• A
  • A
  • A
ದೇವತೆಗಳೆಲ್ಲಾ ಕುಡುಕರು, ಮಹಿಷಾಸುರ ಅಸುರನಲ್ಲ ರಾಜ : ಕೆ.ಎಸ್.ಭಗವಾನ್

ಮೈಸೂರು: ದೇವತೆಗಳೆಲ್ಲಾ ಕುಡುಕರು. ಕುಡಿತದಿಂದ ಏನೆಲ್ಲ ಕೆಲಸ ಮಾಡಿದ್ದಾರೆ ಎಂಬುವುದು ಯಾರಿಗಾದರೂ ಗೊತ್ತಾ. ಕುಡಿತದಿಂದ ಅವರಿಗೆ ಸುರ ಎಂಬ ಹೆಸರ ಬಂದಿದೆ. ಸುರ ಎಂದರೆ ಪಾನ ಎನ್ನುವ ಮೂಲಕ ಪ್ರೊ.ಕೆ.ಎಸ್.ಭಗವಾನ್ ಹೊಸ ವಿವಾದ ಹುಟ್ಟು ಹಾಕಿದ್ದಾರೆ.


ಮಹಿಷಾ ದಸರಾ ಆಚರಣಾ ಸಮಿತಿಯಿಂದ ನಗರದ ಪೌರಭವನದಲ್ಲಿ ಏರ್ಪಡಿಸಿದ್ದ ಮೂಲನಿವಾಸಿಗಳ ಮಹಿಷ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೀವು ಪೂಜೆ ಮಾಡುವ ದೇವತೆಗಳೆಲ್ಲಾ ಕುಡುಕರು. ಮಹಿಷಾಸುರ ಅಸುರನಲ್ಲ, ಉತ್ತಮವಾಗಿ ಆಡಳಿತ ನಡೆಸಿದ ರಾಜ. ಆತ ರಾಜನಾಗದಿದ್ದರೆ ಯಾಕೆ ಮೈಸೂರಿಗೆ ಮಹಿಷನ ಹೆಸರಿಡುತ್ತಿದ್ದರು. ಉತ್ತಮವಾಗಿ ಆಡಳಿತ ನಡೆಸಿದ ರಾಜನನ್ನ ಅಸುರ ಎಂದು ಬಿಂಬಿಸಿದ್ದಾರೆ. ನಾವು ಮಹಿಷನ ಅನುಯಾಯಿಗಳು ಅವರ ಆಚರಣೆಯನ್ನ ನಾವು ಮಾಡುತ್ತೇವೆ ಎಂದು ಸಮರ್ಥಿಸಿಕೊಂಡರು.
ಮಹಿಷ ಒಬ್ಬ ಶೂದ್ರ ಎಂಬ ಕಾರಣಕ್ಕೆ ಆತನನ್ನು ರಾಕ್ಷಸ ಎಂದು ಬಿಂಬಿಸಲಾಗಿದೆ. ಸದ್ಯ ಚಾಮುಂಡಿ ಬೆಟ್ಟದ ಮೇಲಿನ ಮಹಿಷಾಸುರ ಪ್ರತಿಮೆ ಬದಲಾಯಿಸುವ ಬಗ್ಗೆ ಸ್ಥಳೀಯರೊಂದಿಗೆ ಸಮಾಲೋಚಿಸುತ್ತೇನೆ ಎಂದು ತಿಳಿಸಿದರು.


ಪ್ರೊ.ಮಹೇಶ್ ಚಂದ್ರಗುರು ಮಾತನಾಡಿ, ಅಸುರ ರಾಕ್ಷಸರಲ್ಲ. ಅವರು ರಕ್ಷಕರು, ಮೌಲ್ಯ ಕಾಪಾಡಿದರು. ಅವರ ಹಾದಿಯಲ್ಲಿ ನಾವೆಲ್ಲಾ ಸಾಗುತ್ತೇವೆ. ಅವರ ಮೇಲೆ ನನಗೆ ಅಭಿಮಾನವಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ಜಾರಕಿಹೊಳೆ, ಜ್ಞಾನಪ್ರಕಾಶ್ ಸ್ವಾಮೀಜಿ ಸೇರಿದಂತೆ ಪ್ರಗತಿಪರ ಚಿಂತಕರು ಪಾಲ್ಗೊಂಡಿದ್ದರು. ಪುರಭವನದಿಂದ ಮಹಿಷನ ಮೆರವಣಿಗೆ ಹೊರಟು ಚಾಮುಂಡಿ ಬೆಟ್ಟದಲ್ಲಿರುವ ಮಹಿಷನ ಪುತ್ಥಳಿ ಮುಂದೆ ವಿಚಾರಗೋಷ್ಠಿ ನಡೆಸಿದರು.



CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು