• A
  • A
  • A
ಸಾಮಾಜಿಕ ಜಾಲತಾಣ ಬಳಸುವಾಗ ನಾಳೆಯಿಂದ ಎಚ್ಚರವಿರಲಿ!

ಬೆಂಗಳೂರು: ಆಧುನಿಕ ತಂತ್ರಜ್ಞಾನದ ಸಂಪರ್ಕ ವಿದ್ಯುನ್ಮಾನ ಯಂತ್ರಗಳ ಎಲ್ಲ ಮಾಹಿತಿಗಳು ಸೈಬರ್ ಕ್ರೈಂ ಘಟಕದ ಕಣ್ಗಾವಲಿನಲ್ಲಿ ದಾಖಲಾಗಲಿದೆ.

ಸಂಗ್ರಹ ಚಿತ್ರ


ದೂರ ಸಂಪರ್ಕದ ನಿಯಂತ್ರಣ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ಘಟಕ, ಸಾರ್ವಜನಿಕರು ಬಳಸುವ ಎಲ್ಲ ದೂರವಾಣಿಗಳನ್ನು ದಾಖಲು ಮಾಡಿಕೊಳ್ಳುತ್ತದೆ. ವಾಟ್ಸಪ್ ಸಂದೇಶವನ್ನು ಮೇಲ್ವಿಚಾರಣೆ ಮಾಡುತ್ತದೆ. ಟ್ವಿಟರ್ ಸಂದೇಶ, ಫೇಸ್​ಬುಕ್ ಮಾಹಿತಿ ವಿನಿಮಯ ಜೊತೆಗೆ ಎಲ್ಲ ಸಾಮಾಜಿಕ ಜಾಲತಾಣಗಳ ಮೊಬೈಲ್ ಸಂಪರ್ಕದ ಮಾಹಿತಿಗಳನ್ನು ಸೈಬರ್ ಘಟಕ ಮೇಲ್ವಿಚಾರಣೆ ನಡೆಸಲಿದೆ.
ಈ ಎಲ್ಲ ಸಂಪರ್ಕಗಳ ಸಾರ್ವಜನಿಕರು ಮಾಹಿತಿ ವಿನಿಮಯ ಮಾಡಿಕೊಳ್ಳುವ ಹಾಗೂ ರವಾನೆ ಮಾಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು. ಅನಾವ್ಯಶಕ ಸಂದೇಶಗಳ ಮೇಲೆ ನಿಯಂತ್ರಣ ತರಲು ಸೈಬರ್ ಕ್ರೈಂ ಘಟಕಗಳು ನಾಳೆಯಿಂದ ಕಾರ್ಯಪ್ರವೃತ್ತಗೊಳ್ಳಲಿವೆ. ಪೊಲೀಸ್ ಸೈಬರ್ ಅಪರಾಧ ಘಟಕ ತ್ವರಿತವಾಗಿ ಕಾರ್ಯಪ್ರವೃತ್ತಗೊಂಡು ಇನ್ನು ಮುಂದೆ ಎಲ್ಲ ದೂರ ಸಂಪರ್ಕಗಳ ಮಾಹಿತಿ ದಾಖಲು ಜೊತೆಗೆ ಸಂಪೂರ್ಣ ಕಣ್ಗಾವಲಿನಲ್ಲಿ ಕಾರ್ಯಪ್ರವೃತ್ತವಾಗಲಿದೆ.


ಅನಾವಶ್ಯಕವಾಗಿ ಮಾಹಿತಿ ಕಳುಹಿಸದಂತೆ ಮನವಿ ಮಾಡಿರುವ ಸೈಬರ್ ಘಟಕ, ಪ್ರತಿಯೊಬ್ಬರು ಎಲ್ಲ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ವಿವಿಧ ತಂಡಗಳು ತಮ್ಮದೇ ಟ್ವಿಟರ್, ಫೇಸ್​ಬುಕ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಹೊಂದಿರುವ ಘಟಕಗಳ ಮೇಲೆಯೂ ಸೈಬರ್ ಘಟಕ ನಿಗಾ ಇಡುತ್ತದೆ. ಮಾಹಿತಿ ವಿನಿಯಮ ಜನಸಾಮಾನ್ಯರ, ಸಾರ್ವಜನಿಕರಿಗೆ ಆತಂಕ ಉಂಟು ಮಾಡುವಂತಹ ಕಾರ್ಯಗಳಲ್ಲಿ ತೊಡಗಿಕೊಳ್ಳಬಾರದು ಎಂದು ಸೂಚನೆ ನೀಡಿದೆ.

ಪ್ರಧಾನಮಂತ್ರಿ, ಕೇಂದ್ರ ಸರ್ಕಾರ ಹಾಗೂ ರಾಜಕೀಯ ಪಕ್ಷಗಳ ವಿಚಾರಗಳ ಬಗ್ಗೆ ವಿಡಿಯೋ ಅಥವಾ ಇತರೆ ಯಾವುದೇ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳು ಪ್ರಕಟಿಸುವಂತಿಲ್ಲವೆಂದು ಸೈಬರ್ ಘಟಕ ಎಚ್ಚರಿಕೆ ನೀಡಿದೆ.


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಕರುನಾಡ ಕುರುಕ್ಷೇತ್ರ

  ಪ್ರಮುಖ ನಗರಗಳು