• A
  • A
  • A
ನಾನು ಒಂದು ಜಾತಿಗೆ ಸೀಮಿತ ಅಲ್ಲ, ಅನ್ನದಾತನ ಸಿಎಂ: ಬಿಜೆಪಿ ವಿರುದ್ಧ ಹೆಚ್​ಡಿಕೆ ವಾಗ್ದಾಳಿ

ಬೆಂಗಳೂರು: ಬಜೆಟ್ ಬಗ್ಗೆ ಟೀಕಿಸುತ್ತಿರುವ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಸಿಎಂ ಕುಮಾರಸ್ವಾಮಿ, ನನ್ನ ಹೆಸರು ಕೆಡಿಸಬೇಕೆಂದು ಬಿಜೆಪಿಯವರು ಅಂದುಕೊಂಡಿದ್ದರೆ. ಆದರೆ ಅದು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂಗ್ರಹ ಚಿತ್ರ


ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಬಜೆಟ್ ಬಗ್ಗೆ ಟೀಕೆಗಳು ಬರುತ್ತಿವೆ. ಉತ್ತರ ಕರ್ನಾಟಕ, ಹಳೆಯ ಕರ್ನಾಟಕ ಎಂದು ಯಾವ ಭೇದವೂ ಮಾಡಿಲ್ಲ. ನಾನು ಎಲ್ಲಾ ರೀತಿಯ ಚರ್ಚೆಗೆ ಸಿದ್ಧನಿದ್ದು, ಅಧಿವೇಶನದಲ್ಲಿ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರಿಗೆ ಕೆಲಸ ಇಲ್ಲ, ಅವರು ಬಜೆಟನ್ನು ಅರ್ಥವೇ ಮಾಡಿಕೊಂಡಿಲ್ಲ. ಬಿಜೆಪಿಯವರಿಗೆ ಮಾತಾಡುವುದಕ್ಕೆ ನಾಲಿಗೆ ಮೇಲೆ ಹಿಡಿತ ಬೇಡವಾ?. ನಾನು ವೈಯಕ್ತಿಕ ಆಸೆ, ಆಕಾಂಕ್ಷೆ ಇಟ್ಕೊಂಡು ಯೋಜನೆ ರೂಪಿಸುತ್ತಿಲ್ಲ. ನಾನು ಒಂದು ಜಾತಿಗೆ ಸೀಮಿತವಾದ ಸಿಎಂ ಅಲ್ಲ. ನಾನು ಅನ್ನದಾತನ ಸಿಎಂ ಎಂದರು.
ಬಜೆಟ್​ನಲ್ಲಿ 34 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿ, ದರೋಡೆಕೋರರಿಗೆ ಕೊಡ್ತಾ ಇದ್ದೇವಾ? ಅದನ್ನು ನನ್ನ ಮನೆಗೆ ಕೊಂಡೊಯ್ಯುತ್ತಿದ್ದೇನಾ? ಅದೆಲ್ಲವನ್ನೂ ರಾಜ್ಯಕ್ಕೆ ಖರ್ಚು ಮಾಡುತ್ತಿದ್ದೇನೆ ಎಂದು ಹೆಚ್.ಕೆ.ಪಾಟೀಲ್ ಸೇರಿ ಕೈ ನಾಯಕರ ಟೀಕೆಗಳಿಗೂ ಟಾಂಗ್ ನೀಡಿದರು.
ಜನರ ದಾರಿ ತಪ್ಪಿಸಬೇಡಿ:ಇದೇ ವೇಳೆ ಸಿಎಂ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮಾಧ್ಯಮದ ತಪ್ಪು ವಿಶ್ಲೇಷಣೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ಬರೋದು ಬೇಡ. ಯಾವ ರೈತರೂ ಆತ್ಮಹತ್ಯೆ ಮಾಡಿಕೊಳ್ಳದಂತೆ ಕೈಜೋಡಿಸಿ ಮನವಿ ಮಾಡುತ್ತೇನೆ. ಮಾಧ್ಯಮ ಎಷ್ಟು ಬೇಕಾದರೂ ಟೀಕೆ ಮಾಡಲಿ. ಆದರೆ ಸಮಾಜವನ್ನು ದಾರಿ ತಪ್ಪಿಸಬೇಡಿ ಎಂದು ಮನವಿ ಮಾಡಿದರು.
ರೈತರ ಸಾಲ ಮನ್ನಾದಿಂದ ಒಕ್ಕಲಿಗರಿಗೆ ಹೆಚ್ಚು ಲಾಭ ಆಗಿದೆ ಎಂಬ ಮಾಧ್ಯಮ ವರದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಿಎಂ, ಒಕ್ಕಲಿಗರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಯಾರು ಹೇಳಿದ್ದು?. ಈ ಬಗ್ಗೆ ಯಾರು ಅಂಕಿ ಅಂಶ ಕೊಟ್ಟಿದ್ದು?. ಈ ಬಗ್ಗೆ ತನಿಖೆಯಾಗಬೇಕಾದರೆ ಮಾಧ್ಯಮಗಳ ಮೇಲೇನೇ ದೂರು ಕೊಡಬೇಕು. ಒಂದು ವೇಳೆ ಹಾಗೆ ಮಾಡಿದರೆ ಮಾಧ್ಯಮಗಳನ್ನು ಕಟ್ಟಿ ಹಾಕುತ್ತಿದ್ದಾರೆ ಎಂಬ ಕೂಗು ಕೇಳಿ ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಸದನದಲ್ಲಿ ನಾನು ಉತ್ತರ ನೀಡುತ್ತೇನೆ. ಬೇಕಾದರೆ ಜಾತಿವಾರು ಮಾಹಿತಿ ಕೂಡ ಸದನದಲ್ಲಿ ನೀಡುತ್ತೇನೆ. ನಾನು ಮಾಡಿರೋದು ರಾಜ್ಯದ ಎಲ್ಲ ರೈತರ ಸಾಲ ಮನ್ನಾ. ಉತ್ತರ ಕರ್ನಾಟಕದಲ್ಲಿ ಏನಾದ್ರೂ ಒಕ್ಕಲಿಗರು ಇದ್ದಾರಾ?. ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಮಾಧ್ಯಮಗಳ ಮೇಲೆ ಕಿಡಿಕಾರಿದರು.
ಪೆಟ್ರೋಲ್ ತೆರಿಗೆ ಏರಿಕೆ ಸಂಪುಟ ಸಭೆಯಲ್ಲೇ ನಿರ್ಧಾರ: ಪೆಟ್ರೋಲ್ ಬೆಲೆ ತೆರಿಗೆ ಏರಿಕೆ ನಿರ್ಧಾರ ವನ್ನು ಕ್ಯಾಬಿನೆಟ್​ನಲ್ಲೇ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದರು. ಕಾಂಗ್ರೆಸ್ ಪಕ್ಷ ಇಂಧನ ದರ ಏರಿಕೆ ಆಕ್ಷೇಪ ವ್ಯಕ್ತಪಡಿಸಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಯಾರೂ ನನ್ನ ಮುಂದೆ ಮಾತನಾಡಿಲ್ಲ. ಕ್ಯಾಬಿನೆಟ್ ತೀರ್ಮಾನ ಮಾಡಿಯೇ ದರ ಏರಿಕೆ ಮಾಡಿರೋದು. 10 ಪೈಸೆ ಜನರಿಗೆ ಕೊಡೋದು ಕಷ್ಟವೇ ಎಂದು ಪ್ರಶ್ನಿಸಿದರು.

CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು