• A
  • A
  • A
ಅಚ್ಚೇ ದಿನ್​ ಬೇಡ, ಹಳೆಯ ದಿನ ಕೊಟ್ಟರೆ ಸಾಕು: ಇಬ್ರಾಹಿಂ

ಮಂಡ್ಯ: ನಗರಕ್ಕೆ ಭೇಟಿ ನೀಡಿದ್ದ ಇಬ್ರಾಹಿಂ ಅವರನ್ನು ರೈತರು ಮುತ್ತಿಗೆ ಹಾಕಿದ ಘಟನೆ ಇಂದು ನಡೆದಿದೆ.


ಸರ್ಕಾರದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿರುವ ಸಿ.ಎಂ. ಇಬ್ರಾಹಿಂ ಅವರನ್ನು ಸುತ್ತುವರೆದ ರೈತರು, ಈಗಿನ ಸಾಲ ಮನ್ನಾದಿಂದ ಯಾವ ಪ್ರಯೋಜನವೂ ಆಗಿಲ್ಲ. ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಸರ್ಕಾರದ ಗಮನಕ್ಕೆ ತರಲು ಬೇಡಿಕೆ ಇಟ್ಟರು. ಬಳಿಕ ಮಾತನಾಡಿದ ಅವರು, ಸಂಪೂರ್ಣ ಸಾಲ ಮನ್ನಾ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದೆ. ಅದಕ್ಕೆ ಕೊಂಚ ಕಾಲಾವಕಾಶ ಬೇಕು ಎಂದು ಹೇಳಿದರು.

ಇನ್ನು ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ಸಿಎಂ ಸಾಲ ಮನ್ನಾ ಮಾಡಿದ್ದಾರೆ. ಕೊಂಚ ಕಾಲಾವಕಾಶ ಕೊಡಿ. ಖಂಡಿತ ಅದರ ಕುರಿತಾದ ಪ್ರಕ್ರಿಯೆಗಳು ನಡೆಯುತ್ತಿದೆ. ಪಕ್ಷದಲ್ಲಿ ಯಾವ ಮುನಿಸೂ ಇಲ್ಲ. ಎಲ್ಲರೂ ಸಿಎಂ ಜೊತೆ ಚೆನ್ನಾಗೇ ಇದ್ದಾರೆ. ಬಿಜೆಪಿಯವರೂ ಸಂಪೂರ್ಣ ಸಾಲ ಮನ್ನಾ ಮಾಡಿ ಎಂದು ಹುನ್ನಾರ ಎಬ್ಬಿಸುತ್ತಿದ್ದಾರೆ. ಒಂದು ವರ್ಷ ಕಾಲಾವಕಾಶ ಕೊಡಿ ಎಂದು ಹೇಳಿದರು.

ಬಳಿಕ ಮೋದಿ ವಿರುದ್ಧ ಹರಿಹಾಯ್ದ ಅವರು, ನಾಲ್ಕು ವರ್ಷವಾಗುತ್ತಾ ಬಂದರೂ ಯಾರ ಖಾತೆಗೂ ಒಂದು ನಯಾ ಪೈಸೆ ಬಂದಿಲ್ಲ. ನಾನಾಗಿದ್ದರೆ ಮೊದಲು 15 ಲಕ್ಷ ಅಕೌಂಟಿಗೆ ಹಾಕು ಎನ್ನುತ್ತಿದ್ದೆ. ಪೆಟ್ರೋಲ್​ ರೇಟ್​ ಸಹ ಹೆಚ್ಚಾಗಿದೆ. ಆದರೆ ಬಿಜೆಪಿ ಅಚ್ಚೇ ದಿನ್​ ಆಗಿದೆ ಅಂತಿದೆ. ನಮಗೆ ಅಚ್ಚೇ ದಿನ್​ ಬೇಡ, ಹಳೆಯ ದಿನ ಕೊಟ್ಟರೆ ಸಾಕು ಎಂದು ಗುಡುಗಿದರು.CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು