• A
  • A
  • A
ಕನ್ನಡ ಕಡೆಗಣನೆ, ಕಂಪನಿ ಕಿರುಕುಳ ಆರೋಪ... ವಿಡಿಯೋ ಮಾಡಿ ಕನ್ನಡಾಭಿಮಾನಿ ಆತ್ಮಹತ್ಯೆ!

ಹಾಸನ: ಕರ್ನಾಟಕದಲ್ಲಿ ಕನ್ನಡಕ್ಕೆ ಬೆಲೆ ಇಲ್ಲ ಅಂತಾ ನೊಂದ ಖಾಸಗಿ ಕಂಪನಿಯ ನೌಕರನೋರ್ವ ಸಾಮಾಜಿಕ ಜಾಲತಾಣಗಳ ಮೂಲಕ ತನ್ನ ಮನದಾಳದ ನೋವನ್ನು ಹಂಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.


ಹಾಸನದ ಖಾಸಗಿ ಕಂಪನಿವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೊಳೆನರಸೀಪುರ ತಾಲೂಕಿನ ಹಾಲುಗೊಂಡನಹಳ್ಳಿಯ ಸೇವಾರ್ಥ(23) ಈತ ಕಂಪನಿಯ ಕೆಲ ಅಧಿಕಾರಿಗಳ ವಿರುದ್ಧ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹಾಸನದ ಹೊರವಲಯದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಸೇವರ್ಥ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ. ಕನ್ನಡ ಭಾಷೆಯನ್ನು ಹೊರತುಪಡಿಸಿ ಬೇರೆ ಭಾಷೆ ಬರುವುದಿಲ್ಲ ಎಂಬ ಕಾರಣಕ್ಕೆ ಸುಖಾಸುಮ್ಮನೆ ಹಲವು ಬಾರಿ ಕಿರುಕುಳ ನೀಡಿದ್ದಾರೆ ಎಂದು
ಆರೋಪಿಸಿದ್ದಾರೆ. ಅಲ್ಲದೆ, ಸಾವಿಗೂ ಮುನ್ನ ತನ್ನ ಮನದಾಳದ ನೋವನ್ನು ಮೊಬೈಲ್ ಮೂಲಕ ಚಿತ್ರೀಕರಿಸಿ ಬಳಿಕ ತನ್ನ ಸ್ನೇಹಿತರಿಗೆ ಅದನ್ನ ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟು, ಸಾವಿಗೆ ಕೊರಳೊಡ್ಡಿದ್ದಾನೆ.

ಜೊತೆಗೆ ತನ್ನ ಮೇಲೆ ಪ್ರೀತಿ ವಿಶ್ವಾಸ ಇರುವಂತಹ ನಗರದ ವಿನಾಯಕ ಗೆಳೆಯರ ಬಳಗದ ಸದಸ್ಯರಿಗೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಗೆ ಮನವಿ ಮಾಡಿದ್ದಾನೆ. ''ಕನ್ನಡಿಗರಿಗೆ ಇಷ್ಟೊಂದು ಕಿರುಕುಳ ನೀಡುತ್ತಿದ್ದರು ಕೂಡ ಕೆಲ ಸಂಘಟನೆಗಳು ಮೌನವಾಗಿವೆ. ನಾನು ಕೇಳಿಕೊಳ್ಳುವುದು ಇಷ್ಟೆ. ಕರ್ನಾಟಕದಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಈ ಬಗ್ಗೆ ಕಂಪನಿಯನ್ನು ಪ್ರಶ್ನಿಸಲೇಬೇಕು. ನನ್ನ ಸಾವಿನ ಕಾರಣಕ್ಕಾದರೂ ಕಂಪನಿ ವಿರುದ್ಧ ಹೋರಾಟ ನಡೆಸಬೇಕು. ನನ್ನ ನೋವು ಮುಂದಿನ ಯಾವ ಕನ್ನಡಿಗರಿಗೂ ಕೂಡ ಬರಬಾರದು. ಅಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ಕನ್ನಡಿಗನೂ ಕೂಡ ಸಾಕಷ್ಟು ನೋವನ್ನು ಅನುಭವಿಸುತ್ತಾರೆ. ಹಾಗಾಗಿ ನನ್ನ ಸಾವು ಕಂಪನಿಯ ಅಧಿಕಾರಿಗಳಿಗೆ ಒಂದು ಪಾಠವಾಗಬೇಕು. ಆಗ ಮಾತ್ರ ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದಿದ್ದಾನೆ.

ನಾನು ಅನಾರೋಗ್ಯದ ಕಾರಣದಿಂದ ಎರಡು ದಿನ ರಜೆ ಹಾಕಿದ್ದೆ. ಈ ಕಾರಣಕ್ಕಾಗಿ ಅಲ್ಲಿನ ಕೆಲ ಮೇಲಾಧಿಕಾರಿಗಳು ನನಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಅದರಲ್ಲೂ ನನಗೆ ಹೆಚ್ಚು ಕಿರುಕುಳ ನೀಡಿದವರು ಮೈಸೂರು ಶಾಖೆಯ ಹಾಲುದೊರೆ.

ಹಾಗಾಗಿ ನನ್ನ ಸಾವು ಮುಂದಿನ ದಿನಗಳಲ್ಲಿ ಯಾರಿಗೂ ಕೂಡ ಬರಬಾರದು. ಈ ಮೂರು ಮಂದಿ ನನ್ನ ಸಾವಿಗೆ ಕಾರಣ'' ಅಂತ ಸೇವಾರ್ಥ ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇನ್ನು ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಸಿ ಡಿ ಮನು ಕುಮಾರ್ ನೇತೃತ್ವದಲ್ಲಿ ಮಂಗಳವಾರ ಕಂಪನಿ ವಿರುದ್ಧ ಉಗ್ರ ಹೋರಾಟ ನಡೆಸುತ್ತೇವೆ ಅಂತ ಈನಾಡುಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು