• A
  • A
  • A
ಮಗನ ಚಿಕಿತ್ಸೆಗೆ 12 ಲಕ್ಷ ರೂ. ಬೇಕೆಂದು ಬಂದ ಕೂಲಿಕಾರ: ಮಾನವೀಯತೆ ಮೆರೆದ ಚಿತ್ರದುರ್ಗ ಡಿಸಿ

ಚಿತ್ರದುರ್ಗ: ಕೆಂಪು ರಕ್ತ ಕಣಗಳ ಉತ್ಪತ್ತಿಯಲ್ಲಿನ ವ್ಯತ್ಯಾಸದಿಂದ ಬಳಲುತ್ತಿದ್ದ ಮಗುವಿನ ಶಸ್ತ್ರಚಿಕಿತ್ಸೆಗೆ ನೆರವು ಕೊಡಿಸುವುದಾಗಿ ಜಿಲ್ಲಾಧಿಕಾರಿ ಆರ್.ಗಿರೀಶ್ ಭರವಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.


ಜಿಲ್ಲೆಯ ಹೊಸದುರ್ಗ ತಾಲೂಕಿನ ಗರಗ ಗ್ರಾಮದ ತಿಮ್ಮಯ್ಯ ಎಂಬುವರ ಮಗ ಮೂರನೇ ತರಗತಿ ವ್ಯಾಸಂಗ ಮಾಡುತ್ತಿರುವ ರಘು ಕೆಂಪು ರಕ್ತಕಣಗಳ ಉತ್ಪತ್ತಿಯಲ್ಲಿನ ವ್ಯತ್ಯಾಸದಿಂದ ಬಳಲುತ್ತಿದ್ದಾನೆ. ಈತನ ಶಸ್ತ್ರಚಿಕಿತ್ಸೆಗೆ ನೆರವು ಕೊಡಿಸಲು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಹೊಸದುರ್ಗ ತಾಲೂಕಿನ ತಂಡಗ ಗ್ರಾಮದಲ್ಲಿ ಜಿಲ್ಲಾಡಳಿತದಿಂದ, ಜಿಲ್ಲಾಡಳಿತದ ನಡಿಗೆ ಗ್ರಾಮದ ಕಡೆಗೆ ಜನಸಂಪರ್ಕ ಸಭೆ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ವಾಸ್ತವ್ಯಕ್ಕಾಗಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿಗೆ ಮಗುವಿನೊಂದಿಗೆ ತಂದೆ ತಿಮ್ಮಯ್ಯನವರು ಆಗಮಿಸಿ, ಮೂರನೇ ತರಗತಿ ಓದುತ್ತಿರುವ ಮಗ ರಘು ಕೆಂಪು ರಕ್ತಕಣಗಳ ಉತ್ಪತ್ತಿಯಲ್ಲಿನ ವ್ಯತ್ಯಾಸ ರೋಗದಿಂದ ಬಳಲುತ್ತಿದ್ದಾನೆ. ಇದರಿಂದ ರಕ್ತಹೀನತೆಗೆ ಒಳಗಾಗಿ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುವುದು ಸಾಮಾನ್ಯವಾಗಿದೆ. ಕೂಲಿ ಮಾಡಿ ಚಿಕಿತ್ಸೆಗೆ ಹಣವನ್ನು ಹೊಂದಿಸುವುದು ಕಷ್ಟವಾಗಿದೆ. ನಾರಾಯಣ ಹೃದಯಾಲಯದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲು ಸುಮಾರು 12 ಲಕ್ಷ ರೂ. ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ. ಕೂಲಿ ಕೆಲಸ ಮಾಡುತ್ತಿರುವ ನನಗೆ ಇಷ್ಟೊಂದು ಹಣ ಖರ್ಚು ಮಾಡಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ನೆರವು ನೀಡುವಂತೆ ತಿಮ್ಮಯ್ಯ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕರೆದು ಮಗುವಿಗೆ ಆಗಬೇಕಾದ ಚಿಕಿತ್ಸೆಯನ್ನು ಕೊಡಿಸಬೇಕು. ಇದಕ್ಕೆ ಬೇಕಾದ ಆರ್ಥಿಕ ನೆರವನ್ನು ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕೊಡಿಸಿ. ಅತ್ಯುನ್ನತ ಸೌಲಭ್ಯ ಹೊಂದಿರುವ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಕವಿತ ಹಾಗೂ ಜಿಲ್ಲಾಆರೋಗ್ಯಾಧಿಕಾರಿ ಡಾ. ನೀರಜ್​ರವರಿಗೆ ಸೂಚಿಸಿದರು.

ಇದರಿಂದಾಗಿ ಮಗನ ಚಿಕಿತ್ಸೆ ಪರದಾಡುತ್ತಿದ್ದ ತಂದೆ ನಿಟ್ಟುಸಿರು ಬಿಟ್ಟರು

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು