾಸಿ ತಾಣದಲ್ಲೊಂದು ಸುತ್ತು :
ಕುಂಭಗಡದ ತನ್ನ ಸುಂದರವಾದ ಮಹಲ್‌ಗಳಿಂದ ಮಾತ್ರವಲ್ಲ ಹಲವಾರು ಪ್ರಾಚೀನ ಮಂದಿರಗಳಿಂದಲೂ ಜನಪ್ರಿಯತೆ ಗಳಿಸಿದೆ. ಅದರಲ್ಲಿ ವೇದಿ ಮಂದಿರ, ನೀಲಕಂಠ ಮಂದಿರ, ಮಚ್ಛಲ್‌ ಮಹಾದೇವ ಮಂದಿರ, ಪರಶುರಾಮ ಮಂದಿರ, ಮಮ್ಮಾದೇವ್‌ ಮಂದಿರ ಮತ್ತು ರಣ್‌ಕಪೂರ್‌ ಮಂದಿರ ಪವಿತ್ರ ಸ್ಥಳವಾಗಿದೆ.

ಕುಂಭಲಗಡ್‌ ಅಭಯಾರಣ್ಯವೂ ಇಲ್ಲಿದೆ. ಇಲ್ಲಿ ನಿಮಗೆ ಜಿಂಕೆ, ಕಾಡು ಹಂದಿ, ಕಾಡು ಬೆಕ್ಕು, ನೀಲಗಿರಿ ಮತ್ತು ಮೊಲ ನೋಡಲು ಸಿಗುತ್ತದೆ. ರಾಜಸ್ಥಾನದಲ್ಲಿ ಕೇವಲ ಇಲ್ಲಿ ಮಾತ್ರ ನೀವು ಜಿಂಕೆಗಳನ್ನು ನೋಡಬಹುದು. ಇಲ್ಲಿರುವ ಇತರ ಪ್ರಮುಖ ಪ್ರದೇಶ ಎಂದರೆ ಹಲ್ದಿಘಾಟ್‌ ಮತ್ತು ಘಣೇರೋ.

ಹೇಗೆ ತಲುಪುವುದು :
ಪ್ರವಾಸಿಗರು ಸುಲಭವಾಗಿ ರೈಲ್ವೇ ಮಾರ್ಗ, ವಾಯು ಮಾರ್ಗ ಮತ್ತು ರಸ್ತೆಯ ಮೂಲಕ ಪ್ರಯಾಣ ಬೆಳೆಸಬಹುದು. ಉದಯ್‌ಪುರದ ಮಹಾರಾಣಾ ಪ್ರತಾಪ್‌ ಅಥವಾ ಡಬೋಕಾ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಬಹುದು. ವಿದೇಶಿ ಪ್ರವಾಸಿಗರು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿದಂದ ಪ್ರಯಾಣ ಬೆಳೆಸಬಹುದು.

ಯಾವ ತಿಂಗಳು ಸೂಕ್ತ :
ಕುಂಭಲ್‌ಗಡ್‌ನಲ್ಲಿ ವರ್ಷ ಪೂರ್ತಿ ಹವಾಮಾನ ಸಾಮಾನ್ಯವಾಗಿರುತ್ತದೆ. ಅದರಲ್ಲೂ ಅಕ್ಟೋಬರ್‌ನಿಂದ ಮಾರ್ಚ್‌ನ ಮಧ್ಯದಲ್ಲಿ ಪ್ರವಾಸ ಕೈಗೊಳ್ಳಲು ಉತ್ತಮ ಸಮಯವಾಗಿದೆ.CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು