• A
  • A
  • A
ಪಿಎಸ್ಐ ಆಗಬೇಕಿದ್ದ ಮಗ ಕೊನೆಗೆ ಸಿಕ್ಕಿದ್ದು ಶವವಾಗಿ... ವಿಧಿಬರಹ ಎಂಥ ಘೋರ

ಕಲಬುರಗಿ: ಚಿಕ್ಕಂದಿನಿಂದಲೂ ಪಿಎಸ್ಐ ಆಗುವ ಕನಸು ಹೊತ್ತಿದ್ದ ಆ ಯುವಕ ಕಷ್ಟಪಟ್ಟು ಓದಿ ಪಿಎಸ್ಐ ಹುದ್ದೆಗೆ ನೇಮಕ ಆಗಿದ್ದ. ಎಲ್ಲ ಅಂದುಕೊಂಡಂಗೆ ಆಗಿದ್ರೆ ಇನ್ನೇರಡು ತಿಂಗಳಲ್ಲಿ ತರಬೇತಿ ಮುಗಿಸಿ ಪಿಎಸ್ಐ ಆಗಿ ಕಾರ್ಯ ಆರಂಭಿಸುತ್ತಿದ್ದ ಆದ್ರೆ ವಿಧಿಯಾಟವೇ ಬೇರೆಯಾಗಿತ್ತು.


ಹೌದು, ರಾಮ ಮಂದಿರ ಕ್ರಾಸ್ ಬಳಿಯ ಗ್ರ್ಯಾಂಡ್ ಸೆಂಟ್ರಲ್ ಕಾಂಪ್ಲೆಕ್ಸ್ ಎದುರು ಶವವಾಗಿ ಪತ್ತೆಯಾದ ಯುವಕನ ಯಶೋಗಾಥೆ ಇದು. ಸೇಡಂ ತಾಲೂಕಿನ ಬೆನಕನಹಳ್ಳಿ ನಿವಾಸಿ ಬಸವರಾಜ ತನ್ನ ಆಸೆಯಂತೆ ಕಷ್ಟಪಟ್ಟು ಪಿಎಸ್ಐ ಹುದ್ದೆಗೆ ನೇಮಕಗೊಂಡಿದ್ದ. ನಗರದ ಹೊರವಲಯದಲ್ಲಿರುವ ನಾಗನಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಎರಡು ತಿಂಗಳಲ್ಲಿ ಪೊಸ್ಟಿಂಗ್ ಪಡೆಯಬೇಕಾಗಿತ್ತು. ಆದ್ರೆ ದುರ್ದೈವ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗುವ ಮೂಲಕ ತನ್ನ ಬದುಕಿಗೆ ಅಂತಿಮ ಹಾಡಿದ್ದಾನೆ‌.
ಇನ್ನು ಪಿಎಸ್ಐ ಸಾವಿಗೆ ಆತನ ಅನಾರೋಗ್ಯವೆ ಕಾರಣ ಅಂತ ಹೇಳಲಾಗುತ್ತಿದೆ. ಬಸವರಾಜನ ಆರೋಗ್ಯ ಸರಿಯಿಲ್ಲವೆಂದು ನಿನ್ನೆ ಬೆಳಗ್ಗೆ ಅನುಮತಿ ಪಡೆದು ತರಬೇತಿ ಕೇಂದ್ರದಿಂದ ಕಲಬುರಗಿ ನಗರಕ್ಕೆ ಬಂದಿದ್ದ, ನಂತರ ಇಂದು ಬೆಳಗ್ಗೆ ಕಟ್ಟಡದ ಮುಂದೆ ಶವವಾಗಿ ಪತ್ತೆಯಾಗಿದ್ದಾನೆ‌. ಸುದ್ದಿ ತಿಳಿದು ಸ್ಥಳಕ್ಕೆ ಎಸ್ಪಿ ಎನ್.ಶಶಿಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಳಿಕ ಮರಣೋತ್ತರ ಪರಿಕ್ಷೆಗೆ ಶವವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಜಿಲ್ಲಾ ಆಸ್ಪತ್ರೆಗೆ ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬೀಕರ್ ಭೇಟಿ ನೀಡಿದರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಜಿಲ್ಲಾ ಆಸ್ಪತ್ರೆಗೆ ಪೋಷಕರು ದೌಡಾಯಿಸಿದ್ದಾರೆ. ಅವರ ಅಕ್ರಂದನ ಮುಗಿಲು ಮುಟ್ಟಿದೆ. ಪಿಎಸ್ಐ ರೂಪದಲ್ಲಿ ನೋಡಬೇಕಿದ್ದ ಮಗನನ್ನು ಶವದ ರೂಪದಲ್ಲಿ ನೋಡಿದ ಪೊಷಕರ ದುಃಖ ಹೇಳತ್ತಿರದಂತಿತ್ತು.

ಕೇವಲ ಎರಡು ತಿಂಗಳ ತರಬೇತಿ ಮುಗಿಸಿ ಪೋಸ್ಟಿಂಗ್ ಪಡೆದು ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಬಸವರಾಜ ಜೀವನ ಈ ರೀತಿ ಅಂತ್ಯ ಕಂಡಿರುವುದು ಕರಳು ಹಿಂಡುವಂತೆ ಮಾಡಿದೆ. ಸದ್ಯ ಬಸವರಾಜ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಬಸವರಾಜ ಸಾಯುವಂತ ಅನಾರೋಗ್ಯ ಹೊಂದಿದ್ದನಾ ಅಥವ ಆತನ ಸಾವಿಗೆ ಮತ್ತೇನಾದ್ರೂ ಕಾರಣ ಇದೆಯೋ ಅನ್ನೋದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ಈ ಕುರಿತು ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು