• A
  • A
  • A
ಉನ್ನತಾಭ್ಯಾಸ ಮಾಡಿದ್ರು 3 ಸಾವಿರ ಸಂಬಳ... ಈಗ ದೊಡ್ಡ ಉದ್ಯಮಿಯಾದ ಈ ಯುವಕ​!

ಚಿಕ್ಕಮಗಳೂರು: ಓದಿದ್ದು ಎಂ.ಎ. ಬಿ.ಇಡಿ. ಮಾಡಿದ್ದು 3 ಸಾವಿರಕ್ಕೆ ಉಪನ್ಯಾಸಕ ವೃತ್ತಿ. ಜೀವನ ನಿರ್ವಹಣೆ ಕಷ್ಟವೆಂದು ಸಿಲಿಕಾನ್​ ಸಿಟಿಗೆ ಬಸ್ ಹತ್ತಿ ನಾಲ್ಕೈದು ಕೆಲಸ ಮಾಡಿದ್ರು. ಅಲ್ಲಿನ ಜೀವನ ಮತ್ತಷ್ಟು ಘನಘೋರ. ಎಲ್ಲಾ ಕೆಲಸಕ್ಕೂ ಗುಡ್‍ಬೈ ಹೇಳಿ ತವರಿನತ್ತ ಮುಖ ಮಾಡಿ ಸ್ವಂತ ಕಾಲ ಮೇಲೆ ನಿಂತು, ನಾಲ್ಕೇ ವರ್ಷಗಳಲ್ಲಿ ಜರಾರು ಜನರಿಗೆ ಕೆಲಸ ಕೊಟ್ಟಿರುವ ಯುವಕನ ಯಶೋಗಾಥೆ ಇಲ್ಲಿದೆ ನೋಡಿ....


ಹೌದು.., ಕೈಯಲ್ಲಿ ಡಬಲ್ ಡಿಗ್ರಿ ಸರ್ಟಿಫಿಕೇಟ್ ಇಟ್ಕೊಂಡು ಕೆಲಸಕ್ಕಾಗಿ ಊರೂರು ಸುತ್ತಿದ್ದ ಯುವಕ ಶಶಿಕಿರಣ್. ಇವರು, ಈಗ ಮೊಲ ಸಾಕಾಣಿಕೆಯಲ್ಲಿ ಬದುಕನ್ನೇ ಹಸನಾಗಿಸಿಕೊಂಡು ರಾಜ್ಯದ ನಿರುದ್ಯೋಗಿಗಳಿಗೆ ಮಾದರಿಯಂತಿದ್ದಾರೆ.
ಕಷ್ಟದ ಬದುಕು ನೆನೆದು ಹೇಳೋದು ಹೀಗೆ...
ಶಶಿಕಿರಣ್​ಗೆ 29 ವರ್ಷ ವಯಸ್ಸು. ಮೂಲತಃ ಕಡೂರಿನವರು. ಎಂ.ಎ, ಬಿ.ಇಡಿ ಓದಿ 3 ಸಾವಿರಕ್ಕೆ ಅತಿಥಿ ಉಪನ್ಯಾಸಕರಾಗಿದ್ರು. ದುಡಿಯೋ ಛಲದಿಂದ ಬೆಂಗಳೂರಲ್ಲಿ 5 ಸಾವಿರಕ್ಕೆ ಬ್ಯಾಂಕ್‍ನಲ್ಲಿ ಕ್ರೆಡಿಟ್ ಕಾರ್ಡ್ ಮಾಡಿಸೋ ವೃತ್ತಿಗೆ ಸೇರ್ಕೊಂಡ್ರು. ಅಲ್ಲಿ ಅವರು ಅನುಭವಿಸಿದ ನೋವು ಅಷ್ಟಿಸ್ಟಲ್ಲ. ಕಾರ್ಡ್ ಮಾಡಿಸೋಕೆ ಭಿಕ್ಷೆ ಬೇಡಬೇಕು, ವಾಚ್‍ಮನ್‍ಗಳಿಗಿಂತ ಕೀಳಾಗಿ ಜನ ಇವರನ್ನು ನೋಡಿದ್ರಂತೆ. ಬ್ಯಾಂಕ್ ಮ್ಯಾನೇಜರ್ ಮಾತನ್ನ ಕೇಳೋಕೆ ಆಗುತ್ತಿರಲಿಲ್ಲ. ಆ ಜೀವನ ನನ್ನ ವಿರೋಧಿಗಳಿಗೂ ಬೇಡ ಅಂತಾರೆ ಶಶಿಕಿರಣ್​.

ನೂರಾರು ಯುವಕರಿಗೆ ಉದ್ಯೋಗದಾತ :
ಇಷ್ಟಲ್ಲಾ ಆದಮೇಲೆ ಚಿಕ್ಕಮಗಳೂರಿಗೆ ಬಂದ ಅವರು, ಸ್ವಂತ ಉದ್ದಿಮೆ ಸ್ಥಾಪಿಸಿದ್ರು. ಮೊಲ ಸಾಕಾಣಿಕೆಯಲ್ಲಿ ಸೈ ಎನ್ನಿಸಿಕೊಂಡಿರೋ ಇವರು ಇದೀಗ ರಾಜ್ಯಾದ್ಯಂತ ನೂರಾರು ಬ್ರಾಂಚ್‍ಗಳನ್ನ ನಿರ್ಮಿಸಿ ನೂರಾರು ಯುವಕರಿಗೆ, ಉದ್ದಿಮೆದಾರರಿಗೆ, ನಿರುದ್ಯೋಗಿಗಳಿಗೆ ಕೆಲಸ ಕೊಟ್ಟಿದ್ದಾರೆ.

ಯಾರೇ ಆಗಲಿ, ಮೊಲ ಸಾಕಾಣಿಕೆಯಿಂದ ಬದುಕು ಕಟ್ಟಿಕೊಳ್ಳಬಯಸೋರಿಗೆ ಅರ್ಧ ರಾತ್ರಿಯಲ್ಲೂ ನನ್ನ ಸಂಪೂರ್ಣ ಬೆಂಬಲವಿದೆ ಅಂತಾರೆ ಶಶಿಕಿರಣ್. ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ಮೈಸೂರು, ಹಾಸನ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಇವರ ಮೊಲ ಸಾಕಾಣಿಕೆ ಕೇಂದ್ರಗಳಿವೆ.


ಸ್ವಾವಲಂಬಿ ಬದುಕಿನ ಪಾಠ:
ಪ್ರತಿಯೊಬ್ಬರು ಸ್ವಂತ ಉದ್ದಿಮೆಯಿಂದ ಸ್ವಾವಲಂಬಿ ಬದುಕು ಸಾಗಿಸಬೇಕೆಂಬುದು ಶಶಿಕಿರಣ್​ ಅವರ ಮೂಲ ಉದ್ದೇಶ. ಅದಕ್ಕಾಗಿ ಈ ಉದ್ದಿಮೆಯ ಎಲ್ಲಾ ಸವಾಲುಗಳನ್ನ ಇವರೇ ಎದುರಿಸೋಕೆ ಸಿದ್ಧರಿದ್ದಾರೆ. 50 ಮೊಲಗಳುಳ್ಳ ಐದು ಯುನಿಟ್‍ಗೆ ಬೇಕಾದ ಬೋನ್ ಹಾಗೂ ಮೊಲ ಸೇರಿದಂತೆ ಎಲ್ಲವನ್ನೂ ಇವರೇ ಕೊಡ್ತಾರೆ. ಐದು ಯುನಿಟ್‍ಗೆ 80-85 ಸಾವಿರ ಖರ್ಚು ಬರುತ್ತೆ. ಆದ್ರೆ, ಆ ಹಣ ಐದೇ ತಿಂಗಳಲ್ಲಿ ಹಿಂತಿರುಗುತ್ತೆ, ಖರ್ಚು ಕಡಿಮೆ ಅಂತಾರೆ. ಎಲ್ಲಾ ರೀತಿಯ ಟ್ರಾನ್ಸ್​ಪೋರ್ಟ್ ಕೂಡ ಇವರದ್ದೇ.

ಮೊಲದ ಯುನಿಟ್ ಹಾಕಿದ ಮೇಲೆ ಅವರೊಂದಿಗೆ ಇವ್ರೆ ಟೈಅಪ್ ಆಗಿ ಮಾರ್ಕೆಟಿಂಗ್ ಕೂಡ ಮಾಡ್ತಾರೆ. ಎಷ್ಟೇ ದೂರವಿದ್ರು ಹಣವಿಲ್ಲದೆ ಇವರೇ ತಿಂಗಳಿಗೊಮ್ಮೆ ಹೋಗಿ ಸಲಹೆಗಳನ್ನ ನೀಡೋದು ಜೊತೆಗೆ ಟ್ರೈನಿಂಗ್ ಕೂಡ ಕೊಡ್ತಾರೆ. ಸ್ವಲ್ಪ ನೀರು ಹಾಗೂ ಹಸಿ ಹುಲ್ಲುವೊಂದಿದ್ರೆ ಸಾಕು ಮತ್ತೇನು ಬೇಡವಂತೆ. ಮೊಲದ ಮೂತ್ರ ಯೂರಿಯಾ ಗೊಬ್ಬರ, ಅದರ ಮಲ ಅತ್ಯುತ್ತಮ ಗೊಬ್ಬರ, ಮಾಂಸ ಕೂಡ ಝೀರೋ ಪರ್ಸೆಂಟ್ ಶುಗರ್ ಹಾಗೂ ಕೊಲೆಸ್ಟ್ರಾಲ್ ಇರೋದ್ರಿಂದ ಇವರ ಮೊಲವನ್ನ ಕಲ್ಪವೃಕ್ಷಕ್ಕೆ ಹೋಲಿಸುತ್ತಾರೆ.

ಒಟ್ಟಾರೆಯಾಗಿ ಇವರ ಸ್ವಂತ ಉದ್ದಿಮೆ ಸ್ಥಾಪಿಸಿ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆನ್ನುವ ನಿರುದ್ಯೋಗಿ ಯುವಕರಿಗೆ ಸಾಥ್ ನೀಡೋದಕ್ಕೆ ರೆಡಿ ಇದ್ದಾರೆ. ಜ್ಞಾನಾರ್ಜನೆಗಾಗಿ ಎಷ್ಟೇ ಓದಿದ್ರು ಬದುಕೋದಕ್ಕೆ ಸ್ವಂತ ಉದ್ದಿಮೆ ಸೂಕ್ತ ಅನ್ನೋ ಇವರು ಆ ಉದ್ದಿಮೆಯಲ್ಲಿ ಗೆದ್ದಿದ್ದಾರೆ.

ಬಂಡವಾಳವೂ ಕಡಿಮೆ, ಆದಾಯವೂ ಹೆಚ್ಚು. ದಿನಗಟ್ಟಲೇ ದುಡಿಯುವ ಅನಿವಾರ್ಯವೂ ಇಲ್ಲ. ದಿನಕ್ಕೆ ಎರಡು ಗಂಟೆ ಕೆಲಸದ ಈ ಉದ್ದಿಮೆಯಿಂದ ನಾಡಿನ ಲಕ್ಷಾಂತರ ನಿರುದ್ಯೋಗಿ ಯುವಕರು ಈ ಉದ್ದಿಮೆಯಿಂದ ಬದುಕು ಕಟ್ಟಿಕೊಳ್ಳಲಿ ಅನ್ನೋದು ನಮ್ಮ ಆಶಯ.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು