• A
  • A
  • A
ಪ್ರೊಬೆಷನರಿ ಪಿಎಸ್ಐ ಸಾವು... ಮಾನವೀಯತೆ ಮೆರೆದ ಸಹಪಾಠಿಗಳು!

ಕಲಬುರಗಿ: ಪ್ರೊಬೆಷನರಿ ಪಿಎಸ್ಐ ಬಸವರಾಜ್ ಮಂಚೆಣ್ಣನವರ ಸಾವಿಗೆ ಸಹಪಾಠಿಗಳ ಮನ ಮಿಡಿದಿದ್ದು, ಮೃತ ಪಿಎಸ್ಐ ಬಸವರಾಜ್ ಕುಟುಂಬಕ್ಕೆ 59 ಲಕ್ಷ ರೂ. ಧನ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.


ನಾಗನಳ್ಳಿ ತರಬೇತಿ ಕೇಂದ್ರದಲ್ಲಿ 590 ಪ್ರಶಿಕ್ಷಾರ್ಥಿಗಳು ತರಬೇತಿ ಪಡೆಯುತ್ತಿದ್ದು, ತಲಾ 10000 ರೂ. ನೆರವು ನೀಡಲು ಪ್ರಶಿಕ್ಷಣಾರ್ಥಿಗಳು ತೀರ್ಮಾನಿಸಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಸವರಾಜ ಕುಟುಂಬಕ್ಕೆ ಮಗನನ್ನು ಕಳೆದುಕೊಂಡು ದಿಕ್ಕು ಕಾಣದಂತಾಗಿದ್ದಾರೆ. ಹೀಗಾಗಿ ಕುಟುಂಬಕ್ಕೆ ಸಹಾಯ ಹಸ್ತ ಚಾಚಲು ಸಹ ಪ್ರಶಿಕ್ಷಣಾರ್ಥಿಗಳು ಮುಂದಾಗಿದ್ದಾರೆ. ಇವರ ಮಾನವೀಯತೆಗೆ ಎಸ್​ಪಿ ಶಶಿಕುಮಾರ್ ಸೇರಿ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಆರೋಗ್ಯ ಸರಿಯಿಲ್ಲವೆಂದು ನಾಗನಳ್ಳಿ ತರಬೇತಿ ಕೇಂದ್ರದಿಂದ ಶನಿವಾರ ಅನುಮತಿ ಪಡೆದು ನಗರಕ್ಕೆ ಬಂದಿದ್ದ ಬಸವರಾಜ್ ಭಾನುವಾರ ಬೆಳಗ್ಗೆ ರಾಮ ಮಂದಿರದ ರಿಂಗ್ ರಸ್ತೆಯ ಕಾಂಪ್ಲೆಕ್ಸ್ ಎದುರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. (ಪಿಎಸ್ಐ ಆಗಬೇಕಿದ್ದ ಮಗ ಕೊನೆಗೆ ಸಿಕ್ಕಿದ್ದು ಶವವಾಗಿ... ವಿಧಿಬರಹ ಎಂಥ ಘೋರ)

ಇಂದು ಅವರ ಹುಟ್ಟೂರು ಸೇಡಂ ತಾಲೂಕಿನ ಬೆನಕನಹಳ್ಳಿಯಲ್ಲಿ ಅಂತ್ಯಕ್ರಿಯೆ ನೇರವೆರಲಿದೆ. ಇನ್ನು ಮೃತ ಬಸವರಾಜ್ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ನಾಗನಳ್ಳಿ ತರಬೇತಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಬಸವರಾಜ್ ನಿಧನಕ್ಕೆ ಸಹಪಾಠಿಗಳು ಕಣ್ಣೀರು ಹಾಕಿದ್ದಾರೆ. ಅಂತಿಮ ದರ್ಶನ ಪಡೆದು ತಮ್ಮ ಗೆಳೆಯನಿಗೆ ಇಹಲೋಕದಿಂದ ಬಿಳ್ಕೋಟ್ಟಿದ್ದಾರೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು