• A
  • A
  • A
ಸೆಲ್ಫಿ ಸ್ಪಾಟಾದ 32 ವರ್ಷಗಳ ಹಿಂದೆ ಜಪ್ತಿಯಾದ ಲಾರಿ... ಅಷ್ಟಕ್ಕೂ ಯಾರದಿದು!?

ಚಾಮರಾಜನಗರ: ಕಾಡುಗಳ್ಳ ವೀರಪ್ಪನ್ ಸತ್ತು ಹಲವು ವರ್ಷಗಳೇ ಕಳೆದರೂ ತಮಿಳುನಾಡು ಮತ್ತು ಕರ್ನಾಟಕದ ಗಡಿಭಾಗಗಳಲ್ಲಿ ಇನ್ನೂ ಆತನ ನೆನಪು ಮಾಸಿಲ್ಲ, ಸತ್ತ ನಂತರವೂ ಕೆಲವು ಘಟನೆಗಳಿಗೆ ಆತ ತಳುಕು ಹಾಕಿಕೊಂಡಿರುವುದಕ್ಕೆ ಇಲ್ಲಿದೆ ಒಂದು ನಿದರ್ಶನ.


32 ವರ್ಷದ ಹಿಂದೆ ಎಂದರೆ ಸುಮಾರು 1986-87ರಲ್ಲಿ ಕರಿಕಲ್ಲು ಸಾಗಿಸುತ್ತಿದ್ದ ಲಾರಿಯೊಂದು ತಮಿಳುನಾಡು ರಾಜ್ಯಕ್ಕೆ ಒಳಪಡುವ ಆಸನೂರು ಚೆಕ್‍ಪೋಸ್ಟ್ ಬಳಿ ಜಪ್ತಿಯಾಗುತ್ತದೆ. ಆ ಜಪ್ತಿಯಾದ ಲಾರಿ ಇಂದು ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿ ಹಾಗೂ ಸೆಲ್ಫಿ ಸ್ಪಾಟಾಗಿ ಪರಿವರ್ತನೆಯಾಗಿದೆ.

ಹೌದು, ಇದು ಅಚ್ಚರಿಯಾದರೂ ಸತ್ಯ! ಜಪ್ತಿಯಾದ ಲಾರಿಗೆ ಕಾಡುಗಳ್ಳ ವೀರಪ್ಪನ್ ಹೆಸರು ತಳುಕು ಹಾಕಲಾಗಿದ್ದು, ವೀರಪ್ಪನ್ ಸಹಚರರು ಈ ಕರಿಕಲ್ಲನ್ನು ಸಾಗಿಸುತ್ತಿದ್ದರು. ಜಪ್ತಿಯಾದ ಲಾರಿಯನ್ನು ವೀರಪ್ಪನ್ ಭಯಕ್ಕೆ ಲಾರಿಯನ್ನಾಗಲಿ, ಕರಿಕಲ್ಲನಾಗಲಿ ಹರಾಜಿಗಿಡಲಿಲ್ಲ ಎಂಬ ವದಂತಿ ಇದೆ.


ನಿಂತಲ್ಲೇ ನಿಂತಿರುವ ಲಾರಿ:

ವೀರಪ್ಪನ್ ಕಾರ್ಯಾಚರಣೆಗೆ ಶಂಕರ್ ಬಿದರಿ ಬಂದ ಬಳಿಕ ಗಣಿಗಾರಿಕೆಯನ್ನು ನಿಲ್ಲಿಸಿ 144 ಸೆಕ್ಷನ್ ಜಾರಿ ಮಾಡಿದ್ದರು. 1994ಕ್ಕಿಂತ ಮುಂಚೆ ಚಾಮರಾಜನಗರದಲ್ಲಿ ಯಥೇಚ್ಛವಾಗಿ ಕರಿಕಲ್ಲಿನ ಗಣಿಗಾರಿಕೆ ನಡೆಯುತ್ತಿತ್ತು. ಆ ವೇಳೆ, ಚಾಮರಾಜನಗರದಿಂದ ಬರುತ್ತಿದ್ದ ಲಾರಿಯೊಂದನ್ನು ಆಸನೂರು ಚೆಕ್‍ಪೋಸ್ಟ್ ಬಳಿ ತಡೆದಾಗ ಲಾರಿಯನ್ನು ಪಕ್ಕಕ್ಕೆ ನಿಲ್ಲಿಸಿ ಚಾಲಕ ಪರಾರಿಯಾಗುತ್ತಾನೆ. ಅಲ್ಲದೇ ಇದಕ್ಕೆ ಯಾವುದೇ ಡಾಕ್ಯುಮೆಂಟ್ಸ್ ಗಳಾಗಲಿ ಇರುವುದಿಲ್ಲ, ಈ ಪ್ರಕರಣ ಕಂದಾಯ ಇಲಾಖೆಗೆ ಒಳಪಡುತ್ತಿದ್ದರಿಂದ ಚೆಕ್‍ಪೋಸ್ಟ್ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಾಗಲಿಲ್ಲ ಎಂದು 'ಈನಾಡು ಇಂಡಿಯಾ'ಗೆ ತಮಿಳುನಾಡಿನ ಉನ್ನತಮೂಲಗಳು ಮಾಹಿತಿ ನೀಡಿವೆ.

ವದಂತಿಗೆ ಮದ್ದಿಲ್ಲ:

ಜಪ್ತಿಯಾಗಿರುವ ಲಾರಿ ವೀರಪ್ಪನ್‍ದೇ ಎಂಬ ವದಂತಿ ಬಲವಾಗಿ ಬೇರೂರಿವುದರಿಂದ ಪೊಲೀಸರ ಕಣ್ತಪ್ಪಿಸಿ ಪ್ರವಾಸಿಗರು ಇದರ ಮುಂದೆ ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಪ್ರವಾಸಿಗರಿಗೆ ಈ ವಿಷಯ ಗೊತ್ತಿಲ್ಲದಿದ್ದರೂ ಕೆಲವರು ಉಸುರುವುದರಿಂದ ವದಂತಿ ಜೋರಾಗೆ ಹಬ್ಬುತ್ತಿದೆ.

ಸೆಲ್ಫಿಯುಗದಲ್ಲಿ ಜಪ್ತಿಯಾದ ಲಾರಿಗೂ ಅದೃಷ್ಟ ಖುಲಾಯಿಸಿದ್ದು, ಎಲ್ಲರ ನಗೆಯ ಹಿಂದೆ ಕರಿಕಲ್ಲನ್ನು ಹೊತ್ತುಕೊಂಡು ಗಿಡ-ಗಂಟಿಗಳನ್ನು ಬೆಳೆಸಿಕೊಂಡು ಲಾರಿ ಮೌನವಾಗಿ ನಿಂತಿರುವುದಂತೂ ಸತ್ಯ...!


CLOSE COMMENT

ADD COMMENT

To read stories offline: Download Eenaduindia app.

SECTIONS:

  ಹೋಮ್

  ರಾಜ್ಯ

  ದೇಶ

  ವಿದೇಶ

  ವಾಣಿಜ್ಯ

  ಕ್ರೈಂ

  ಕ್ರೀಡೆ

  ಸಿನಿಲೋಕ

  ಕಾಮನಬಿಲ್ಲು

  ಸ್ತ್ರೀ ಲಹರಿ

  ಗ್ಯಾಲರಿ

  ಪ್ರವಾಸ

  ಪ್ರಮುಖ ನಗರಗಳು