• A
  • A
  • A
ಬಡವರೇ ಇವರ ಟಾರ್ಗೆಟ್​: ಲಿಂಗಸೂರಲ್ಲಿ ಕೋಟಿ ರೂ. ವಂಚಿಸಿದ ಬ್ಲೇಡ್​ ಕಂಪನಿ

ರಾಯಚೂರು: ಹೈದರಾಬಾದ್​ ಕರ್ನಾಟಕ ಭಾಗದ ಬಡವರನ್ನೇ ಟಾರ್ಗೆಟ್​ ಮಾಡಿಕೊಂಡು ಹಣ ದುಪ್ಪಟ್ಟಾಗಿಸುವುದಾಗಿ ನಂಬಿಸಿ ವಂಚಿಸಿರುವ ಪ್ರಕರಣ ಲಿಂಗಸೂಗೂರು ಪಟ್ಟಣದಲ್ಲಿ ನಡೆದಿದೆ.


ಇಲ್ಲಿನ 'ಜನಸ್ನೇಹಿ ರಿಯಲ್ ವೆಲ್ತ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್' ಎಂಬ ಕಂಪನಿಯು ಹಣ ಡಬಲ್​ ಮಾಡುವುದಾಗಿ ಜನರಿಗೆ ನಂಬಿಸಿ ಆರ್​ಡಿ ಹಾಗೂ ಎಫ್​ಡಿ ಮೂಲಕ 1,07,50,000 ರೂ. ಪಡೆದು ಜನರಿಗೆ ಪಂಗನಾಮ ಹಾಕಿದೆ.
2013ರಲ್ಲಿ ಜನಸ್ನೇಹಿ ಕಂಪನಿಯು ಲಿಂಗಸೂಗೂರು ಪಟ್ಟಣದಲ್ಲಿ ಪ್ರಾರಂಭವಾಯಿತು. ಪಟ್ಟಣ ಸೇರಿದಂತೆ ತಾಲೂಕಿನ ‌ಸುತ್ತಮುತ್ತಲಿನ ಗ್ರಾಮಗಳಿಗೆ ಒಬ್ಬರು, ಇಬ್ಬರು ಎಂಬಂತೆ ಏಜೆಂಟ್‌ರ ನೇಮಕ ಮಾಡಿಕೊಂಡು ಕನಿಷ್ಠ ಮಾನಸಿಕವಾಗಿ 600 ರೂಪಾಯಿ ಐದು ವರ್ಷಗಳ ಅವಧಿಗೆ ಪಾವತಿಸಿದರೆ, ಬಳಿಕ ಅದಕ್ಕೆ ಡಬಲ್ ಇಲ್ಲವೇ ಅಧಿಕ ಬಡ್ಡಿಯನ್ನ ಸೇರಿ ಮರುಪಾವತಿ ಮಾಡುವುದಾಗಿ ಹೇಳಿ ಕಂಪನಿಗೆ ಸದಸ್ಯರನ್ನಾಗಿ ಮಾಡಿಕೊಂಡಿದ್ದಾರೆ.

ಇನ್ನೂ ಏಜೆಂಟರು ನೂರಾರು ಜನರನ್ನ ಸದಸ್ಯರನ್ನಾಗಿ ಮಾಡಿ ಅವರಿಂದ ತಮಗೆ ಅನುಕೂಲವಾಗುವಷ್ಟು ತಿಂಗಳಿಗೆ ಕಟ್ಟಿಸಿಕೊಳ್ಳುತ್ತಾ ಬಂದಿದ್ದಾರೆ. ಕೆಲ ತಿಂಗಳ ನಂತರ ಜನಸ್ನೇಹಿ ರಿಯಲ್ ಎಸ್ಟೇಟ್ ಪ್ರೈ.ಲಿ ಕಂಪನಿ ಬಂದಾಗಿದೆ. ಇದನ್ನು ದಿಶಾ ಎನ್ನುವ ಹೊಸ ಕಂಪನಿಗೆ ನಿಮ್ಮ ಹಣವನ್ನ ಜಮಾ ಮಾಡಿದೆ ಎಂದು ಹೇಳಿ ದಿಶಾ ಕಂಪನಿ ಕಾಗದ ಪತ್ರ ಹಾಗು ಬಾಂಡ್ ನೀಡಿದೆ. ಇದಾದ ಬಳಿಕ ಅವಧಿ ಮುಗಿದಿದೆ ಎಂದು ಕಟ್ಟಿದ ಹಣವನ್ನು ಸದಸ್ಯರು ಕೇಳಲು ಹೋದಾಗ, ಹಣವನ್ನು ಡಬಲ್ ಮಾಡುವ ಹೆಸರಿನಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಪೊಲೀಸ್ ಪ್ರಕರಣ ದಾಖಲಿಸುವುದಾಗಿ ಹೇಳಿದಾಗ ಹಣವನ್ನ ಮರು ಪಾವತಿ ಮಾಡುವುದಾಗಿ ರಾಜಿ ಕರೆದು, ಮತ್ತೆ ಏಜೆಂಟರಿಗೂ ಸದಸ್ಯರಿಗೂ‌ ದೋಖ ಮಾಡಲಾಗಿದೆ. ಜನ ಈಗ ಏಜೆಂಟರ ಮನೆ ಬಾಗಿಲಿಗೆ ಹೋಗಿ ಹಣ ಕೊಡುವಂತೆ ಪಟ್ಟು ಹಿಡಿದಿದ್ದು, ಏಜೆಂಟರು ತಾವೂ ಮೋಸಹೋಗಿರುವುದಾಗಿ ಸಬೂಬು ಹೇಳುತ್ತಿದ್ದಾರೆ. ಈ ಸಂಬಂಧ ಎಲ್ಲ ಏಜೆಂಟರು ಲಿಂಗಸೂಗೂರು ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾರೆ.

ಸದ್ಯ ಜನಸ್ನೇಹಿ ಕಂಪನಿಯ ಎಂ.ಡಿ. ಬಸವರಾಜ ತಮ್ಮಣ್ಣನವರ, ವ್ಯವಸ್ಥಾಪಕಿ ರಾಜೇಶ್ವರಿ ರಾಜಶೇಖರ್ ಪಾಟೀಲ್, ಮ್ಯಾನೇಜರ್ ರಾಜಶೇಖರ್ ಶಿವಾನಂದ ಪಾಟೀಲ್, ನಿರ್ದೇಶಕಿ‌ ಶಾಂತ ಶಿವಾನಂದ ಪಾಟೀಲ್, ಜೆ.ಎಂ.ಪಾಟೀಲ್, ಸೂಗೂರೇಶ ವಕೀಲ ಸಾಲಮನಿ,‌ ಚಿನ್ನಾರೆಡ್ಡಿ‌ ಬಿರಾದಾರ ಮೇಲೆ ಪ್ರಕರಣ ದಾಖಲಿಸಿಲಾಗಿದ್ದು, ಇದನ್ನು ಆಧಾರಿಸಿ ಪೊಲೀಸರು ತನಿಖೆ ಆರಂಭಿಸಲಿದ್ದಾರೆ.ಕಳೆದ ವರ್ಷ ರಾಯಚೂರು ಜಿಲ್ಲೆಯ ಲಿಂಗಸೂಗೂರು ಗ್ರಾಮೀಣ ಭಾಗದ ರೈತರನ್ನು ಟಾರ್ಗೆಟ್ ಮಾಡಿಕೊಂಡು ದೆಹಲಿ ಕಂಪನಿ ಸಾವಿರಾರು ಜನರಿಗೆ ಕೋಟ್ಯಾಂತರ ರೂಪಾಯಿ ಮೋಸ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಮತ್ತೊಂದು ಬ್ಲೇಡ್​ ಕಂಪನಿ ಪ್ರಕರಣ ಬೆಳಕಿಗೆ ಬಂದಿದೆ.

ಜನರನ್ನ ಮೋಸ ಮಾಡುವ ವ್ಯವಸ್ಥಿತ ಜಾಲವೊಂದು ಜಿಲ್ಲೆಯ ಲಿಂಗಸೂಗೂರಿನಲ್ಲಿ ಕೆಲಸ ಮಾಡುತ್ತಿದೆ. ಇಂತಹ ನಯವಂಚಕರನ್ನ ಪತ್ತೆ ಹಚ್ಚಿ‌ ಹಣ ಕಳೆದಕೊಂಡವರಿಗೆ ಪೊಲೀಸರು ನ್ಯಾಯ ಕೊಂಡಿಸಬೇಕಾಗಿದೆ. ಅಲ್ಲದೇ ಈ ಹಿಂದೆ ಇಂತಹ ಕಂಪನಿಗಳನ್ನ ನಂಬಬೇಡಿ ಎಂದು ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದ್ರು, ಹಣದಾಸೆಗೆ ಈ ರೀತಿಯಾಗಿ ವಂಚನೆಗೊಳ್ಳಲಾಗಿತ್ತಿರುವುದು ವಿಪರ್ಯಾಸವೆ ಸರಿ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು