• A
  • A
  • A
ಅಕ್ರಮ ಇ- ಖಾತೆ ಮಾಡುತ್ತಿದ್ದ ಆರೋಪ: ಪಂಚಾಯತ್​ ಸದಸ್ಯರ ಕೈಗೆ ಸಿಕ್ಕಿಬಿದ್ದ ಅಧಿಕಾರಿಗಳು

ಬೆಂಗಳೂರು: ಅಕ್ರಮವಾಗಿ ಇ- ಖಾತೆ ಮಾಡುತ್ತಿದ್ದರೆನ್ನಲಾದ ಗ್ರಾಮ‌ ಪಂಚಾಯತ್​ ಕಾರ್ಯದರ್ಶಿ ಹಾಗೂ ಕಂಪ್ಯೂಟರ್ ಅಪರೇಟರ್​ಗಳು ಗ್ರಾಮ ಪಂಚಾಯತ್​ ಸದಸ್ಯರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚೀಮಸಂದ್ರದಲ್ಲಿ ನಡೆದಿದೆ.


ಮಂಡೂರು ಗ್ರಾಮ‌ ಪಂಚಾಯತ್​ ಕಾರ್ಯದರ್ಶಿ ಮುನಿಕೃಷ್ಣಪ್ಪ ಹಾಗೂ ಕಂಪ್ಯೂಟರ್ ಅಪರೇಟರ್ ಶಿವಮ್ಮ ಸಿಕ್ಕಿಬಿದ್ದ್ದಿರುವ ಅಧಿಕಾರಿಗಳು. ಪಂಚಾಯತ್​ ಕಚೇರಿಯಲ್ಲಿ ಮಾಡಬೇಕಾದ ಕೆಲಸವನ್ನು ನಿಯಮ ಮೀರಿ ಹೊರಭಾಗದ ಖಾಸಗಿ ಕಚೇರಿಯೊಂದರಲ್ಲಿ ಭೂಮಿ ಖಾತೆ ಮಾಡಲು ಚೀಮಸಂದ್ರ ಗ್ರಾಮದ ಮನೆಯೊಂದಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಈ ವೇಳೆ ವಿಷಯ ತಿಳಿದ ಜಿ. ಪಂ. ಸದಸ್ಯ ಕೆಂಪರಾಜು ಹಾಗೂ ಮಂಡೂರು ಗ್ರಾಮ‌‌ ಪಂಚಾಯತ್​ ಸದಸ್ಯರು ಅವಲಹಳ್ಳಿ ಪೊಲೀಸರ ನೇತೃತ್ವದಲ್ಲಿ ತೆರಳಿ ಅಧಿಕಾರಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಇನ್ನು ಅಕ್ರಮವಾಗಿ ಖಾತೆಗಳನ್ನು ಮಾಡಿ ಸಿಕ್ಕಿಬಿದ್ದಿರುವ ಮಂಡೂರು ಗ್ರಾಮ ಪಂಚಾಯತ್​ ಕಾರ್ಯದರ್ಶಿ ಮುನಿಕೃಷ್ಣಪ್ಪ ಮಾತನಾಡಿ, ನಮ್ಮನ್ನು ಇಲ್ಲಿಗೆ ಪಿಡಿಒ ಪೂರ್ಣಚ್ಚ ಅವರು ಕಳುಹಿಸಿದ್ದಾರೆ. ನಾವು ಯಾವುದೋ ಕೆಲಸದ ಮೇರೆಗೆ ಹೊಗಿದ್ದೆವು. ಅಲ್ಲಿ ಕೆಲಸ ಮುಗಿಸಿ ಕಚೇರಿಗೆ ಮರಳುತ್ತಿದ್ದ ವೇಳೆ ಪಿಡಿಒ ಪೂರ್ಣಚ್ಚ ಅವರು, ಒಂದು ಖಾತೆ ಮಾಡಿಕೊಟ್ಟು ಹೋಗಿ ಎಂದಿದ್ದರು. ಅದಕ್ಕೆ ಇಲ್ಲಿ‌ ಬಂದು ನಾಲ್ಕು ಖಾತೆಗಳನ್ನು ಮಾಡಿರುವುದು ತಪ್ಪು. ಆದರೂ ಮೇಲಿನ ಅಧಿಕಾರಿಗಳ ಆದೇಶದ ಮೇರೆಗೆ ನಾವು ಈ ಕೆಲಸ ಮಾಡಿದ್ದೇವೆ ಎಂದು ಹೇಳಿದ್ರು.

ಜಿ. ಪಂ. ಸದಸ್ಯ ಕೆಂಪರಾಜು ಮಾತನಾಡಿ, ಮಂಡೂರು ಗ್ರಾ. ಪಂ. ಪಿಡಿಒ ವರ್ಗವಣೆ ಆಗಿದ್ದರೂ ಸಹ ಬೇರೆ ಯಾವುದೋ ಗ್ರಾ ಪಂ.ಗೆ ಸೇರಿದ ಗ್ರಾಮದ ಖಾಸಗಿ ಪ್ರಾಪರ್ಟಿ ಗೆ ಅಕ್ರಮವಾಗಿ ಖಾತೆಯನ್ನು ಮಾಡಲು ಹೋಗಿ ಈ ಇಬ್ಬರು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಮಂಡೂರು ಗ್ರಾಮದ ಪಂಚಾಯತ್ ಸದಸ್ಯರು ಬೆಳಗ್ಗೆಯಿಂದ ಇವರನ್ನು ಹುಡುಕಿ ಸೆರೆ ಹಿಡಿದಿದ್ದಾರೆ. ಅಕ್ರಮವಾಗಿ ಖಾತೆಗಳನ್ನು ಮಾಡಲು ಪಿಡಿಒ ಅಧಿಕಾರಿ ಪೂರ್ಣಚ್ಚ ಇವರನ್ನು ಕಳುಹಿಸಿದ್ದಾರೆ. ಆದರಿಂದ ಇವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು