• A
  • A
  • A
ಡ್ರೋಣ್​ನಲ್ಲಿ ಸೆರೆಯಾದ ದೇವಿರಮ್ಮನ ಸೊಬಗು...

ಚಿಕ್ಕಮಗಳೂರು: ಹಸಿರನ್ನುಟ್ಟ ವಸುಂಧರೆಯ ಕಿರೀಟದಂತೆ ಕಂಗೊಳಿಸುವ ಬೆಟ್ಟ... ಹಾಲಿನ ಸಾಗರದಂತೆ ಕೈಗೆಟುಕು ಮೋಡಗಳು... ಭೂಲೋಕ ಸ್ವರ್ಗವಿದೆ ಎನ್ನುವಷ್ಟು ಆನಂದ... ಇಂತಹ ಸುಂದರ ಅನುಭವವನ್ನು ದೇವಿರಮ್ಮನ ಬೆಟ್ಟಕ್ಕೆ ಭೇಟಿ ಕೊಡುವ ಎಲ್ಲರೂ ಪಡೆದು, ಆನಂದಿಸುತ್ತಾರೆ.


ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿರುವ 3000 ಅಡಿಗಳಷ್ಟು ಎತ್ತರದ ಬೆಟ್ಟದಲ್ಲಿ ನೆಲೆನಿಂತ ದೇವಿರಮ್ಮನ ದೇಗುಲ ವರ್ಷಕ್ಕೊಮ್ಮೆ ದೀಪಾವಳಿ ವೇಳೆ ತೆರೆಯುವುದು ವಾಡಿಕೆ. ಮಲೆನಾಡಿನ ಸೌಂದರ್ಯ, ದೇವಿಯ ದರ್ಶನಕ್ಕಾಗಿ ಪ್ರತಿವರ್ಷ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಬರಿಗಾಲಲ್ಲೇ ಬೆಟ್ಟವೇರಿ ದೇವಿರಮ್ಮ ದರ್ಶನ ಪಡೆದು ಪುನೀತರಾಗುತ್ತಾರೆ. ಜತೆಗೆ ಪ್ರಕೃತಿ ದೇವಿಗೂ ನಮಿಸಿ ಆನಂದಿಸುತ್ತಾರೆ.
ನಿನ್ನೆ ದೇವಿರಮ್ಮ ದೇಗುಲದ ಬಾಗಿಲು ತೆಗೆದಿದ್ದರಿಂದ ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆದರು. ವಿಶೇಷವೆಂದರೆ, ಈ ಅದ್ಭುತ ದೃಶ್ಯಾವಳಿ ಡ್ರೋಣ್​​ ಕ್ಯಾಮರಾದಲ್ಲಿ ಸೆರೆಯಾಗಿದೆ. ದೇವಿರಮ್ಮ ಜಾತ್ರೆಯನ್ನ ವಿಭಿನ್ನವಾಗಿ ಡ್ರೋಣ್ ಕ್ಯಾಮರಾದಲ್ಲಿ ಚಿತ್ರೀಕರಿಸಲಾಗಿದ್ದು, ಬೆಟ್ಟಕ್ಕೆ ಭೇಟಿ ನೀಡಲಾಗದವರಿಗೆ ನೇರವಾಗಿ ನೋಡುತ್ತಿದ್ದೇವೇನೋ ಅನ್ನುವಷ್ಟು ಖುಷಿ ಕೊಡುತ್ತಿದೆ.

ಈ ಸುಂದರ ದೃಶ್ಯಾವಳಿ ಈಟಿವಿ ಭಾರತ್​ಗೆ ಲಭ್ಯವಾಗಿದೆ. ದೇವಿರಮ್ಮನ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಬೆಟ್ಟ ಏರುತ್ತಿರುವ, ಸಾಲಾಗಿ ನಿಂತು ದೇವರ ದರ್ಶನ ಪಡೆಯುತ್ತಿರುವ ದೃಶ್ಯಗಳು ಆಕರ್ಷಣೀಯವಾಗಿ ಮೂಡಿಬಂದಿವೆ. ಆಗಸದೆತ್ತರದ ಕ್ಯಾಮರಾ ಕಣ್ಣಿನಲ್ಲಿ ಬೆಟ್ಟ ಏರುತ್ತಿರುವ ಜನರು ಮುತ್ತಿನ ಮಣಿಗಳಂತೆ ಕಾಣುವ ದೃಶ್ಯವಂತೂ ಅತ್ಯಧ್ಭುತ.

ಒಟ್ಟಾರೆ ದೇವಿಯ ದರ್ಶನ ಪಡೆಯುವುದರೊಂದಿಗೆ ಒಳ್ಳೆಯ ಚಾರಣವನ್ನೂ ಮಾಡಿ, ಪ್ರಕೃತಿಯ ಸೊಬಗನ್ನೂ ಕಣ್ತುಂಬಿಕೊಂಡ ಭಕ್ತರು ಹರ್ಷ ವ್ಯಕ್ತಪಡಿಸಿದರು. ಬೆಟ್ಟಕ್ಕೆ ಭೇಟಿ ನೀಡಲಾಗದವರು ಸಹ ಈ ವಿಡಿಯೋ ದೃಶ್ಯಗಳನ್ನು ಕಣ್ತುಂಬಿಕೊಂಡು ಖುಷಿಪಡುತ್ತಿದ್ದಾರೆ.CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು