• A
  • A
  • A
ಮಾಟ-ಮಂತ್ರಕ್ಕೆ ಬಳಸಿದ್ದ ತೆಂಗಿನಕಾಯಿ, ಬಾಳೆಹಣ್ಣು ಸೇವನೆ!

ಬೆಳಗಾವಿ: ಮಾಟ-ಮಂತ್ರಕ್ಕೆ ಬಳಸಿದ್ದ ತೆಂಗಿನಕಾಯಿ, ಬಾಳೆಹಣ್ಣು ಸೇವಿಸುವ ಮೂಲಕ ಬೆಳಗಾವಿಯ ಈ ಯುವಕರು ಮೌಢ್ಯಕ್ಕೆ ಸೆಡ್ಡು ಹೊಡೆದು ಗಮನ ಸೆಳೆದಿದ್ದಾರೆ.


ಖಾನಾಪುರ ಪಟ್ಟಣದ ಯುವಕರು ಇಂದು ಬೆಳಗ್ಗೆ ವಾಯು ವಿಹಾರಕ್ಕೆ ಹೋದಾಗ ಕಣ್ಣಿಗೆ ಕಂಡಿರುವ ಮಾಟ-ಮಂತ್ರಕ್ಕೆ ಬಳಸಿದ್ದ ಬಾಳೆ ಹಣ್ಣು, ತೆಂಗಿನಕಾಯಿ ಸೇವಿಸಿದ್ದಾರೆ.

ನಿನ್ನೆ ಮಹಾನವಮಿ ಅಮವಾಸ್ಯೆ ಆದ ಕಾರಣ ಖಾನಾಪುರ ಪಟ್ಟಣದ ನಿಟ್ಟೂರು ಕ್ರಾಸ್ ಬಳಿ ಮಾಟ-ಮಂತ್ರ ಮಾಡಿಸಲಾಗಿತ್ತು. ಮಾಟ-ಮಂತ್ರಕ್ಕೆ ತೆಂಗು, ಬಾಳೆಹಣ್ಣು, ಗಡಿಗೆ, ನಿಂಬೆಹಣ್ಣು ಸೇರಿದಂತೆ ಇನ್ನಿತರ ವಸ್ತು ಬಳಸಿದ್ದರು. ಮಾಟಕ್ಕೆ ಬಳಸಿದ್ದ ಬಾಳೆ, ತೆಂಗು ಸೇವಿಸಿರುವ ಖಾನಾಪುರದ ಯುವಕರು ಮಾಟ-ಮಂತ್ರದಂತ ಮೌಢ್ಯಗಳಿಂದ ಹೊರಬರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು