• A
  • A
  • A
ದೊಡ್ಡಕೊಪ್ಪಲಿನಲ್ಲಿ ಓಡಾಡುತ್ತಿದೆಯಂತೆ ಡಿ.ಕೆ.ರವಿ ಆತ್ಮ!?

ತುಮಕೂರು: ಐಎಎಸ್ ಅಧಿಕಾರಿ ಡಿ.ಕೆ.ರವಿ ಮೃತಪಟ್ಟು ಮೂರೂವರೆ ವರ್ಷ ಆಗಿದೆ. ಆದರೆ ಅವರ ಸಾವಿನ ತನಿಖಾ ವರದಿ ಇನ್ನೂ ಬಹಿರಂಗವಾಗಿಲ್ಲ. ಈ ನಡುವೆ ಡಿ.ಕೆ.ರವಿ ಆತ್ಮ ಅವರ ಹುಟ್ಟೂರಿನಲ್ಲಿ ಓಡಾಡುತ್ತಿದೆಯಂತೆ. ರಾತ್ರಿ ವೇಳೆ ಸ್ನೇಹಿತರ ಹಿಂದೆ ಬಂದಂತೆ ಭಾಸವಾಗುತ್ತಿದೆಯಂತೆ. ತನ್ನ ಸಾವಿಗೆ ನ್ಯಾಯ ದೊರೆತಿಲ್ಲ ಎಂದು ಡಿ.ಕೆ.ರವಿ ಆತ್ಮ ಅವಲತ್ತುಕೊಳ್ಳುತ್ತಿದೆಯಂತೆ.


ಹೌದು, ಹೀಗೊಂದು ಬೆಳವಣಿಗೆ ನಡೆಯುತ್ತಿರುವುದು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ. ದಕ್ಷತೆಗೆ ಹೆಸರಾಗಿದ್ದ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಆತ್ಮ ಹುಟ್ಟೂರು ದೊಡ್ಡ ಕೊಪ್ಪಲಿನಲ್ಲಿ ಓಡಾಡುತ್ತಿದೆಯಂತೆ. ಡಿ.ಕೆ.ರವಿ ಅವರ ಜೊತೆ ತೀರಾ ಒಡನಾಟ ಇದ್ದವರಿಗೆ, ಸಂಬಂಧಿಕರಿಗೆ ಹಾಗೂ ಅಭಿಮಾನಿಗಳಿಗೆ ಡಿ.ಕೆ.ರವಿ ಆತ್ಮ ಗೋಚರಿಸುತ್ತಿದೆಯಂತೆ. ಬೆಳಗಿನ ಜಾವ ನಾಲ್ಕು ಗಂಟೆಗೆ, ರಾತ್ರಿ ಸಮಯದಲ್ಲಿ ಹೊಲಕ್ಕೆ ನೀರು ಕಟ್ಟಲು ಹೋದಾಗ ಕೆಲವರಿಗೆ ಆತ್ಮ ಹಿಂಬಾಲಿಸಿದ ಅನುಭವಾಗುತ್ತಿದೆಯಂತೆ. ಮರ ಗಿಡಗಳ ಪೊದೆಯಿಂದ ಬಂದು ಏನೋ ಹೇಳಿದಂತೆ, ಕಣ್ಣೀರು ಹಾಕಿದಂತೆ ಭಾಸವಾಗುತ್ತಿದೆ ಎಂದು ಹೇಳುತ್ತಾರೆ ಡಿ.ಕೆ.ರವಿ ಒಡನಾಡಿ ವೆಂಕಟೇಶ್.
ಕೇವಲ ಆತ್ಮ ಗೋಚರಿಸುತ್ತಿರುವುದಷ್ಟೆ ಅಲ್ಲಾ ಕನಸಲ್ಲೂ ಬಂದು ತನಗಾದ ಅನ್ಯಾಯದ ಬಗ್ಗೆ ಹೇಳಿಕೊಳ್ಳುತ್ತಿದೆಯಂತೆ. ತನಗೆ ಅನ್ಯಾಯ ಮಾಡಿಬಿಟ್ಟರು. ತನ್ನ ಸಾವಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ನೀವೆಲ್ಲಾ ಸೇರಿ ಹೇಗಾದರೂ ನ್ಯಾಯ ದೊರಕಿಸಿಕೊಡಿ ಎಂದು ಆತ್ಮ ಕನಸಲ್ಲಿ ಬಂದು ಆಪ್ತರ ಹಾಗೂ ಹಿರಿಯರ ಬಳಿ ಅಂಗಲಾಚುತ್ತಿದೆಯಂತೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಆತ್ಮ ಮತ್ತು ಕನಸಿನ ಅನುಭವ ಸ್ಥಳೀಯರಿಗೆ ಆಗುತ್ತಿದೆ ಎಂದು ಸ್ಥಳೀಯರಾದ ಗೋವಿಂದ ಪಟೇಲ್ ಹೇಳುತ್ತಾರೆ.


ಇನ್ನು ಡಿ.ಕೆ.ರವಿ ಅವರನ್ನು ಅಂತ್ಯ ಸಂಸ್ಕಾರ ಮಾಡಿರೋ ಸ್ಥಳದಲ್ಲಿ ಸಮಾಧಿ ಕಟ್ಟಲು ಸರ್ಕಾರ ಬಿಡುತ್ತಿಲ್ಲ. ಪ್ರಕರಣದ ಅಂತಿಮ ತನಿಖಾ ವರದಿ ಬಂದ ನಂತರ ಕಟ್ಟಿಕೊಳ್ಳುವಂತೆ ತಿಳಿಸುತ್ತಿದ್ದಾರೆ. ಅಕಸ್ಮಾತ್ ಕಟ್ಟಿದರೆ ಅದನ್ನು ಎಲ್ಲಿ ಒಡೆದುಹಾಕುತ್ತಾರೋ ಎಂಬ ಆತಂಕ ಡಿ.ಕೆ.ರವಿ ಕುಟುಂಬದವರಲ್ಲಿ ಇದೆ. ಇನ್ನು ಡಿ.ಕೆ.ರವಿ ಸಮಾಧಿ ಬಳಿ ಈಗಲೂ ಪೊಲೀಸ್ ಕಾವಲು ಹಾಕಲಾಗಿದೆ. ಒಟ್ಟಾರೆ ದೊಡ್ಡಕೊಪ್ಪಲಿನಲ್ಲಿ ಡಿ.ಕೆ.ರವಿ ಆತ್ಮ ಸಂಚಾರದ ವಿಚಾರವೇ ಇದೀಗ ಗ್ರಾಮದ ಮನೆ ಮನೆಗಳಲ್ಲಿ ಚರ್ಚೆಯಾಗುತ್ತಿದ್ದು, ಕುತೂಹಲ ಮೂಡಿಸಿದೆ.



CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು