• A
  • A
  • A
ಹಾಸನಾಂಬೆ ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖ... ಕಾರಣ?

ಹಾಸನ: ಕಳೆದ ಮೂರು ದಿನಗಳ ಹಿಂದೆ ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಬಾಗಿಲು ವಿದ್ಯುಕ್ತವಾಗಿ ತೆರೆದಿದ್ದು ಭಕ್ತರ ಸಂಖ್ಯೆ ಸಾಕಷ್ಟು ಇಳಿಮುಖವಾಗಿದೆ. ನಿನ್ನೆ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಪ್ರವಾಸೋದ್ಯಮ ಸಚಿವರ ಕುಟುಂಬ ಕೂಡ ಆಗಮಿಸಿ ದರ್ಶನ ಪಡೆದ್ರು. ಈ ವೇಳೆಯೂ ಕೂಡ ಭಕ್ತರ ಸಂಖ್ಯೆ ಬೆರಳೆಣಿಕೆಯಷ್ಟು ಇತ್ತು.


ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 20ರಷ್ಟು ಕೂಡಾ ಭಕ್ತರ ಸಂಖ್ಯೆಯಿಲ್ಲ. ಇದಕ್ಕೆಲ್ಲಾ ಕಾರಣ ಈ ಬಾರಿ ಜಿಲ್ಲಾಡಳಿತ ಸಾಕಷ್ಟು ಪೊಲೀಸರನ್ನ ಒಳಗೊಂಡ ಭದ್ರತಾ ಸಿಬ್ಬಂದಿಯನ್ನ ನೇಮಕ ಮಾಡಿದ್ದು ಎನ್ನಲಾಗುತ್ತಿದೆ. ದರ್ಶನ ಪಡೆಯುವ ಭಕ್ತರ ಮೇಲೆ ಜಿಲ್ಲಾಡಳಿತ ದಬ್ಬಾಳಿಕೆ ನಡೆಸುತ್ತಿರುವುದು ಭಕ್ತರಿಗೆ ಸಾಕಷ್ಟು ನೋವುಂಟು ಮಾಡುತ್ತಿದೆ. ಹಾಗಾಗಿ ಸಾವಿರಾರು ಭಕ್ತರು ದೇವಾಲಯದ ಹೊರಗೆ ನಿಂತು ದೇವಿಗೆ ಕೈಮುಗಿದು ವಾಪಸಾಗುತ್ತಿರುವ ದೃಶ್ಯಗಳು ಕಳೆದ ಮೂರು ದಿನಗಳಿಂದಲೂ ಕಾಣ ಸಿಗುತ್ತಿವೆ.
ದೇವಾಲಯವನ್ನು ವಾಣಿಜ್ಯೀಕರಣ ಮಾಡಲು ಹೊರಟ ಜಿಲ್ಲಾಡಳಿತ ಕಳೆದ ಮೂರು ವರ್ಷಗಳಿಂದಲೂ ಕೂಡ ದರ್ಶನ ಪಡೆಯುವ ವಿಶೇಷ ಅತಿಥಿಗಳಿಗೆ 300 ಹಾಗೂ 1000 ರೂ. ಮುಖಬೆಲೆಯ ಪಾಸುಗಳನ್ನು ನೀಡುತ್ತಿದೆ. ಉಳ್ಳವರು ಮಾತ್ರ ಪಾಸುಗಳನ್ನು ಖರೀದಿಸಿ ನೇರ ದರ್ಶನ ಪಡೆಯುತ್ತಿದ್ದು, ಪಾಸ್​ ಖರೀದಿ ಮಾಡಲು ಸಾಧ್ಯವಾಗದ ಮಧ್ಯಮ ವರ್ಗದ ಭಕ್ತರು ಇದರಿಂದ ವಂಚಿತರಾಗಿ ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇದರೊಂದಿಗೆ ದೇವಾಲಯದ ಪಾರಂಪರಿಕ ಅರ್ಚಕರು ಕೂಡ ದೇವಾಲಯದಲ್ಲಿ ಪವಾಡ ನಡೆಯುವುದಿಲ್ಲ ಎಂಬ ಮಾತನ್ನು ಹೇಳಿದ್ದರಿಂದ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ ಐದಾರು ವರ್ಷಗಳಿಂದಲೂ ಕೋಟ್ಯಂತರ ರೂಪಾಯಿ ಆದಾಯ ದೇವಾಲಯದಿಂದ ಜಿಲ್ಲಾಡಳಿತಕ್ಕೆ ಬರುತ್ತಿತ್ತು. ಇದೇ ಗುಂಗಿನಲ್ಲಿದ್ದ ಜಿಲ್ಲಾಡಳಿತ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಿರುವುದೂ ದೇವಾಲಯಕ್ಕೆ ಭಕ್ತರ ಸಂಖ್ಯೆ ಕಡಿಮೆಯಾಗಲು ಕಾರಣ ಎನ್ನಲಾಗುತ್ತಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು