• A
  • A
  • A
ಜೂಜು ಅಡ್ಡೆ ಮೇಲೆ ದಾಳಿ... ಪೊಲೀಸರ ಚೇಸಿಂಗ್ ವಿಡಿಯೋ ವೈರಲ್

ದೊಡ್ಡಬಳ್ಳಾಪುರ: ಜೂಜಾಟದಲ್ಲಿ ತೊಡಗಿದ್ದವರನ್ನು ಬಂಧಿಸಲು ಮುಂದಾದಾಗ ತಪ್ಪಿಸಿಕೊಂಡು ಓಡಿದವರನ್ನು ಚೇಸ್ ಮಾಡಿ ಪೊಲೀಸರು ಹಿಡಿದಿದ್ದು, ಈ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹಾದ್ರಿಪುರ ಗ್ರಾಮದ ಹೊರವಲಯದ ದೊಡ್ಡಬೆಳವಂಗಲ ಠಾಣಾ ವ್ಯಾಪ್ತಿಯ ಮಾವಿನ ತೋಪಿನಲ್ಲಿ ಈ ಘಟನೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಸಬ್​ಇನ್ಸ್​ಪೆಕ್ಟರ್ ಗಜೇಂದ್ರ ನೇತೃತ್ವದ ತಂಡ ಜೂಜು ಅಡ್ಡೆ ಮೇಲೆ ದಾಳಿ ನಡೆಸಿ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 3,11,000 ರೂ. ನಗದು ಹಾಗೂ ಎರಡು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ತಂಡವು 32 ದಾಖಲೆಯ ದಾಳಿ ಮಾಡಿದ್ದು, ತಂಡದ ಕಾರ್ಯಕ್ಕೆ ಡಿವೈಎಸ್​ಪಿ ಮೋಹನ್ ದಸ್ತಗಿರಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಸುತ್ತಮುತ್ತ ಜೂಜು ಅಡ್ಡೆಗಳು ನಡೆಯುತ್ತಿವೆ. ಇದರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಇನ್ನು ಪೊಲೀಸರು ಚೇಸಿಂಗ್ ಮಾಡಿರುವ ದೃಶ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು